ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆನಾಡಿನಲ್ಲಿ ಮಳೆಯಬ್ಬರ: ಗಾಜನೂರು ಜಲಾಶಯದಿಂದ ತುಂಗಾ ನದಿಗೆ ನೀರು ಬಿಡುಗಡೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 14: ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಶಿವಮೊಗ್ಗದ ಗಾಜನೂರು ಜಲಾಶಯದಿಂದ ತುಂಗಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯದ 22 ಕ್ರಸ್ಟ್‌ಗೇಟ್‌ಗಳ ಪೈಕಿ 21 ಗೇಟ್‌ಗಳ ಮೂಲಕ 2020 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಿದೆ.

Heavy Rain In Karnataka: Water Released From Gajanuru Reservoir Into Tunga River

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯ ನದಿಗಳು ಹಾಗೂ ಡ್ಯಾಂಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.

Heavy Rain In Karnataka: Water Released From Gajanuru Reservoir Into Tunga River

ಗಾಜನೂರಿನ ತುಂಗಾ ಜಲಾಶಯದಿಂದ ವಿದ್ಯುತ್ ಉತ್ಪಾದನೆಗೆ 5300 ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸಿದ್ದು, ತುಂಗಾ ಜಲಾಶಯದಿಂದ ನದಿಗೆ ಈ ವರ್ಷದಲ್ಲಿ ಒಟ್ಟು 7300 ಕ್ಯೂಸೆಕ್ಸ್ ನಷ್ಟು ನೀರು ಬಿಡುಗಡೆ ಮಾಡಿದೆ.

"ಕಳೆದ ತಿಂಗಳಲ್ಲೇ ತುಂಗಾ ಜಲಾಶಯ ಗರಿಷ್ಟ ಮಟ್ಟ ತಲುಪಿತ್ತು. ತುಂಗಾ ಜಲಾಶಯ ಜಲಾಶಯದ ಗರಿಷ್ಟ ಮಟ್ಟ 3.24 ಟಿಎಂಸಿ ಸಾಮರ್ಥ್ಯದದ್ದಾಗಿದೆ," ಎಂದು ಅಪ್ಪರ್-ತುಂಗಾ ಯೋಜನೆಯ ಎಂಜಿನಿಯರ್ ಹರೀಶ್ ಹೇಳಿದರು.

English summary
Water has been released into the Tunga River from the Gajanur reservoir of Shivamogga, due to raining in the Malenadu region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X