ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧು ಸ್ಪರ್ಧಿಸಲ್ಲ, ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ: ಎಚ್ಡಿಕೆ

By Mahesh
|
Google Oneindia Kannada News

ಬೆಂಗಳೂರು/ಸೊರಬ, ಮಾ.11: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಸ್ಪರ್ಧೆಗೆ ಸಂಬಂಧಿಸಿದಂತೆ ಎದ್ದಿರುವ ಊಹಾಪೋಹಕ್ಕೆ ತೆರೆ ಬಿದ್ದಿದೆ.ಈ ನಡುವೆ ಗೀತಾ ಅವರ ಬದಲಿಗೆ ಅವರ ಸೋದರ ಮಧು ಬಂಗಾರಪ್ಪ ಸ್ಪರ್ಧಿಸುತ್ತಾರಂತೆ, ಗೀತಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಸುದ್ದಿಯನ್ನು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಅವರು ಸ್ಪರ್ಧಿಸುತ್ತಿರುವುದು ಖಚಿತ. ಇದಕ್ಕೆ ಅವರ ಕುಟುಂಬದವರ ಬೆಂಬಲವೂ ಇದೆ. ಗೀತಾ ಅವರನ್ನು ರಾಜಕೀಯ ರಂಗಕ್ಕೆ ಕರೆ ತರುವಲ್ಲಿ ಮಧು ಮಹತ್ವದ ಪಾತ್ರವಹಿಸಿದ್ದಾರೆ. ಗೀತಾ ಅವರ ಸ್ಪರ್ಧೆಗೆ ಜೆಡಿಎಸ್ ಕಾರ್ಯಕರ್ತರ ಸಂಪೂರ್ಣ ಬೆಂಬಲವೂ ಇದೆ ಎಂದಿದ್ದಾರೆ. ಈ ಬಾರಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಎಲ್ಲವೂ ಕಾರ್ಯಕರ್ತರ ಆಯ್ಕೆಯಾಗಿದೆ ಎಂದರು.

ಚುನಾವಣೆಯಲ್ಲಿ ಗೀತಾ ಸ್ಪರ್ಧಿಸಲು ತಮ್ಮ ಕುಟುಂಬದ ಯಾರೊಬ್ಬರ ವಿರೋಧವೂ ಇಲ್ಲ. ಮಾರ್ಚ್ 17ರಂದು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದೇನೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ. [ವಿವರ ಇಲ್ಲಿದೆ ಓದಿ]

ಮಧು ಬಂಗಾರಪ್ಪ ಹೇಳಿಕೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಸ್ಪರ್ಧೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಟ, ಗೀತಾ ಅವರ ಪತಿ ಶಿವರಾಜಕುಮಾರ್ ಅವರ ಜತೆ ಚರ್ಚಿಸಿದ್ದಾರೆ. ಅದಕ್ಕೆ ಶಿವರಾಜಕುಮಾರ್ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಮಧುಬಂಗಾರಪ್ಪ ತಿಳಿಸಿದ್ದಾರೆ. ಇನ್ನಷ್ಟು ವಿವರ ಮುಂದೆ ಓದಿ...

ಗೀತಾಕ್ಕ ಸ್ಪರ್ಧೆಗೆ ಮಧು ಬಂಗಾರಪ್ಪ ಕಾರಣ

ಗೀತಾಕ್ಕ ಸ್ಪರ್ಧೆಗೆ ಮಧು ಬಂಗಾರಪ್ಪ ಕಾರಣ

ಗೀತಾ ಶಿವರಾಜಕುಮಾರ್ ಕಲಾವಿದ ಕುಟುಂಬದ ಸೊಸೆಯಾದರೂ ರಾಜಕಾರಣವನ್ನೇ ಅರೆದು ಕುಡಿದಿದ್ದ ರಾಜಕಾರಣಿ ಬಂಗಾರಪ್ಪ ಅವರ ಮಗಳು. ಸ್ವಾಭಾವಿಕ ಹಾಗೂ ರಕ್ತಗತವಾಗಿ ಅವರಲ್ಲೂ ರಾಜಕಾರಣದ ಗುಣಗಳು ಹರಿದುಬಂದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲವಿಗೆ ಅವಳ ಕಾರ್ಯಕ್ಷಮತೆಯೂ ಒಂದು ಕಾರಣ.

