ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೆಂಪು ವಿವಿಯಲ್ಲಿ ಚಿನ್ನದ ಬೇಟೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 17: ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ ಬಾರಿಯು ವಿದ್ಯಾರ್ಥಿನಿಯರು ಚಿನ್ನದ ಬೇಟೆ ಮುಂದುವರೆಸಿದ್ದಾರೆ. 31 ಮತ್ತು 32ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಮತ್ತು ನಗದು ಪುರಸ್ಕಾರಗಳನ್ನು ವಿದ್ಯಾರ್ಥಿನಿಯರೆ ಬಾಚಿಕೊಂಡಿದ್ದಾರೆ. ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು. ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಸನ್ಮಾನಿಸಿದರು.

ಯಾರಿಗೆ ಎಷ್ಟು ಪದಕ ಲಭಿಸಿದೆ?

31ನೇ ಘಟಿಕೋತ್ಸವದಲ್ಲಿ ಕನ್ನಡ ಎಂ.ಎ ವಿಭಾಗದ ಪ್ರಣೀತಾ ಎಂ.ಟಿ ಅವರು 8 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಪಡೆದಿದ್ದಾರೆ. ಎಂಬಿಎ ವಿಭಾಗದ ಯತೀಶ್ ಕೆ.ಯು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಎಂ.ಎಸ್ಸಿ ಜೈವಿಕ ತಂತ್ರಜ್ಞಾನ ವಿಭಾಗದ ಅನುಷಾ ಎಸ್, ಎನ್.ಇ.ಎಸ್. ಇನ್ಸ್ ಟಿಟ್ಯೂಟ್ ಆಪ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಬಿ.ಕಾಂ ವಿಭಾಗದ ನಿವ್ಯಾ ಕೆ.ನಾಯಕ್ ಅವರು ತಲಾ 5 ಸ್ವರ್ಣ ಪದಕ ಪಡೆದಿದ್ದಾರೆ.

 ಮೀನುಗಾರಿಕೆ ಪದವಿಯಲ್ಲಿ 3 ಚಿನ್ನದ ಪದಕ ಬಾಚಿಕೊಂಡ ಚನ್ನಪಟ್ಟಣದ ಕುಶಲಾ ಮೀನುಗಾರಿಕೆ ಪದವಿಯಲ್ಲಿ 3 ಚಿನ್ನದ ಪದಕ ಬಾಚಿಕೊಂಡ ಚನ್ನಪಟ್ಟಣದ ಕುಶಲಾ

ಜ್ಞಾನ ಸಹ್ಯಾದ್ರಿಯ ಎಂ.ಎಸ್ಸಿ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಉಷಾ ಬಿ.ಎನ್ ಅವರು 4 ಸ್ವರ್ಣ ಪದಕ ಮತ್ತು 3 ನಗದು ಬಹುಮಾನ ಪಡೆದಿದ್ದಾರೆ. ಇನ್ನು, ಎಂ.ಎ ಸಮಾಜಶಾಸ್ತ್ರ ವಿಭಾಗದ ನವೀನ್ ಕುಮಾರ್.ಸಿ, ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದ ರಕ್ಷಿತಾ ಹೆಚ್.ಎಂ ಜೈನ್, ರಸಾಯನಶಾಸ್ತ್ರ ವಿಭಾಗದ ದಿವ್ಯಾ ಎಂ.ಸಿ, ಪರಿಸರ ವಿಜ್ಞಾನ ವಿಭಾಗದ ಸಂಪದಾ ಶಾಸ್ತ್ರಿ ತಲಾ 4 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.

Girls Won Most Gold Medals in Convocation of Kuvempu University

ಎಂ.ಎ ರಾಜ್ಯಶಾಸ್ತ್ರ ವಿಭಾಗದ ಸೌರಭ ಎಸ್.ಕಾಮತ್, ಉರ್ದು ವಿಭಾಗದ ಅಬ್ದುಲ್ ಫತಾ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಶ್ವೇತಾ ಎಸ್, ಎಂ.ಎಸ್ಸಿ ಪ್ರಾಣಿಶಾಸ್ತ್ರ ವಿಭಾಗದ ಸರಳ ವೈ.ಪಿ, ಎಂ.ಸಿ.ಎ ಸಂಜನಾ ಕೆ ಅವರು ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ.

32ನೇ ಘಟಿಕೋತ್ಸವ
ಎಂ.ಎ ಕನ್ನಡ ವಿಭಾಗದ ದಿವ್ಯಾ ಹೆಚ್.ಎನ್ ಅವರು 11 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಪಡೆದರೆ, ಎಂಬಿಎ ವಿಭಾಗದ ಪ್ರಿಯಾಂಕಾ ಟಿ ಅವರು 6 ಸ್ವರ್ಣ ಪದಕಗಳನ್ನು ಪಡೆದುಕೊಂಡರು. ಎಂ.ಎ ಸಮಾಜಶಾಸ್ತ್ರ ವಿಭಾಗದ ತನೂಷಾ, ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದ ಸಂಯುಕ್ತಾ ಪೈ, ಎ.ಟಿ.ಎನ್.ಸಿ ಕಾಲೇಜು ಬಿ.ಕಾಂ ವಿದ್ಯಾರ್ಥಿನಿ ಮೇಘನಾ.ವಿ ಅವರು ತಲಾ 5 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.

