• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಗ್ಗೋಡು ನೀನಾಸಂ ಸಂಸ್ಥಾಪಕ ಕೆವಿ ಸುಬ್ಬಣ್ಣ ಪತ್ನಿ ಶೈಲಜಾ ನಿಧನ

|

ಹೆಗ್ಗೋಡು, ಮಾರ್ಚ್ 28: ಹೆಗ್ಗೋಡು ನೀನಾಸಂ ಸಂಸ್ಥಾಪಕ ಕವಿ ಸುಬ್ಬಣ್ಣ ಅವರ ಪತ್ನಿ ಶೈಲಜಾ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ನೀನಾಸಂ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಮೃತರ ಅಂತ್ಯಕ್ರಿಯೆ ಹೆಗ್ಗೋಡಿನಲ್ಲಿ ಭಾನುವಾರ ನೆರವೇರಿದೆ.

ನೀಲಕಂಠೇಶ್ವರ ನಾಟ್ಯ ಸಂಘವನ್ನು ರಂಗಕರ್ಮಿ ಕೆವಿ ಸುಬ್ಬಣ್ಣ 1949ರಲ್ಲಿ ಸ್ಥಾಪನೆ ಮಾಡಿದ್ದರು. ಹೆಗ್ಗೋಡಿನ ಈ ರಂಗಸಜ್ಜಿಕೆ ಮಹಾನ್ ಕಲಾವಿದರನ್ನು ತಯಾರು ಮಾಡಿದೆ.

ಶೈಲಜಾ ಅವರ ಪುತ್ರ ಕೆವಿ ಅಕ್ಷರ ಹಾಗೂ ಪತಿ ಕೆವಿ ಸುಬ್ಬಣ್ಣ ಅವರು ನೀನಾಸಂ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾಗ ಮನೆ ಹಾಗೂ ತೋಟದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಶೈಲಜಾ ನೋಡಿಕೊಳ್ಳುತ್ತಿದ್ದರು.

ಈ ಕಾರಣದಿಂದಲೇ ಅವರಿಬ್ಬರು ನೀನಾಸಂನಲ್ಲಿ ಹೆಚ್ಚು ಸಮಯ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿತ್ತು.

English summary
Heggodu Ninasam Founder KV Subbanna Wife Shylaja Passed Away on Sunday March 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X