ಜನಪ್ರತಿನಿಧಿ ಆಗುವ ಆಸಕ್ತಿ ಇರುವವರಿಗೆ ಸೇವೆ ಹಾಗೂ ಸಮಸ್ತ ಜನತೆಯನ್ನು ಸಮಾನ ಮನೋಭಾವದಲ್ಲಿ ಸ್ವೀಕರಿಸುವ ಬುದ್ಧಿ ಕೌಶಲ್ಯವಿರಬೇಕು. ಗೀತಾ ಅವರಿಗೆ ಈ ಎಲ್ಲಾ ಗುಣಗಳು ಕರಗತವಾಗಿರುವುದರಿಂದ ಪಕ್ಷದ ಉತ್ತಮ ಅಭ್ಯರ್ಥಿಯಾಗಿ ಅತ್ಯಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ಚಿತ್ರರಂಗದಲ್ಲಿ ಹೆಚ್ಚು ಚಿರಪರಿಚಿತರಾಗಿ ಇರುವುದರಿಂದ ಅನೇಕ ಚಲನಚಿತ್ರ ನಟ-ನಟಿಯರು, ತಂತ್ರಜ್ಞರು ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದು ಮಧು ಹೇಳಿದ್ದಾರೆ.

ಕುಮಾರ್ ಬಂಗಾರಪ್ಪ ಸಹವಾಸ ನಮಗೆ ಬೇಡ

ಕುಮಾರ್ ಬಂಗಾರಪ್ಪ ಸಹವಾಸ ನಮಗೆ ಬೇಡ

ಮಾ.24ರಂದು ನಾಮಪತ್ರ ಸಲ್ಲಿಸಲಾಗುವುದು. ಚುನಾವಣಾ ಸಮಯದಲ್ಲಿ ಕ್ಷೇತ್ರಾದ್ಯಂತ ಒಟ್ಟು ಪಕ್ಷದ ವತಿಯಿಂದ 24 ಪ್ರಚಾರ ಸಭೆಗಳನ್ನು ನಡೆಸಲಾಗುವುದು ಎಂದ ಮಧು, ಸೋದರ ವಸಂತ್(ಕುಮಾರ್ ಬಂಗಾರಪ್ಪ) ಸಹವಾಸ ಸಾಕು ಎಂದಿದ್ದಾರೆ.

ನನ್ನ ಸಹೋದರ ಕುಮಾರ್ ಬಂಗಾರಪ್ಪ ನಮ್ಮ ಕುಟುಂಬದೊಂದಿಗೆ ಮತ್ತೆ ಸಂಬಂಧ ಬೆಳೆಸುವುದು ಅಥವಾ ಸೇರಿಕೊಳ್ಳುವುದಕ್ಕೆ ತಂದೆ ಇದ್ದಾಗ ಒಂದು ಅವಕಾಶ ಕೊಟ್ಟಿದ್ದರು. ಈಗಲೂ ನಾವು ಅವಕಾಶ ಕೊಡುತ್ತೇವೆ. ಆದರೆ, ಅವರು ಬಂಗಾರಪ್ಪ ಅವರ 'ಒಪ್ಪಿಗೆ' ತೆಗೆದುಕೊಂಡು ಬರಬೇಕು. ಅದು ಸಾಧ್ಯವಿಲ್ಲ. ಅಂತಯೇ ಅಣ್ಣನ ಜೊತೆ ಮತ್ತೆ ಸೇರುವ ಪ್ರಶ್ನೆಯೇ ಇಲ್ಲ. ಗೀತಾ ಸ್ಪರ್ಧೆ ಬಗ್ಗೆ ಕುಮಾರ್ ಏನೇ ಹೇಳಿದರೂ ಅದು ರಾಜಕೀಯವಾಗಿ ಮಾತ್ರ ಎಂದು ಸ್ವೀಕರಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ಎಚ್ ಡಿ ಕುಮಾರಸ್ವಾಮಿ ಕೂಡಾ ಬೆಂಬಲ

