ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್ 17ಕ್ಕೆ ಹರತಾಳು ಹಾಲಪ್ಪ ಅತ್ಯಾಚಾರ ಕೇಸ್ ತೀರ್ಪು

By Mahesh
|
Google Oneindia Kannada News

ಶಿವಮೊಗ್ಗ, ಆಗಸ್ಟ್ 08 : ಒಂದು ದಿನ ಕೂಡಾ ಜೈಲು ವಾಸ ಅನುಭವಿಸದೆ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಾರಿ ಜಾಮೀನು ಪಡೆದು ಆರಾಮಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಆಗಸ್ಟ್ 17ರ ತನಕ ಕೋರ್ಟ್ ತಲೆಬಿಸಿಯಿಲ್ಲ.

ಚಂದ್ರಾವತಿ ಬಟ್ಟೆ ಮೇಲೆ ಇತ್ತು ಹಾಲಪ್ಪ ವೀರ್ಯ : ಸಿಐಡಿಚಂದ್ರಾವತಿ ಬಟ್ಟೆ ಮೇಲೆ ಇತ್ತು ಹಾಲಪ್ಪ ವೀರ್ಯ : ಸಿಐಡಿ

ಶಿವಮೊಗ್ಗ 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಏಳೆಂಟು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ನೀಡುವ ನಿರೀಕ್ಷೆಯಿತ್ತು. ಆದರೆ, ತೀರ್ಪನ್ನು ಆಗಸ್ಟ್ 17ಕ್ಕೆ ಕಾಯ್ದಿರಿಸಿದೆ.

ಅವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಕಾಯ್ದಿರಿಸಿದೆ. 2009 ರ ನವೆಂಬರ್ 26 ರಂದು ಸಂತ್ರಸ್ಥ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅಂದು ಸಚಿವರಾಗಿದ್ದ ಹಾಲಪ್ಪ ರಾಜೀನಾಮೆ ನೀಡಿದ್ದರು. ಐ.ಪಿ.ಸಿ. ಸೆಕ್ಷನ್ 376, 342, 506, 341 ಹಾಗೂ 34 ರ ಅಡಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸಿದ್ದರು.

Ex Minister Haratal Halappa case : district court reserves order for Aug 17

ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಸಹಮತದ ಸೆಕ್ಸ್ ಎಂದು ಸಿಐಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಸುದ್ದಿಗೆ ಹೊಸ ತಿರುವು ಸಿಕ್ಕಿತ್ತು. ಹಾಲಪ್ಪ ನಡೆಸಿದ್ದು ಅತ್ಯಾಚಾರ ಎಂದು ಹೈದರಾಬಾದಿನ ಲ್ಯಾಬ್ ವರದಿ ನೀಡಿದ್ದು, ಎರಡೆರಡು ಬಾರಿ ಪರೀಕ್ಷೆ ನಡೆಸಿ ದೃಢಪಡಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿದ್ದವು.

ಸಿಐಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 2009ರ ನವೆಂಬರ್ 27ರಂದು ರಾತ್ರಿ ಹಾಲಪ್ಪ ತನ್ನ ಗೆಳೆಯ ವೆಂಕಟೇಶಮೂರ್ತಿಯ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದು ಉಲ್ಲೇಖಿಸಲಾಗಿದೆ. ಈ ಐಪಿಸಿ ಸೆಕ್ಷನ್ 376ರ ಅನ್ವಯ ಆರೋಪಪಟ್ಟಿಯನ್ನು ಬೆಂಗಳೂರು ಸಿಐಡಿ ಪತ್ತೆ ನಿರೀಕ್ಷಕ ಎಂ ಎಸ್ ಕೌಲಪುರೆ ಅವರು ಸಲ್ಲಿಸಿದ್ದರು.

English summary
Rape case on Ex Minister Haratal Halappa, district court reserved its final verdict for Aug 17. The charges against him include rape, intimidation, and unlawful restraint and confinement. Halappa has denied the charges, accusing his political rivals of trying to malign him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X