ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಯಡಿಯೂರಪ್ಪನವರ ಶಿವಮೊಗ್ಗ ಜಿಲ್ಲಾ ಪ್ರವಾಸದ ಮಾಹಿತಿ ಇಲ್ಲಿದೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 18: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಾವು ಪ್ರತಿನಿಧಿಸುವ ಕ್ಷೇತ್ರ ಶಿಕಾರಿಪುರಕ್ಕೆ ಅ.18ರ ಭಾನುವಾರ ಆಗಮಿಸಲಿದ್ದು, ಅ.19 (ಸೋಮವಾರ) ತಾಲೂಕಿನ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ನಡೆಸಲಿದ್ದಾರೆ.

ಶಿಕಾರಿಪುರ ತಾಲೂಕಿನ ಕಸಬಾ (ಕಲ್ಲುವಡ್ಡುಹಳ್ಳ) ಏತ ನೀರಾವರಿ ಯೋಜನೆ ಅಂದಾಜು ವೆಚ್ಚ ರೂ.125.17 ಕೋಟಿ. ಶಿವಶರಣೆ ಅಕ್ಕಮಹಾದೇವಿ ಜನ್ಮ ಸ್ಥಳದ ಸಮಗ್ರ ಅಭಿವೃದ್ಧಿ ಕಾಮಗಾರಿ ಅಂದಾಜು ವೆಚ್ಚ 14.80 ಕೋಟಿ ರುಪಾಯಿಗಳ ಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಚಾಲನೆ ಸಿಗಲಿದೆ.

ಚಾಲನೆ ಸಿಗಲಿರುವ ಕಾಮಗಾರಿಗಳು

ಚಾಲನೆ ಸಿಗಲಿರುವ ಕಾಮಗಾರಿಗಳು

ಶಿಕಾರಿಪುರ ತಾ. ಸನ್ಯಾಸಿಕೊಪ್ಪ ಏತ ನೀರಾವರಿ ಯೋಜನೆ ಮುಖ್ಯ ನಾಲೆಯ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ಕವರ್ ಡಕ್ಟ್ ನಿರ್ಮಾಣ ಕಾಮಗಾರಿ- ಅಂದಾಜು ವೆಚ್ಚ 16.41 ಕೋಟಿ ರುಪಾಯಿ.

ಕೊನೆಗೂ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!ಕೊನೆಗೂ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!

ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಸಮಗ್ರ ಅಭಿವೃದ್ಧಿ ಕಾಮಗಾರಿ ಅಂದಾಜು ವೆಚ್ಚ ರೂ. 5.00 ಕೋಟಿ. 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಭಕ್ತನಕೊಪ್ಪ- ಅಂದಾಜು ವೆಚ್ಚ ರೂ. 8.33 ಕೋಟಿ. 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಅಂಬಾರಕೊಪ್ಪ- ಅಂದಾಜು ವೆಚ್ಚ ರೂ. 9.10 ಕೋಟಿ.

ಈಸೂರು ರಸ್ತೆ ಅಭಿವೃದ್ಧಿ

ಈಸೂರು ರಸ್ತೆ ಅಭಿವೃದ್ಧಿ

ಶಿಕಾರಿಪುರ ತಾ.ಎಸ್.ಹೆಚ್-57 ಹತ್ತಿರ ಭದ್ರಾಪುರದಿಂದ ಗಾಮ, ಈಸೂರು, ಹುಣಸೆಕೊಪ್ಪ ಮುಖಾಂತರ ಮಾಡ್ರಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂದಾಜು ವೆಚ್ಚ ರೂ. 6.95 ಕೋಟಿ.

ಶಿಕಾರಿಪುರ ತಾ.ಕೊರಟಿಕೆರೆ ಎಂ.ಡಿ.ಆರ್ ಯಿಂದ ಚನ್ನಬಸವೇಶ್ವರ ದೇವಸ್ಥಾನ, ಹೊಸಮುತ್ತಗಿ ಮುಖಾಂತರ ಹಕ್ಕಲಿಕೊಪ್ಪವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂದಾಜು ವೆಚ್ಚ ರೂ. 2.7 ಕೋಟಿ.

ಕುರಿ-ಕೋಳಿ ಮಳಿಗೆಗಳ ಸಂಕೀರ್ಣದ ಕಾಮಗಾರಿ

ಕುರಿ-ಕೋಳಿ ಮಳಿಗೆಗಳ ಸಂಕೀರ್ಣದ ಕಾಮಗಾರಿ

ಶಿಕಾರಿಪುರ ತಾ.ಎಸ್.ಹೆಚ್. ಹತ್ತಿರ ಹುಲುಗಿನಕೊಪ್ಪದಿಂದ ಮುತ್ತಗಿ, ಬಿದರಕೊಪ್ಪ, ಸಾದಾಪುರ ಮುಖಾಂತರ ಕಡೇನಂದಿಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂದಾಜು ವೆಚ್ಚ ರೂ. 5.91 ಕೋಟಿ.

ಸ್ವಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಸ್ವಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಶಿಕಾರಿಪುರ ತಾ. ಬಿಳಕಿ ಎಂ.ಡಿ.ಆರ್ ಯಿಂದ ಕಾಡೆತ್ತಿನಹಳ್ಳಿ ಮುಖಾಂತರ ಸಿಡ್ಡಿಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂದಾಜು ವೆಚ್ಚ ರೂ. 4.6 ಕೋಟಿ. ಶಿರಾಳಕೊಪ್ಪ ಪಟ್ಟಣ ಪಂಚಾಯತಿಯ ಕುರಿ-ಕೋಳಿ ಮಳಿಗೆಗಳ ಸಂಕೀರ್ಣದ ಕಾಮಗಾರಿ- ಅಂದಾಜು ವೆಚ್ಚ ರೂ. 1.05 ಕೋಟಿ.

ಉದ್ಘಾಟನೆಯಾಗಲಿರುವ ಕಾಮಗಾರಿಗಳು

ಉದ್ಘಾಟನೆಯಾಗಲಿರುವ ಕಾಮಗಾರಿಗಳು

ತೋಗರ್ಸಿ ಪಶು ಚಿಕಿತ್ಸಾಲಯ ಕಟ್ಟಡ, ಬಿಳಕಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ, ಶಿಕಾರಿಪುರ ಟೌನ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಶಿರಾಳಕೊಪ್ಪ ಟೌನ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ ಬಳ್ಳಿಗಾವಿಯಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ಅಳವಡಿಸಿರುವ ಕಸ ಸಂಸ್ಕರಣ ಯಂತ್ರ ಮತ್ತು ಬೇಲಿಂಗ್ ಯಂತ್ರದ ಉದ್ಘಾಟನೆ ನಡೆಯಲಿದೆ.

English summary
Chief Minister BS Yediyurappa will arrives to Shikaripura constituency on Sunday, October 18, and will be inaugurating and launching various works in Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X