ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಜರಾಯಿ ದೇವಾಲಯಗಳ ಅರ್ಚಕರಿಗೆ ಆರೋಗ್ಯ ವಿಮೆ

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 05 : "ಮುಜರಾಯಿ ದೇವಾಲಯಗಳ ಅರ್ಚಕರಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಜಾರಿಗೊಳಿಸುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು" ಎಂದು ಮುಜರಾಯಿ, ಒಳನಾಡು ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆಯನ್ನು ಸಚಿವರು ನಡೆಸಿದರು. "ಜಿಲ್ಲೆಯಲ್ಲಿ ಒಟ್ಟು 523 ದೇವಾಲಯಗಳಿಗೆ ತಸ್ತೀಕ್ ಯೋಜನೆಯಡಿ ವಾರ್ಷಿಕ 48 ಸಾವಿರ ರೂ. ನೀಡಲಾಗುತ್ತಿದೆ. ಇದರಲ್ಲಿ ಪೂಜಾ ಸಾಮಾಗ್ರಿ ಖರೀದಿಗೆ ಹಾಗೂ ಉಳಿದ ಮೊತ್ತವನ್ನು ಅರ್ಚಕರಿಗೆ ಗೌರವ ಧನವಾಗಿ ಬಳಸಲಾಗುತ್ತಿದೆ" ಎಂದರು.

ಒಂದೇ ತಿಂಗಳಲ್ಲಿ ಕೋಟಿ ದಾಟಿದೆ ಮಲೆಮಹದೇಶ್ವರನ ಆದಾಯಒಂದೇ ತಿಂಗಳಲ್ಲಿ ಕೋಟಿ ದಾಟಿದೆ ಮಲೆಮಹದೇಶ್ವರನ ಆದಾಯ

"ಶಿವಮೊಗ್ಗ ನಗರದ ಕೋಟೆ ಆಂಜನೇಯ ದೇವಾಲಯದ ಜಮೀನಿನ ಸರ್ವೇ ಕಾರ್ಯ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಮುಜರಾಯಿ ದೇವಾಲಯಗಳ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಅವರಿಗಿದ್ದ ಹಣಕಾಸು ಅಧಿಕಾರವನ್ನು 50ಲಕ್ಷ ರೂ. ನಿಂದ ಒಂದು ಕೋಟಿಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.

ಉಡುಪಿಯ ಕೃಷ್ಣನ‌ ಕಂಡೀರಾ? ಅಷ್ಟಮಿಯ ಚಕ್ಕುಲಿ ತಿಂದೀರಾ?ಉಡುಪಿಯ ಕೃಷ್ಣನ‌ ಕಂಡೀರಾ? ಅಷ್ಟಮಿಯ ಚಕ್ಕುಲಿ ತಿಂದೀರಾ?

Health Insurance For Muzarai Temple Priest

"ದೇವಾಲಯಗಳ ಪುನರುಜ್ಜೀವನ ಇತ್ಯಾದಿ ಕುಶಲ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮುಜರಾಯಿ ಇಲಾಖೆಯಲ್ಲಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಆರಂಭಿಸಲು ಉದ್ದೇಶಿಸಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.

ಹಿಂದು ದೇಗುಲಗಳ ಮೇಲೆ ಜಗನ್ ಕಣ್ಣು, ಮೋಹನದಾಸ್ ಪೈ ಟ್ವೀಟೇಟುಹಿಂದು ದೇಗುಲಗಳ ಮೇಲೆ ಜಗನ್ ಕಣ್ಣು, ಮೋಹನದಾಸ್ ಪೈ ಟ್ವೀಟೇಟು

"ಹಣಗೆರೆಕಟ್ಟೆಯಲ್ಲಿರುವ ಆರಾಧನಾ ಕೇಂದ್ರದಲ್ಲಿ ಭಕ್ತಾಧಿಗಳಿಗೆ ಸೂಕ್ತ ಸೌಲಭ್ಯ ಒದಗಿಸಲು ಯೋಜನೆ ರೂಪಿಸಬೇಕು. ಪಾರ್ಕಿಂಗ್, ಪ್ರಾಣಿ ಬಲಿಗೆ ಸೂಕ್ತ ವ್ಯವಸ್ಥೆ, ಭದ್ರತೆ, ಅಡಿಗೆ ವ್ಯವಸ್ಥೆ, ಸ್ವಚ್ಛತೆಗೆ ಸಮಗ್ರ ಯೋಜನೆ ಅಗತ್ಯವಿದೆ' ಎಂದು ಸಚಿವರು ಸೂಚಿಸಿದರು.

English summary
Karnataka Muzrai department minister Kota Srinivas Poojary said that we have proposal to issue health insurance for muzarai temple priest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X