ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ, ಹಣಕ್ಕಾಗಿ ಮೆಸೇಜ್

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 15 : ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದೆ. ವಂಚಕರು ಎಲ್ಲಾ ಸ್ನೇಹಿತರಿಗೆ ಸಂದೇಶ ಕಳಿಸುತ್ತಿದ್ದು, ಹಣ ನೀಡುವಂತೆ ಕೇಳುತ್ತಿದ್ದಾರೆ.

ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದೆ. ಇನ್ಸ್‌ಪೆಕ್ಟರ್ ಫೋಟೋ ಬಳಸಿಕೊಳ್ಳಲಾಗಿದೆ.

ಭಾರತದ ಮೇಲೆ ಚೀನಿ ಗ್ಯಾಂಗ್‌ನ ಸೈಬರ್ ಯುದ್ಧ ಭಾರತದ ಮೇಲೆ ಚೀನಿ ಗ್ಯಾಂಗ್‌ನ ಸೈಬರ್ ಯುದ್ಧ

"ತಾವು ಸಂಕಷ್ಟದಲ್ಲಿದ್ದು, ತುರ್ತಾಗಿ ಹಣ ನೀಡಿ" ಎಂದು ಫ್ರೆಂಡ್ ಲಿಸ್ಟ್‌ನಲ್ಲಿರುವ ಎಲ್ಲಾ ಸ್ನೇಹಿತರಿಗೆ ವಂಚಕರು ಸಂದೇಶ ಕಳಿಸುತ್ತಿದ್ದಾರೆ. 2 ಸಾವಿರದಿಂದ 20 ಸಾವಿರದ ತನಕ ಹಣಕ್ಕಾಗಿ ಸಂದೇಶ ಕಳಿಸಲಾಗುತ್ತಿದೆ.

ನಕಲಿ ಟ್ವೀಟ್ ಖಾತೆ; ಸೈಬರ್ ಕ್ರೈಂಗೆ ಬಿ. ವೈ. ವಿಜಯೇಂದ್ರ ದೂರು ನಕಲಿ ಟ್ವೀಟ್ ಖಾತೆ; ಸೈಬರ್ ಕ್ರೈಂಗೆ ಬಿ. ವೈ. ವಿಜಯೇಂದ್ರ ದೂರು

Fake FaceBook Account In The Name Of Police Officer

ಈ ವಿಚಾರ ತಿಳಿಯುತ್ತಿದ್ದಂತೆ ಅಭಯ್ ಪ್ರಕಾಶ್ ಸೋಮನಾಳ್ ತಮ್ಮ ಅಸಲಿ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಫ್ರೆಂಡ್ ಲಿಸ್ಟ್‌ನಲ್ಲಿರುವ ಯಾವ ಸ್ನೇಹಿತರು ಹಣ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಫೇಸ್‌ಬುಕ್-ಬಿಜೆಪಿ ನಂಟು: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿಫೇಸ್‌ಬುಕ್-ಬಿಜೆಪಿ ನಂಟು: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ

ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ವಂಚಕರು ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್‌ ಸಹ ಕಳಿಸುತ್ತಿದ್ದಾರೆ. ತುರ್ತಾಗಿ ಹಣವನ್ನು ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಶಿವಮೊಗ್ಗದ ಪೊಲೀಸ್ ಅಧಿಕಾರಿಯೊಬ್ಬರ ಫೇಸ್ ಬುಕ್ ಖಾತೆ ಕಳೆದ ತಿಂಗಳು ಹ್ಯಾಕ್ ಆಗಿತ್ತು. ಈಗ ಮತ್ತೊಬ್ಬ ಅಧಿಕಾರಿಯ ಖಾತೆಗೆ ಹ್ಯಾಕರ್‌ಗಳು ಕೈ ಹಾಕಿದ್ದಾರೆ.

English summary
Fake face book account created in the name of police inspector and message to friends for money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X