• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ; ಗಾಂಧಿ ಬಜಾರ್‌ನಲ್ಲಿ ಭಾರಿ ಅಗ್ನಿ ಅನಾಹುತ

|

ಶಿವಮೊಗ್ಗ, ಜನವರಿ 24: ಶಿವಮೊಗ್ಗದ ಗಾಂಧಿ ಬಜಾರ್‌ನ ಮಳಿಗೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ದಳದ ವಾಹನಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿವೆ.

ಕನ್ಯಾಕಾ ಪರಮೇಶ್ವರಿ ದೇವಾಲಯದ ಮುಂಭಾಗದಲ್ಲಿರುವ ಮಾತೃಶ್ರೀ ನಾವೆಲ್ಟೀಸ್ ಕಟ್ಟಡದಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಟ್ಟಡಕ್ಕೆ ಜ್ವಾಲೆ ಹರಡಿದೆ.

ಲಸಿಕೆಗಳು ಸುರಕ್ಷಿತ: ಬೆಂಕಿ ಅವಘಡದ ಬಳಿಕ ಅದಾರ್ ಸ್ಪಷ್ಟನೆ

ಕಟ್ಟಡದಲ್ಲಿ ಯಾರೂ ಸಹ ವಾಸವಾಗಿರಲಿಲ್ಲ. ಆದ್ದರಿಂದ ಭಾರೀ ಅನಾಹುತ ತಪ್ಪಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತಂದರು.

ಶಿವಮೊಗ್ಗ; ಕ್ರಷರ್‌ನಲ್ಲಿ ಭಾರೀ ಸ್ಫೋಟ, ನ್ಯಾಯಾಂಗ ತನಿಖೆಗೆ ಒತ್ತಾಯ

ಅಗ್ನಿ ಆಕಸ್ಮಿಕದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಗಾಂಧಿ ಬಜಾರ್‌ ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿದ್ದು, ಅಕ್ಕಪಕ್ಕದಲ್ಲಿಯೂ ಹಲವು ಅಂಗಡಿಗಳಿವೆ. ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹಬ್ಬುವ ಆತಂಕ ಎದುರಾಗಿತ್ತು.

ಶಿವಮೊಗ್ಗ ಸ್ಫೋಟ; ಸಿಗರೇಟು ಸೇದುತ್ತಿದ್ದ ಕಾರ್ಮಿಕರು!

ಗುರುವಾರ ರಾತ್ರಿ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿ ನಡೆದ ಸ್ಫೋಟದ ನಗರದ ಜನರನ್ನು ಬೆಚ್ಚಿ ಬೀಳಿಸಿತ್ತು. ಸ್ಪೋಟದ ಬಗ್ಗೆ ತನಿಖೆ ನಡೆಯುತ್ತಿದೆ. ಕ್ರಷರ್ ಗುತ್ತಿಗೆ ಪಡೆದವರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

English summary
Fire accident at Shivamogga Gandhi Bazar shop. Fire engine rushed the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X