ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾ.ಪಂ ಚುನಾವಣೆ: ಮತದಾರರಿಗೆ ಹಂಚಲು ತಂದಿದ್ದ 130ಕ್ಕೂ ಹೆಚ್ಚು ಕುಕ್ಕರ್ ಗಳು ವಶ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 21: ಮತದಾರರನ್ನು ಸೆಳೆಯಲು ತಂದಿದ್ದ ನೂರಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಪಡಿಸಿಕೊಂಡ ಘಟನೆ ಶಿವಮೊಗ್ಗ ತಾಲೂಕಿನ ನಿದಿಗೆ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ತೋಟದ ಮನೆಯಲ್ಲಿ ಸಂಗ್ರಹ ಮಾಡಿದ್ದ 130ಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಗ್ರಾಮ‌ ಪಂಚಾಯಿತಿ ಚುನಾವಣೆ: 80 ಸಾವಿರ ಪೊಲೀಸರ ನಿಯೋಜನೆಗ್ರಾಮ‌ ಪಂಚಾಯಿತಿ ಚುನಾವಣೆ: 80 ಸಾವಿರ ಪೊಲೀಸರ ನಿಯೋಜನೆ

ಶಿವಮೊಗ್ಗ ತಾಲ್ಲೂಕಿನ ನಿದಿಗೆ ಗ್ರಾಮ ಪಂಚಾಯತಿ ಚುನಾವಣೆ ಅಭ್ಯರ್ಥಿಗೆ ಸೇರಿದ ತೋಟದ ಮನೆಯಲ್ಲಿ ಕುಕ್ಕರ್ ವಶಕ್ಕೆ ತೆಗೆದುಕೊಂಡಿದ್ದು, ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಹಂತದ ಮತದಾನ ಕೆಲವೇ ಗಂಟೆಗಳು ಬಾಕಿ ಇರುವಾಗ ದಾಳಿ ನಡೆದಿದೆ.

Gram Panchayat Election: More Than 130 Cookers Siezed In Nidige Village

ರಾಜ್ಯದೆಲ್ಲೆಡೆ ಮಂಗಳವಾರ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಕೆಲ ಅಭ್ಯರ್ಥಿಗಳು ಮತದಾರರನ್ನು ಸೇಳೆಯುವ ಉದ್ದೇಶದಿಂದ ವಿವಿಧ ಕಸರತ್ತು ನಡೆಸುತ್ತಿದ್ದಾರೆ.

ಆದರೆ ಶಿವಮೊಗ್ಗ ತಾಲೂಕಿನ ನಿದಿಗೆ ಗ್ರಾಮದಲ್ಲಿ ಅಭ್ಯರ್ಥಿಯೊರ್ವರ ಭಾವಚಿತ್ರ ಅಂಟಿಸಿರುವ ಕುಕ್ಕರ್ ಬಾಕ್ಸ್ ಗಳನ್ನು ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ತಾಲೂಕಿನ ಇಓ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ಮೂರು ಲೀಟರ್ ಸಾಮಾರ್ಥ್ಯದ 130 ಕುಕ್ಕರ್ ಗಳು ವಶಕ್ಕೆ ಪಡೆಯಲಾಗಿದೆ.

Gram Panchayat Election: More Than 130 Cookers Siezed In Nidige Village

ಮೇಲ್ನೋಟಕ್ಕೆ ನಿದಿಗೆ ಗ್ರಾಮ ಪಂಚಾಯಿತಿಗೆ ಸ್ಫರ್ಧಿಸಿದ್ದ ಅಭ್ಯರ್ಥಿಗೆ ಸಂಬಂಧಿಸಿದ ಕುಕ್ಕರ್ ಗಳು ಎಂದು ತಿಳಿದುಬಂದಿದ್ದು, ಕುಕ್ಕರ್ ನ ಬಾಕ್ಸ್ ಮೇಲೆ ಅಭ್ಯರ್ಥಿಯ ಫೋಟೋ ಮತ್ತು ಮಾಹಿತಿ ಪತ್ತೆಯಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

English summary
More than 130 cookers stored in farmhouse have been seized by election officials in Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X