Girls Won Most Gold Medals in Convocation of Kuvempu University

ಗಣಿತಶಾಸ್ತ್ರ ವಿಭಾಗದ ಸಿಂಧು ಎನ್ ಅವರು 4 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಪಡೆದಿದ್ದಾರೆ. ಎಂ.ಎ ರಾಜ್ಯಶಾಸ್ತ್ರ ವಿಭಾಗದ ಅಶ್ವಿನಿ ಎಂ, ಎಂ.ಎಸ್ಸಿ ಪರಿಸರ ವಿಜ್ಞಾನ ವಿಭಾಗದ ಪೂಜಾ.ಎಸ್ ಅವರು ತಲಾ 4 ಸ್ವರ್ಣ ಪದಕ ಪಡೆದಿದ್ದಾರೆ. ಬಿ.ಎಡ್ ಪದವಿಯಲ್ಲಿ ಆಯಿಷಾ ಫರ್ ಹೀನ್ ಶೇಖ್ 3 ಸ್ವರ್ಣ ಪದಕ ಮತ್ತು 1 ನಗದು ಬಹುಮಾನ ಪಡೆದರು.

ರೈತನ ಮಗಳಾಗಿದ್ದರೂ ಭರ್ಜರಿ ಚಿನ್ನದ ಬೇಟೆಯಾಡಿದ ಚಿನ್ನದ ಹುಡುಗಿ ರೈತನ ಮಗಳಾಗಿದ್ದರೂ ಭರ್ಜರಿ ಚಿನ್ನದ ಬೇಟೆಯಾಡಿದ ಚಿನ್ನದ ಹುಡುಗಿ

ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಂಜುಮ್ ಬಷೀರ್ ಸಾಬ್, ಎಂ.ಎ ಇಂಗ್ಲೀಷ್ ವಿಭಾಗದ ಅಲೀಶಾ ಜೋಸೆಫ್, ಎಂ.ಕಾಂ ವಿಭಾಗದ ಗಾಯತ್ರಿ ಕೆ.ಎ, ಎಂ.ಸಿ.ಎ ವಿಭಾಗದ ರಂಜಿತಾ ಸಿ.ಕೆ, ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದ ಯಶಸ್ವಿನಿ ಎಂ, ಎಂ.ಎಸ್ಸಿ ಪ್ರಾಣಿಶಾಸ್ತ್ರ ವಿಭಾಗದ ರುಚಿತಾಶ್ರೀ, ಎಂ.ಎಸ್ಸಿ ಜೀವ ರಸಾಯನಶಾಸ್ತ್ರ ವಿಭಾಗದ ಸೃಷ್ಟಿ ಬಿ.ಎಂ ಅವರು ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ.

Girls Won Most Gold Medals in Convocation of Kuvempu University

ಚಿನ್ನದ ಬೇಟೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

ಕುವೆಂಪು ವಿಶ್ವವಿದ್ಯಾಲಯದ ಎರಡು ಘಟಿಕೋತ್ಸವದಲ್ಲಿನ ಚಿನ್ನದ ಬೇಟೆಯಲ್ಲಿ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ. 31ನೇ ಘಟಿಕೋತ್ಸವದಲ್ಲಿ 71 ವಿದ್ಯಾರ್ಥಿಗಳು 127 ಸ್ವರ್ಣ ಪದಕ ಗಳಿಸಿದ್ದಾರೆ. ಈ ಪೈಕಿ 51 ವಿದ್ಯಾರ್ಥಿನಿಯರಿದ್ದರೆ, 20 ವಿದ್ಯಾರ್ಥಿಗಳಿದ್ದಾರೆ. ಇನ್ನು, ಬಹುತೇಕ ನಗದು ಬಹುಮಾನಗಳನ್ನೆಲ್ಲ ವಿದ್ಯಾರ್ಥಿನಿಯರೆ ಬಾಚಿಕೊಂಡಿದ್ದಾರೆ. 17 ನಗದು ಬಹುಮಾನಗಳನ್ನು 13 ವಿದ್ಯಾರ್ಥಿನಿಯರು ಪಡೆದುಕೊಂಡಿದ್ದಾರೆ.

32ನೇ ಘಟಿಕೋತ್ಸವದಲ್ಲಿ 66 ವಿದ್ಯಾರ್ಥಿಗಳು 132 ಸ್ವರ್ಣ ಪದಕ ಗಳಿಸಿದ್ದಾರೆ. ಈ ಪೈಕಿ 14 ವಿದ್ಯಾರ್ಥಿಗಳು, 52 ವಿದ್ಯಾರ್ಥಿನಿಯರಿದ್ದಾರೆ. 17 ನಗದು ಬಹುಮಾನಗಳ ಪೈಕಿ 2 ವಿದ್ಯಾರ್ಥಿಗಳ ಪಾಲಾಗಿದ್ದರೆ, ಉಳಿದ 13 ನಗದು ಬಹುಮಾನಗಳು ವಿದ್ಯಾರ್ಥಿನಿಯರ ಪಾಲಾಗಿವೆ.

English summary
Girls Students bagged most of gold medals at 31st and 32nd convocation of Kuvempu University held on Thursday. Out of 71 students, 56 girls bagged gold in 31st convocation. Out of 66 students, 52 girls won gold medal in 32nd convocation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X