ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿನ ಬಗ್ಗೆ ಡಾ.ಗಿರಿಧರ್ ಕಜೆ ಅವರ ಸಲಹೆ ಇಲ್ಲಿದೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 29: ಕೊರೊನಾ ಸೋಂಕಿನ‌ ಕುರಿತು ಜನರಲ್ಲಿ‌ ಆತಂಕ‌, ಭಯಭೀತ ವಾತಾವರಣ ಇದ್ದು, ಕೆಲವರು ನಿರ್ಲಕ್ಷ್ಯ ಭಾವನೆಯನ್ನು ತೊರಿದ್ದಾರೆ. ಈ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ಆದರೆ ಜಾಗೃತಿ‌ ಇರಲಿ ಎಂದು ಆಯುರ್ವೇದ ವೈದ್ಯರಾದ ಡಾ.ಗಿರಿಧರ್ ಕಜೆ ಹೇಳಿದರು.

Recommended Video

Corona ಚಳಿಯಲ್ಲಿ ಹೆಚ್ಚಾಗಲಿದೆಯಾ ? WHO ಹೇಳೋದೇನು | Oneindia kannada

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪನವರು ವಿತರಿಸುತ್ತಿರುವ ಉಚಿತ ಆಯುರ್ವೇದಿಕ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು, ಈ ಕಿಟ್ ನಲ್ಲಿ ಸಂಶಧನವಟಿ ಎಂಬ ರೋಗ ನಿರೋಧಕ ಶಕ್ತಿ ಇದೆ. ಇದರಲ್ಲಿ ಅಮೃತ ಬಳ್ಳಿಯನ್ನು ಬಳಸಲಾಗುತ್ತದೆ. ಈ ಬಳ್ಳಿ ನಮ್ಮ ದೇಹದಲ್ಲಿ ವೈರಸ್ ಗಳನ್ನು ಹುಡುಕಿ ಕೊಲ್ಲುವ ಶಕ್ತಿಯಿದೆ ಎಂದರು.

ಕೋವಿಡ್-19 ವಿರುದ್ಧ ಅಸೋಫಿನ್ ಹೋಮಿಯೋಪತಿ ಔಷಧ

ಕೋವಿಡ್-19 ವಿರುದ್ಧ ಅಸೋಫಿನ್ ಹೋಮಿಯೋಪತಿ ಔಷಧ

ಆಯುಷ್ ಕಷಾಯದಲ್ಲಿ ತುಳಸಿ ಎಂಬ ರೋಗ ನಿರೋಧಕ ಶಕ್ತಿ ಸೂಕ್ಷ್ಮ ಕ್ರಿಮಿಗಳನ್ನು ಕೊಲ್ಲುತ್ತದೆ. ದಾಲ್ಚಿನ್ನಿ, ಶುಂಠಿ, ಕಾಳು ಮೆಣಸುಗಳನ್ನು ಬಳಸಿ ಕಷಾಯಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಅಸೋಫಿನ್ ಹೋಮಿಯೋಪತಿ ಔಷಧ ಬಳಸಿಕೊಂಡು ಕೋವಿಡ್-19 ವಿರುದ್ಧ ಬಳಸಲಾಗುತ್ತಿದೆ. ಪ್ರತಿ ಮನೆಯ ಸದಸ್ಯರಿಗೆ ನೀಡಲಾಗುತ್ತಿರುವ ಈ ಕಾರ್ಯಕ್ರಮ ಅತ್ಯಂತ ಜವಾಬ್ದಾರಿಯುತವಾಗಿದೆ ಎಂದು ಹೇಳಿದರು.

ಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನ

ಆಯುರ್ವೇದ ಔಷಧಿಗಳಿಂದ ರೋಗ ನಿರೋಧಕ ಶಕ್ತಿ ವೃದ್ಧಿ

ಆಯುರ್ವೇದ ಔಷಧಿಗಳಿಂದ ರೋಗ ನಿರೋಧಕ ಶಕ್ತಿ ವೃದ್ಧಿ

ನಮಗೆ ಎಷ್ಟೇ ರೋಗ ನಿರೋಧಕವಿದ್ದರೂ ಸಹ ವೈರಸ್ ಅಟ್ಯಾಕ್ ಆಗುತ್ತದೆ. ಈ ಆಯುರ್ವೇದ ಔಷಧಿಗಳು ಸಂಪೂರ್ಣವಾಗಿ ವೈರಸ್ ನಿವಾರಣೆ ಮಾಡಲಾಗದಿದ್ದರೂ ಸಹ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆ ಮೂಲಕ ನಮ್ಮ ದೇಹವನ್ನು ಈ ರೋಗದ ವಿರುದ್ಧ ಹೋರಾಡಲು ಸಜ್ಜುಗೊಳಿಸಬಹುದಾಗಿದೆ ಎಂದರು.

ಭಾರತೀಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ

ಭಾರತೀಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ

ಕಾಮನ್ ವೈರಲ್ ಫೀವರ್ ಬಂದರೆ ನಮ್ಮ ಭಾರತೀಯರಿಗೆ ತಗಲುವುದು ಕಡಿಮೆ. ಇಲ್ಲಿನ ಮಕ್ಕಳು ಧೂಳಿನ ಕಣದಲ್ಲಿ ಆಟ ಆಡುತ್ತಾ ಬೆಳೆಯುತ್ತವೆ. ಅದೇ ವಿದೇಶಿಗರು ಹುಲ್ಲುಗಾವಲಿನಲ್ಲಿ ಆಟವಾಡಿಕೊಂಡು ಬೆಳೆಯುತ್ತಾರೆ. ಹಾಗಾಗಿ ಭಾರತೀಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಧೂಳಿನ ಕಣ ವಿದೇಶಿಗರಿಗೆ ತಗಲುವುದಿಲ್ಲ ಇದರ ಜೊತೆಗೆ ಸಾಂಬಾರು ಪದಾರ್ಥದಲ್ಲಿ ಬಳಸುವ ಪದಾರ್ಥಗಳಲ್ಲಿ ಸಹ ರೋಗ ನಿರೋಧಕವಿರುವುದರಿಂದ ಕೊರೊನಾ ವೈರಸ್ ಹಾಗೂ ಡೆಂಗ್ಯೂ ತಗಲುವುದಿಲ್ಲವೆಂದರು.

ಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆ

ಕುದಿಯುವ ನೀರಿಗೆ ತುಳಸಿ ಎಲೆ ಹಾಕಿ ಕುಡಿಯಬೇಕು

ಕುದಿಯುವ ನೀರಿಗೆ ತುಳಸಿ ಎಲೆ ಹಾಕಿ ಕುಡಿಯಬೇಕು

ಕೊರೊನಾ ವೈರಸ್ ನಿಂದಾಗಿ ಅಮೇರಿಕಾದಲ್ಲಿ ಶೇ.7ರಷ್ಟು ಜನ ಸತ್ತರು, ಇತರೆಡೆ ಶೇ.15ರಷ್ಟು ಜನ ಸತ್ತರು. ಆದರೆ ನಮ್ಮಲ್ಲಿನ ಸಾವಿನ ಶೇಕಡವಾರು ಹೋಲಿಸಿದರೆ ಇವರಿಗೆಲ್ಲರಿಗಿಂತ ಕಡಿಮೆಯಾಗಿದೆ ಎಂಬ ಮಾಹಿತಿ ಹಂಚಿಕೊಂಡರು. ಮೌಲ್ಯವರ್ಧಿತ ನೀರು ಬಳಸಬೇಕು, ಕುದಿಯುವ ನೀರಿಗೆ ತುಳಸಿ ಬಳಸಿ, ಹಾಲಿನ ಮೌಲ್ಯವರ್ಧನೆ ಮಾಡಬೇಕು, ಕಷಾಯವನ್ನು ಕುಡಿಯುರಿ, ಅಮೃತ ಬಳ್ಳಿ, ನೆಲನಲ್ಲಿ, ಭದ್ರ ಮುಷ್ಠ 10 ದಿನ ಬಳಸಿ ಮತ್ತೆ 10 ದಿನ ನಿಲ್ಲಿಸಿ ಮತ್ತೆ ಬಳಸಿದರೆ ರೋಗ ನಿರೋಧಕ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಹಿತ್ತಲ ಗಿಡವೇ ಮದ್ದು: ಡಾ. ಗಿರಿಧರ್ ಕಜೆ ಔಷಧಿಗೆ ಸರಕಾರದಿಂದ ಗ್ರೀನ್ ಸಿಗ್ನಲ್?ಹಿತ್ತಲ ಗಿಡವೇ ಮದ್ದು: ಡಾ. ಗಿರಿಧರ್ ಕಜೆ ಔಷಧಿಗೆ ಸರಕಾರದಿಂದ ಗ್ರೀನ್ ಸಿಗ್ನಲ್?

English summary
Ayurvedic physician Dr Giridhar Kaje said the coronavirus should not be ignored but there should be awareness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X