ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣಗೆರೆ ಚಿತ್ರಣ ಬದಲು; ಸ್ಥಳ ಪರಿಶೀಲಿಸಿದ ಸಚಿವರು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 27; "ಹಣಗೆರೆ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೋವಿಡ್ ಸಂಪೂರ್ಣ ಕಡಿಮೆಯಾದ ಬಳಿಕ 15 ದಿನದೊಳಗೆ ಕ್ಷೇತ್ರದ ಶಾಸಕ ಆರಗ ಜಾನೇಂದ್ರ, ಪ್ರಮುಖ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ" ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹಣಗೆರೆಗೆ ಶನಿವಾರ ಭೇಟಿ ನೀಡಿದ ಸಚಿವರು ದೇವಾಲಯದ ವಾತಾವರಣವನ್ನು ವೀಕ್ಷಿಸಿದರು. ಬಳಿಕ ಸಭೆ ನಡೆಸಿದ ಅವರು, "ಇಡೀ ರಾಜ್ಯದಲ್ಲೇ ಹಣಗೆರೆ ವಿಶಿಷ್ಟವಾದ ಸ್ಥಳವಾಗಿದೆ. ಒಂದೇ ಜಾಗದಲ್ಲಿ ದರ್ಗಾ ಹಾಗೂ ದೇವಸ್ಥಾನ ಇರುವುದು ಮಾದರಿಯಾಗಿದೆ. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕಿದೆ" ಎಂದರು.

ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ

"ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಣಗೆರೆಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆಯಿಂದ ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಅವರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ನೆರವು ನೀಡಲಾಗುವುದು" ಎಂದು ಹೇಳಿದರು.

ಶಿವಮೊಗ್ಗ; ಖಾಸಗಿ ಬಸ್ ಸಂಚಾರ ಮತ್ತೆ ಆರಂಭಿಸಲು 5 ಸವಾಲು ಶಿವಮೊಗ್ಗ; ಖಾಸಗಿ ಬಸ್ ಸಂಚಾರ ಮತ್ತೆ ಆರಂಭಿಸಲು 5 ಸವಾಲು

Hanagere Katte To Be Developed Soon Says Kota Srinivas Poojary

"ಶುದ್ಧ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಬೇಕಿದೆ. ದೂರದಿಂದ ಆಗಮಿಸುವ ಪ್ರವಾಸಿಗರು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಊಟೋಪಚಾರ ಒದಗಿಸಬೇಕು. ಇಲ್ಲೊಂದು ಕಲ್ಯಾಣ ಮಂದಿರ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಬಹುದು" ಎಂದು ತಿಳಿಸಿದರು.

ಶಿವಮೊಗ್ಗ; ಅನ್‌ಲಾಕ್‌ ಆರಂಭ, ರಸ್ತೆಗಿಳಿದ ಸರ್ಕಾರಿ ಬಸ್‌ಗಳು ಶಿವಮೊಗ್ಗ; ಅನ್‌ಲಾಕ್‌ ಆರಂಭ, ರಸ್ತೆಗಿಳಿದ ಸರ್ಕಾರಿ ಬಸ್‌ಗಳು

ಪಾರದರ್ಶಕತೆ; "ನಾನು ಮುಜರಾಯಿ ಸಚಿವನಾದ ಬಳಿಕ ಪ್ರತಿ ದೇವಸ್ಥಾನದ ಆಡಳಿತದಲ್ಲೂ ಪಾರದರ್ಶಕತೆ ತರಲು ಮುಂದಾಗಿದ್ದೇನೆ. ದೇವಾಲಯಗಳಲ್ಲಿ ಭಕ್ತರು ನೀಡುವ ಪತಿ ಪೈಸೆಗೂ ಲೆಕ್ಕ ಇಡಬೇಕು. ಕಾಣಿಕೆ ಹಣ ಸದ್ಬಳಕೆಯಾಗಬೇಕು" ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

Hanagere Katte To Be Developed Soon Says Kota Srinivas Poojary

"ಸರ್ಕಾರದ ಅನುದಾನದೊಂದಿಗೆ ದೇವಾಲಯದಲ್ಲಿ ಸಂಗ್ರಹವಾಗುವ ಕಾಣಿಕೆ ಹಣವನ್ನು ಬಳಸಿಕೊಂಡು ಹಣಗೆರೆಕಟ್ಟೆಯನ್ನು ಮಾದರಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವ ಎಲ್ಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಲಾಗುವುದು" ಎಂದರು.

Recommended Video

ರೋಹಿಣಿ ಹೇಳೋ ತೋಳ ಬಂತು ತೋಳ ಕಥೆ ಕೇಳೋಕೆ ನಾನು ಸಿದ್ಧವಾಗಿಲ್ಲ !! | Oneindia Kannada

ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಮೂರ್ತಿ, ತಾಲೂಕು ಪಂಚಾಯಿತು ಮಾಜಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ತಹಸೀಲ್ದಾರ್‌ ಶ್ರೀಪಾದ ರಾವ್ ಸೇರಿದಂತೆ ಹಲವರು ಇದ್ದರು.

English summary
Minister for Muzrai department Kota Srinivas Poojary said that Hanagere katte to be developed and action plan will be ready soon. Place famous for Chamundeshwari temple and Hajar saiyad ali darga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X