ಎಚ್ ಡಿ ಕುಮಾರಸ್ವಾಮಿ ಕೂಡಾ ಬೆಂಬಲ

ಇತ್ತೀಚೆಗೆ ನೆಲಮಂಗಲ ಸಮೀಪದ ಮಲ್ಲಾಪುರದಲ್ಲಿ ರಾಯಲ್ ಇಂಟರ್ ‌ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದಲ್ಲಿ ಪತ್ನಿಯರಾದ ರಾಧಿಕಾ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಪಾಲ್ಗೊಂಡಿದ್ದಾಗಲೂ ಕುಮಾರಸ್ವಾಮಿ ಅವರು ಗೀತಾ ಅವರ ಸ್ಪರ್ಧೆ ಖಚಿತ ಎಂದಿದ್ದರು. ಮೊದಲಿಗೆ ಗೀತಾ ಅವರ ಸ್ಪರ್ಧೆಗೆ ಆಯ್ಕೆ ಮಾಡಿದ್ದು ದೇವೇಗೌಡರು ಎಂಬುದನ್ನು ಮರೆಯುವಂತಿಲ್ಲ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅನಿತಾಕುಮಾರಸ್ವಾಮಿ ಸ್ಪರ್ಧಿಸುವ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜೆಡಿಎಸ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ನಾವು ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ೨೮ ಕ್ಷೇತ್ರದಲ್ಲೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದರು. ಒಂದು ವೇಳೆ ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿದರೆ ಅನಿತಾ ಹಿಂದೆ ಸರಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದೆ ಇದಕ್ಕೆ ಏನು ಹೇಳುತ್ತೀರಾ ಎಂಬ ಪ್ರಶ್ನೆಗೆ ಎಚ್ಡಿಕೆ ಉತ್ತರಿಸಲಿಲ್ಲ.

ಬಂಗಾರಪ್ಪ ಅವರ ಪುತ್ರಿ ಗೀತಾ

ಬಂಗಾರಪ್ಪ ಅವರ ಪುತ್ರಿ ಗೀತಾ

ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಜೆ ಎಚ್ ಪಟೇಲ್ ರಂತೆ ವರ್ಣಮಯ ವ್ಯಕ್ತಿತ್ವ ಹಾಗೂ ಭಾಷಾ ಪ್ರೌಢಿಮೆ ಹೊಂದಿದ್ದ ದಿವಂಗತ ಸಾರೆಕೊಪ್ಪ ಬಂಗಾರಪ್ಪ ಅವರು ತಮ್ಮ ಪುತ್ರಿ ಗೀತಾ ಅವರಿಗೂ ಸಮಾಜಮುಖಿ ಚಿಂತನೆಯನ್ನು ತುಂಬಿದ್ದಾರೆ.

ಸುಮಾರು 31 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಕೊನೆಗಾಲದಲ್ಲಿ ಅವರಿಗೆ ರಾಜಕೀಯವಾಗಿ ಪುತ್ರ ವಸಂತ್ ಕುಮಾರ್(ಕುಮಾರ್ ಬಂಗಾರಪ್ಪ) ವೈರಿಯಾಗಿದ್ದು ಸಹಿಸಲು ಆಗದಂಥ ನೋವುಂಟು ಮಾಡಿತ್ತು. ಇನ್ನೊಬ್ಬ ಪುತ್ರ ಮಧುವನ್ನು ರಾಜಕೀಯವಾಗಿ ಮೇಲಕ್ಕೆ ತರಲು ಇನ್ನಿಲ್ಲದ್ದಂತೆ ಯತ್ನಿಸಿ ಸೋತಿದ್ದರು.ಈ ಎಲ್ಲಾ ರಾಜಕೀಯದಿಂದ ನೋವು ನಲಿವು ಹತ್ತಿರದಿಂದ ಕಂಡಿರುವ ಗೀತಾ ಅವರು ರಾಜಕೀಯವನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ

