ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೆಂಪು ವಿವಿ ಘಟಿಕೋತ್ಸವ: ಸರ್ಕಾರಿ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿನಿಗೆ 11 ಚಿನ್ನದ ಪದಕ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 17: ಕುವೆಂಪು ವಿಶ್ವ ವಿದ್ಯಾನಿಲಯದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕ ಪಡೆದು ಚಿನ್ನದ ಬೇಟೆಯಾಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಅತ್ಯಧಿಕ ಸ್ವರ್ಣ ಪದಕ ಬಹುಮಾನಗಳಿಗೆ ಪಾತ್ರವಾಗಿರುವುದು ವಿಶೇಷವಾಗಿದೆ.

ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ನಡೆದ 31 ಮತ್ತು 32ನೇ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು. ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಸನ್ಮಾನಿಸಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ ಭಾರಿಯು ವಿದ್ಯಾರ್ಥಿನಿಯರು ಚಿನ್ನದ ಬೇಟೆ ಮುಂದುವರೆಸಿದ್ದು, ಅತಿ ಹೆಚ್ಚು ಚಿನ್ನದ ಪದಕ ಮತ್ತು ನಗದು ಪುರಸ್ಕಾರಗಳನ್ನು ವಿದ್ಯಾರ್ಥಿನಿಯರಿಗೆ ಬಾಚಿಕೊಂಡಿದ್ದಾರೆ.

ಧಾರವಾಡ; 9 ಚಿನ್ನದ ಪದಕ ಪಡೆದ ಪಂಚಾಯಿತಿ ಡಿ ದರ್ಜೆ ಉದ್ಯೋಗಿ ಪುತ್ರಿ ಧಾರವಾಡ; 9 ಚಿನ್ನದ ಪದಕ ಪಡೆದ ಪಂಚಾಯಿತಿ ಡಿ ದರ್ಜೆ ಉದ್ಯೋಗಿ ಪುತ್ರಿ

2019-20 ಸಾಲಿನ ಶೈಕ್ಷಣಿಕ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ಪ್ರಣೀತಾ ಎಂ. ಟಿ. ಅವರು ಒಟ್ಟು 8 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ. ಇನ್ನು 2020-21 ನೇ ಸಾಲಿನ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ.

ಕೂಲಿ ಕಾರ್ಮಿಕನ ಮಗಳಿಗೆ 11 ಚಿನ್ನ

ಕೂಲಿ ಕಾರ್ಮಿಕನ ಮಗಳಿಗೆ 11 ಚಿನ್ನ

ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಮುಕ್ಕಾಲು ಎಕರೆ ಜಮೀನು ಹೊಂದಿರುವ ಕೃಷಿ ಕೂಲಿ ಕಾರ್ಮಿಕನ ಮಗಳಾದ ದಿವ್ಯಾ ಸರ್ಕಾರಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ್ದರು. ಇದೀಗ ಎಂಎ ಕನ್ನಡ ವಿಭಾಗದಲ್ಲಿ 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ. ಮನೆಯವರ ಮತ್ತಷ್ಟು ಗುರುಗಳ ಸಹಕಾರವೇ ನನ್ನ ಸಾಧನೆಗೆ ಕಾರಣ. ನಮ್ಮ ತಂದೆ ನಾಗರಾಜ್, ಅಮ್ಮ ಭವಾನಿ. ನಮ್ಮೂರು ಹಣಗೆರೆಕಟ್ಟೆ. ನಾಲ್ವರು ಹೆಣ್ಣುಮಕ್ಕಳಲ್ಲಿ ನಾನು ಮೂರನೆಯವಳು. ಇಬ್ಬರು ಅಕ್ಕಂದಿರಿಗೆ ವಿವಾಹವಾಗಿದೆ. ಅವರಿಗೂ ನಾನು ಎಂಎ ಓದಬೇಕೆಂಬ ಆಸೆಯಿತ್ತು. ಅದನ್ನು ನಾನು ಈಡೇರಿಸಿದ್ದೇನೆ ದಿವ್ಯಾ ತಮ್ಮ ಕುಟುಂಬದ ಹಿನ್ನಲೆ ಹೇಳಿಕೊಂಡಿದ್ದಾರೆ.

ಕೆಎಎಸ್‌ ಮಾಡುವ ಹಂಬಲ

ಕೆಎಎಸ್‌ ಮಾಡುವ ಹಂಬಲ

ಭವಿಷ್ಯದ ಬಗ್ಗೆ ಮಾತನಾಡಿ, ಅಪ್ಪ ಅಮ್ಮ ಕಷ್ಟಪಟ್ಟು ಕೂಲಿ ಕೆಲಸ ಮಾಡಿ ನನ್ನನ್ನ ಓದಿಸಿದ್ದಾರೆ. ನನಗೆ ಇಷ್ಟೊಂದು ಪದಕಗಳು ಬರುತ್ತವೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಮುಂದೆ ಪಿಎಚ್‌ಡಿ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ. ಎಸ್‌ಐ ಆಗಬೇಕೆಂಬ ಆಸೆಯಿದೆ, ಕೆಎಎಸ್ ಮಾಡಬೇಕೆಂಬ ಬಯಕೆಯೂ ಇದೆ. ನನ್ನ ಸಾಧನೆಗೆ ನಮ್ಮ ತಂದೆ, ತಾಯಿ ಹಾಗೂ ವಿವಿಯ ಅಧ್ಯಾಪಕ ವರ್ಗದವರು ಕಾರಣರಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಅರ್ಪಿಸುತ್ತೇನೆ" ಎಂದರು.

