ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಬಿ.ಎಸ್ ವೈಗೆ ಪತ್ರ ಬರೆದ ಶಿವಮೊಗ್ಗದ ಮಾಜಿ ಎಂಎಲ್ ಎ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 21: ಶಿವಮೊಗ್ಗದ ಮಾಜಿ ಎಂಎಲ್ ‌ಎ ಕೆ.ಬಿ ಪ್ರಸನ್ನಕುಮಾರ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆಯ ಕುರಿತು ಇರುವ ವ್ಯವಸ್ಥೆಗಳ ಕುರಿತು ಪ್ರಸ್ತಾಪಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ನೆಪವಿಟ್ಟುಕೊಂಡು, ಸಾಮಾನ್ಯ ಕಾಯಿಲೆಗಳಿಗೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಹಾಗಾಗಿ ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಗೆ ಕೊರೊನಾ ಸೋಂಕುಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಗೆ ಕೊರೊನಾ ಸೋಂಕು

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಮತ್ತು ಐಸಿಯು ಕೊರತೆ ಇದೆ. ಕೊರೊನಾ ಪರೀಕ್ಷೆಯ ನೆಪದಲ್ಲಿ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿಲ್ಲ. ಈ ಕುರಿತು ಸರ್ಕಾರ ತುರ್ತು ಕ್ರಮ‌ ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Shivamogga: Former MLA BK Prasanna Kumar Has Written Letter To CM On Coronvirus Treatment

ಜಿಲ್ಲೆಯಲ್ಲಿ ಆಸ್ಪತ್ರೆ, ಬೆಡ್ ಗಳ ಸಂಖ್ಯೆ ಹಾಗೂ ಅಗತ್ಯ ಸೇವೆಗಳ ಕೊರತೆ, ಆಮ್ಲಜನಕದ ಕೊರತೆ ನಿವಾರಣೆಯಾಗಬೇಕು. ಕೊರೊನಾ ಪರೀಕ್ಷೆಯನ್ನು ಮತ್ತಷ್ಟು ವ್ಯಾಪಕಗೊಳಿಸಬೇಕು ಎಂದು ಕೆ.ಬಿ ಪ್ರಸನ್ನಕುಮಾರ್ ಪತ್ರದ ಮೂಲಕ ತಿಳಿಸಿದ್ದಾರೆ.

Recommended Video

Bangalore ಇನ್ನೂ ಕೆಲವು ದಿನ ಮಳೆ ಮುಂದುವರೆಯಲಿದೆ | Oneindia Kannada

ಶಿವಮೊಗ್ಗದಲ್ಲಿ ಪ್ರಸ್ತುತ 1953 ಸಕ್ರಿಯ ಪ್ರಕರಣಗಳು ಇವೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 182, ಕೋವಿಡ್ ಕೇರ್ ಸೆಂಟರ್ ನಲ್ಲಿ 161, ಖಾಸಗಿ ಆಸ್ಪತ್ರೆಯಲ್ಲಿ 258, ಟ್ರೀಜ್ ಇನ್ ಆಸ್ಪತ್ರೆಯಲ್ಲಿ 53 ಹಾಗೂ ಮನೆಯಲ್ಲಿಯೇ 1279 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 230 ಜನರು ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

English summary
Former MLA BK Prasanna Kumar has written letter to CM Yediyurappa regarding coronvirus treatment in shivamogga district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X