ಅಭಿಮಾನಿಗಳ ಪ್ರತಿಕ್ರಿಯೆ

ಗೀತಾ ಶಿವರಾಜ್ ಕುಮಾರ್ ಅವರು ಕಣಕ್ಕಿಳಿಯುವ ಬಗ್ಗೆ ಅಭಿಮಾನಿಗಳು ಕೂಡಾ ಕುತೂಹಲಕಾರಿಯಾಗಿದ್ದರು. ಗೀತಾ ಅವರು ಮೊದಲಿಗೆ ರಾಜಕೀಯಕ್ಕೆ ಬರುವುದೇ ಇಲ್ಲ ಎಂದಿದ್ದರು. ಗೀತಾ ಅವರು ಚುನಾವಣೆಗೆ ನಿಲ್ಲದಿರಲಿ, ರಾಜ್ ಕುಟುಂಬ ರಾಜಕೀಯದಿಂದ ದೂರ ಉಳಿಯಲಿ ಎಂಬುದೇ ಬಹುತೇಕ ಅಭಿಮಾನಿಗಳ ಅಭಿಮತವಾಗಿತ್ತು. ಡಾ. ರಾಜ್ ಅಭಿಮಾನಿಗಳ ಸಂಘದವರು ಧೈರ್ಯಮಾಡಿ ಸ್ಪರ್ಧೆಗಿಳಿಯುವುದು ಬೇಡ ಎಂದು ಮನವಿ ಸಲ್ಲಿಸಿದ್ದರು. ಆದರೆ, ಶಿವರಾಜ್ ಅವರು ಸ್ಪರ್ಧೆ ಅನಿವಾರ್ಯತೆ ಬಗ್ಗೆ ವಿವರಿಸಿ ಬೆಂಬಲ ಕೋರಿದ ಮೇಲೆ ಸುಮ್ಮನಾಗಿದ್ದಾರೆ.

ಅಣ್ಣಾವ್ರು ಯಾವ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲ?

ಅಣ್ಣಾವ್ರು ಯಾವ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲ?

ಮೊದಲಿನಿಂದಲೂ ರಾಜಕೀಯದಿಂದ ದೂರವುಳಿದಿರುವ ರಾಜ್ ಕುಟುಂಬ ಈಗ ಸೊಸೆ ರಾಜಕೀಯ ಪ್ರವೇಶಕ್ಕೆ ಅಸ್ತು ಎಂದಿರುವುದು ಕುತೂಹಲಕಾರಿ. ಡಾ.ರಾಜ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿ ರಾಜಕೀಯ ಪಕ್ಷಗಳು ಸೋತಿತ್ತು ಎಂಬುದನ್ನು ಮರೆಯುವಂತಿಲ್ಲ. ಬಂಗಾರಪ್ಪ ಅವರ ನಂಟಿದ್ದರೂ ರಾಜಕೀಯವನ್ನು ಎಂದಿಗೂ ರಾಜ್ ಕುಟುಂಬ ಹೊದ್ದು ಮಲಗಿರಲಿಲ್ಲ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿನ ಚಿತ್ರರಂಗದ ದಿಗ್ಗಜರು ರಾಜಕೀಯಕ್ಕೆ ಪ್ರವೇಶಿಸುತ್ತಿರುವಾಗ ಇಲ್ಲಿ ಮಾತ್ರ ಏಕೆ ಹೀಗೆ? ಅದರಲ್ಲೂ ರಾಜ್ ಕುಟುಂಬ ಯಾಕೆ ಸಕ್ರಿಯವಾಗಿ ರಾಜಕೀಯದಿಂದ ದೂರ ಉಳಿದಿದೆ ಎಂಬ ಪ್ರಶ್ನೆ ಇತ್ತು.

ಅಣ್ಣಾವ್ರು ಬಯಸಿದ್ದರೆ ರಾಜಕೀಯ ಪ್ರವೇಶ ಕಷ್ಟವಿರಲಿಲ್ಲ. ಶಿವಣ್ಣ ಅವರಿಗೂ ಮಾವ ಬಂಗಾರಪ್ಪ ಅವರ ಬೆಂಬಲ ಇದ್ದೇ ಇತ್ತು. ಆದರೆ, ಅಣ್ಣಾವ್ರು ಯಾವ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವೋ ಅದೇ ಕಾರಣಕ್ಕೆ ಅವರ ಮೂವರು ಮಕ್ಕಳು ರಾಜಕೀಯದಿಂದ ದೂರ ಉಳಿದಿದ್ದಾರೆ.

English summary
Lok Sabha Election 2014: JDS Leader HD Kumaraswamy confirms Geetha Shivarajkumar's candidature from Shimoga Loksabha constituency. JDS Chief Whip and Geetha's brother Madhu Bangarappa, JDS state president A Krishnappa also confirmed the news amidst of opposition from Dr. Rajkumar Fan's association
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X