ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಸಿಲುಕಿಕೊಂಡ ಹಸಿರುಮಕ್ಕಿ ಲಾಂಚ್, ಪ್ರಯಾಣಿಕರ ಆತಂಕ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 06: ಮಲೆನಾಡು ಭಾಗದಲ್ಲಿ ಬೀಸುತ್ತಿರುವ ಅತಿಯಾದ ಗಾಳಿಯಿಂದಾಗಿ ಶರಾವತಿ ನದಿ ನೀರಿನ ನಡುವೆ ಹಸಿರುಮಕ್ಕಿ ಲಾಂಚ್ ಸಿಲುಕಿಕೊಂಡಿದ್ದು, ಪ್ರಯಾಣಿಕರು ಆತಂಕದಲ್ಲಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಹಸಿರುಮಕ್ಕಿ ದಡದಿಂದ ನಿಟ್ಟೂರು ಕಡೆ ಹೊರಟ ಲಾಂಚ್, ಅತಿಯಾದ ಗಾಳಿಯಿಂದಾಗಿ ನದಿಯ ನಡುವಿನಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯ ಪಿಲ್ಲರ್ ಗೆ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ. ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನದಿಂದ ಭೀಕರ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಲಾಂಚ್ ನಲ್ಲಿರುವ ಪ್ರಯಾಣಿಕರು ಅತಂತ್ರರಾಗಿದ್ದು, ಮೊಬೈಲ್ ಸಂಪರ್ಕಕ್ಕೆ ಸಿಗದೇ ಪ್ರಯಾಣಿಕರು ಪರದಾಡುವಂತಾಗಿದೆ. ಕ್ರೈನ್ ಮೂಲಕ ಲಾಂಚ್ ಅನ್ನು ದಡಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.

 Shivamoga: Hasirumakki Launch Got Stuck In Sharawati Backwater, Anxiety Among Travelers

ಅದರಂತೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ ಹಲವು ಗಂಟೆಗಳಲ್ಲಿ ಮಳೆ ವ್ಯಾಪಕವಾಗಿ ಬೀಳುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ 7 ಜಿಲ್ಲೆಯ ಜಿಲ್ಲಾಧಿಕಾರಿಗಳು ರೆಡ್ ಅಲರ್ಟ್ ಎಂದು ಘೋಷಿಸಿದ್ದಾರೆ.

English summary
The Hasirumakki Launch is Stuck in the middle of the Sharavathi River backwater due to the high winds in the Malenadu area
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X