8 ಚಿನ್ನದ ಪದಕ ಪಡೆದ ಭರತನಾಟ್ಯ ಕಲಾವಿದೆ

8 ಚಿನ್ನದ ಪದಕ ಪಡೆದ ಭರತನಾಟ್ಯ ಕಲಾವಿದೆ

ಬುಕ್‌ ಬ್ರಹ್ಮದಲ್ಲಿ ನಿರೂಪಕಿಯಾಗಿ ಮತ್ತು ಸಾಮಾಜಿಕ ಜಾಲಾತಾಣದ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪ್ರಣಿತಾ ಎನ್‌.ಪಿ ಕನ್ನಡ ವಿಭಾಗದಲ್ಲಿ 8 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ. ಕೊಪ್ಪ ತಾಲೂಕಿನ ಹರಿಹರ ಪುರದ ಕೃಷಿ ಕುಟುಂಬದಿಂದ ಬಂದಿದ್ದ ಪ್ರಣಿತಾ ಭರತಾ ನಾಟ್ಯದಲ್ಲಿ ಪ್ರವೀಣೆಯಾಗಿದ್ದಾರೆ.

"ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯಬೇಕೆಂದ ಉದ್ದೇಶದಿಂದ ಓದಿಲ್ಲ. ತರಗತಿಯಲ್ಲಿ ಶ್ರದ್ಧೆಯಿಂದ ಪಾಠ ಕೇಳಿದ್ದೇನೆ. 8 ಸ್ವರ್ಣ ಪದಕ ಪಡೆಯಲು ಮನೆಯವರು, ಗುರುಗಳ ಸಹಕಾರ ಕಾರಣ. ಇದಕ್ಕಿಂತ ಹೆಚ್ಚಾಗಿ ಕುವೆಂಪು ವಿವಿಯಲ್ಲಿ ಅತ್ಯುತ್ತಮ ಗ್ರಂಥಾಲಯವಿದೆ. ಈ ಗ್ರಂಥಾಲಯ ನನ್ನ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧ್ಯಯನ ಸಾಮಗ್ರಿಗಳು ಸಾಕಷ್ಟಿದ್ದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಷ್ಟು ವಿಷಯ ಈ ಗ್ರಂಥಾಲಯದಲ್ಲಿ ಸಿಗುತ್ತದೆ. ನಮ್ಮ ತಂದೆ ತಾಯಿ ಓದು ಎಂದು ಎಂದೂ ಹೇಳುತ್ತಿರಲಿಲ್ಲ. ಒತ್ತಡವೂ ಇರಲಿಲ್ಲ. ಸ್ವರ್ಣ ಪದಕ ಸಿಗುತ್ತೆ ಎಂಬ ನಂಬಿಕೆಯೂ ಇರಲಿಲ್ಲ. ಆದರೆ, ಆಸಕ್ತಿ ಮತ್ತು ಆತ್ಮಸ್ಥೈರ್ಯದಿಂದ ಅಧ್ಯಯನ ನಡೆಸಿದ್ದೆ. ಅದು ಫಲ ಕೊಟ್ಟಿದೆ ಎಂದು ಪ್ರಣೀತಾ ಹೇಳಿದರು.

ಕನ್ನಡ ಬದುಕು ಕಲಿಸುತ್ತದೆ

ಕನ್ನಡ ಬದುಕು ಕಲಿಸುತ್ತದೆ

"ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಖಂಡಿತ ಬೇಡ. ನಾನು ಕನ್ನಡ ಭಾಷೆಯನ್ನೇ ತೆಗೆದುಕೊಂಡು ಓದಿದ್ದೇನೆ. ಪದವಿಯಲ್ಲೂ ಕನ್ನಡವನ್ನೇ ಮುಖ್ಯ ಭಾಷೆಯನ್ನಾಗಿ ಓದಿದ್ದೇನೆ. ಕನ್ನಡ ನನಗೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ. ನಾನು ಕನ್ನಡ ಅಧ್ಯಾಪಕಿ ಆಗಬೇಕು ಎಂಬ ಆಸೆ ಹೊಂದಿದ್ದೇನೆ" ಎಂದು ಪ್ರಣೀತಾ ತಿಳಿಸಿದರು.

"ರ‍್ಯಾಂಕ್ ಪಡೆದವರಿಗೆ ಉದ್ಯೋಗ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಬೇಡ. ಸರಕಾರಿ ಉದ್ಯೋಗವಲ್ಲದೇ ಬೇರೆ ಬೇರೆ ಕಡೆ ವಿಫುಲವಾದ ಅವಕಾಶಗಳು ನನಗಿವೆ. ಅಂಕಗಳಿಗಿಂತ ನಮ್ಮ ಕ್ರಿಯಾಶೀಲತೆ ಮತ್ತು ತಿಳಿವಳಿಕೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಸಹಾಯ ಮಾಡುತ್ತವೆ. ಹಾಗಾಗಿಯೇ ಯುವಕರು ಕೇವಲ ಅಂಕಗಳ ಹಿಂದೆ ಬೀಳದೆ, ಕ್ರೀಡೆ, ಕರಕುಶಲ, ಮಾತಿನ ಜಾಣ್ಮೆ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು "ಎಂದು ಪ್ರಣೀತಾ ಕಿವಿಮಾತು ಹೇಳಿದರು.

(ಒನ್ಇಂಡಿಯಾ ಸುದ್ದಿ)

English summary
Farmer's daughter Divya from Thirthahalli, Shivamogga district, has bagged 11 gold medal in MA Kannada during the 31st and 32nd Convocation of Kuvempu University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X