ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಇತಿಹಾಸದಲ್ಲೇ ಮೊದಲ ಮಹಿಳಾ ಎಸ್.ಪಿ. ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಶ್ವಿನಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಫೆಬ್ರವರಿ 21: ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಡಾ.ಎಂ. ಅಶ್ವಿನಿ ಜಿಲ್ಲೆಯಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲಿದ್ದಾರೆ. ಜಿಲ್ಲೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂಬ ಹೆಗ್ಗಳಿಕೆಗೆ ಅಶ್ವಿನಿ ಪಾತ್ರವಾಗಲಿದ್ದಾರೆ.

ಸ್ವಾತಂತ್ರ್ಯ ನಂತರ ಜಿಲ್ಲೆಯ ಪೊಲೀಸ್ ಇಲಾಖೆ ಮಟ್ಟಿಗೆ ನೋಡುವುದಾದರೆ ಇದುವರೆಗೂ ಪುರುಷ ಅಧಿಕಾರಿಗಳೇ ಎಸ್'ಪಿ ಆಗಿದ್ದರು. ಇದೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ರಾಜ್ಯ ಸರ್ಕಾರ ಜಿಲ್ಲೆಗೆ ನಿಯೋಜನೆ ಮಾಡಿದೆ. ಅದೂ ಲೋಕಸಭಾ ಚುನಾವಣೆ ಮುನ್ನ.

ಸಿ.ಡಿ. ಆದಿನಾರಾಯಣ್(08.01.1956 ರಿಂದ 17.05.1957) ಅವರು ಜಿಲ್ಲೆಯ ಮೊಟ್ಟ ಮೊದಲ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು, 28.08.2016ರಿಂದ ಇಂದಿನವರೆಗೂ ಜಿಲ್ಲೆಯ 37ನೆಯ ಎಸ್'ಪಿ ಆಗಿ ಅಭಿನವ್ ಖರೆ ಸೇವೆ ಸಲ್ಲಿಸಿದ್ದಾರೆ. 37 ಎಸ್'ಪಿಗಳಲ್ಲಿ ಎಲ್ಲರೂ ಪುರುಷ ಅಧಿಕಾರಿಗಳೇ ಆಗಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಎಸ್'ಪಿ ಆಗಿ ಅಶ್ವಿನಿ ಜಿಲ್ಲೆಗೆ ಆಗಮಿಸಲಿದ್ದಾರೆ.

First woman SP for Shivamogga

ರಾಜಕೀಯವಾಗಿ ಶಿವಮೊಗ್ಗ ರಾಜ್ಯ ಹಾಗೂ ದೇಶದ ಗಮನ ಸೆಳೆದಿರುವ ಜಿಲ್ಲೆಯಾಗಿದೆ. ಈಗ ಲೋಕಸಭಾ ಚುನಾವಣೆಯೂ ಸಹ ಮುಂದಿರುವುದರಿಂದ ಚುನಾವಣೆಯ ಭದ್ರತಾ ಉಸ್ತುವಾರಿ ವಿಚಾರದಲ್ಲಿ ನೂತನ ಎಸ್.ಪಿ. ಅಶ್ವಿನಿ ಅವರ ಮುಂದೆ ಸಾಕಷ್ಟು ಸವಾಲುಗಳಿವೆ.

2015ರ ಬ್ಯಾಚ್ ನ ಐಪಿಎಸ್ ಅಧಿಕಾರಿಣಿಯಾದ ಡಾ.ಎಂ.ಅಶ್ವಿನಿ, ಬೆಂಗಳೂರು ಕ್ರೈಂ ಬ್ಯಾಂಚ್ ನಲ್ಲಿ ಅಸಿಸ್ಟೆಂಟ್ ಇನ್ ಸ್ಪೆಕ್ಟರ್ ಜನರಲ್ ಅಫ್ ಪೊಲೀಸ್ ಆಗಿ ಸೇವೆ ಸಲ್ಲಿಸಿರುವ ಅಶ್ವಿನಿ, ಪೊಲೀಸ್ ಕೇಂದ್ರ ಕಚೇರಿಯಲ್ಲೂ ಸಹ ಸೇವೆ ಸಲ್ಲಿಸಿ ಆಡಳಿತಾತ್ಮಕ ವಿಚಾರಗಳಲ್ಲಿ ಅಪಾರ ಅನುಭವ ಹೊಂದಿರುವ ಅಧಿಕಾರಿಣಿಯಾಗಿದ್ದಾರೆ.

ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳ ಪಟ್ಟಿ

01. ಸಿ.ಡಿ. ಆದಿನಾರಾಯಣ್
02. ಕೆ.ವಿ. ಕುಮಾರಸ್ವಾಮಿ
03. ಐ.ಆರ್. ರಾಯಚೂರ್
04. ಎಚ್. ವರದರಾಜ್ ಅಯ್ಯಂಗಾರ್
05. ಆರ್.ಎಂ. ರಾವ್
06. ಪಿ. ಶಿವಬಸಪ್ಪ
07. ಪಿ.ಪಿ. ರಾಮಚಂದ್ರ ನಾಯರ್
08. ಚಂದೂಲಾಲ್
09. ಆರ್.ಎಸ್. ಚೋಪ್ರಾ
10. ಬಿ.ಎನ್. ಗರುಢಾಚಾರ್
11. ಕೆ.ಪಿ. ವೆಂಕಟೇಶ್ ಮೂರ್ತಿ
12. ಎಸ್. ಕೃಷ್ಣಮೂರ್ತಿ
13. ಎಚ್.ಟಿ. ಸಾಂಗ್ಲಿಯಾನಾ
14. ಜಿ. ರಾಜೇಂದ್ರ ಪ್ರಸಾದ್
15. ಬಿ.ಎನ್. ನಾಗರಾಜ್
16. ಅಜೇಯ್ ಕುಮಾರ್ ಸಿಂಗ್
17. ಎಸ್.ಎಸ್. ಹಸಬಿ
18. ಕೆ. ವಿಠ್ಠಲ್ ನಾಯಕ್
19. ವೈ.ಆರ್. ಪಾಟೀಲ್
20. ಕೆ. ಶ್ರೀನಿವಾಸನ್
21. ಕೆಂಪಯ್ಯ
22. ಓಂ ಪ್ರಕಾಶ್
23. ಎಂ.ಕೆ. ನಾಗರಾಜ್
24. ಸಿ. ಚಂದ್ರಶೇಖರ್
25. ಕಮಲ್ ಪಂಥ್
26. ಟಿ.ಜಿ. ದೊರೆಸ್ವಾಮಿ ನಾಯ್ಕ್
27. ರಾಘವೇಂದ್ರ ಎಚ್. ಔರಾದ್'ಕರ್
28. ಎನ್. ಶಿವಕುಮಾರ್
29. ಎಚ್.ಎನ್. ಸಿದ್ದಣ್ಣ
30. ಕೆ.ಎಚ್. ಶ್ರೀನಿವಾಸನ್
31. ಅರುಣ್ ಚಕ್ರವರ್ತಿ
32. ಎಸ್. ಮುರುಗನ್
33. ರಮಣ್ ಗುಪ್ತಾ
34. ಕೌಶಲೇಂದ್ರ ಕುಮಾರ್
35. ಕಾರ್ತಿಕ್ ರೆಡ್ಡಿ
36. ರವಿ ಡಿ. ಚನ್ನಣ್ಣನವರ್
37. ಅಭಿನವ್ ಖರೆ
38. ಡಾ.ಎಂ. ಅಶ್ವಿನಿ(ನೂತನ ಎಸ್'ಪಿ ಆಗಿ ಅಧಿಕಾರ ವಹಿಸಕೊಳ್ಳಬೇಕು).

English summary
Ashwini will take charge as SP of Shivamogga district.She is the first woman SP in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X