ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಧಿ ಬಜಾರ್ ವ್ಯಾಪಾರಿಗಳಿಂದ ಸ್ವಯಂ ಲಾಕ್ ಡೌನ್

|
Google Oneindia Kannada News

ಶಿವಮೊಗ್ಗ, ಜುಲೈ 12 : ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹಬ್ಬುತ್ತಿರುವುದರಿಂದ ಗಾಂಧಿ ಬಜಾರ್‌ ವ್ಯಾಪಾರಿಗಳು ಸ್ವಯಂ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಜುಲೈ 13ರಿಂದ ಆಗಸ್ಟ್ 12ರ ತನಕ ಈ ಲಾಕ್ ಡೌನ್ ಜಾರಿಯಲ್ಲಿರಲಿದೆ.

ಗಾಂಧಿ ಬಜಾರ್ ವರ್ತರಕ ಸಂಘ (ರಿ.) ಸ್ವಯಂ ಪ್ರೇರಿತ ಬಂದ್ ಮಾಡುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗಾಂದಿ ಬಜಾರ್ ಮತ್ತು ಸುತ್ತಮುತ್ತಲಿನ ವರ್ತರಕರು ಸ್ವಯಂ ಪ್ರೇರಿತರವಾಗಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆ ತನಕ ಮಾತ್ರ ವ್ಯವಹಾರ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.

ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!

ಜುಲೈ 13 ರಿಂದ ಆಗಸ್ಟ್ 12ರ ತನಕ ಮಧ್ಯಾಹ್ನ 3 ಗಂಟೆಯ ಬಳಿಕ ಸ್ವಯಂ ಪ್ರೇರಿತ ಲಾಕ್ ಡೌನ್ ಜಾರಿಯಲ್ಲಿ ಇರಲಿದ್ದು, ಅಂಗಡಿಗಳನ್ನು ಮುಚ್ಚಲಾಗುತ್ತದೆ. ಇದಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಸಹಕಾರ ನೀಡಬೇಕು ಎಂದು ವರ್ತಕರ ಸಂಘ ಮನವಿ ಮಾಡಿದೆ.

ಜು.13 ರಿಂದ 23ರವರೆಗೆ ಮಾಗಡಿ ಸಂಪೂರ್ಣ ಲಾಕ್ ಡೌನ್!ಜು.13 ರಿಂದ 23ರವರೆಗೆ ಮಾಗಡಿ ಸಂಪೂರ್ಣ ಲಾಕ್ ಡೌನ್!

Gandhi Bazar Shopping Complex Owners Announced Self Lockdown

ಮಹಾರಾಷ್ಟ್ರದಲ್ಲಿ 10 ದಿನಗಳ ಸಂಪೂರ್ಣ ಲಾಕ್ ಡೌನ್ ಮಹಾರಾಷ್ಟ್ರದಲ್ಲಿ 10 ದಿನಗಳ ಸಂಪೂರ್ಣ ಲಾಕ್ ಡೌನ್

ವರ್ತಕರಿಗಾಗಿ ಹಲವು ಸೂಚನೆಗಳನ್ನು ಸಂಘ ನೀಡಿದೆ

* ಮಧ್ಯಾಹ್ನ 3 ಗಂಟೆಯ ನಂತರ ವ್ಯಾಪಾರ ಬಂದ್ ಮಾಡುವುದು
* ಔಷಧಿ ಮತ್ತು ಹಾಲಿನ ಅಂಗಡಿಯವರಿಗೆ ವಿನಾಯಿತಿ
* ಯಾವುದೇ ಕಾರಣಕ್ಕೂ ಫುಟ್‌ಪಾತ್ ವ್ಯಾಪಾರ ಮಾಡುವಂತಿಲ್ಲ
* ಅಂಗಡಿಯವರು ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸುವುದು
* ಪ್ರತಿ ಮಂಗಳವಾರ ನಡೆಯುವ ಗಾಂಧಿ ಬಜಾರ್ ಸಂತೆ ರದ್ದು
* ಮಾಸ್ಕ್ ಹಾಕದ ಗ್ರಾಹಕರಿಗೆ ಅಂಗಡಿಯೊಳಗೆ ಪ್ರವೇಶವಿಲ್ಲ

ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 26 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 404ಕ್ಕೇ ಏರಿಕೆಯಾಗಿದೆ.

English summary
After rising Covid-19 cases in Shivamogga city Gandhi Bazar shopping complex owners announced self-lockdown. Traders will open shops from morning 8 to 3 pm from July 13 to August 12, 2020. shut their business units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X