ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣಗೆರೆಕಟ್ಟೆಗೆ ಬಾರದಂತೆ ತಾಲ್ಲೂಕು ಆಡಳಿತ ಭಕ್ತರಿಗೆ ಸೂಚನೆ

|
Google Oneindia Kannada News

ತೀರ್ಥಹಳ್ಳಿ, ಜುಲೈ 7: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ದೇವಸ್ಥಾನದಲ್ಲಿ ಮತ್ತೆ ಭಕ್ತರಿಗೆ ನಿರ್ಬಂಧ ಏರಲಾಗಿದೆ. ದೇವಸ್ಥಾನಕ್ಕೆ ಬಾರದೆ ಇರುವಂತೆ ಭಕ್ತರಿಗೆ ತಾಲ್ಲೂಕು ಆಡಳಿತ ಸೂಚನೆ ನೀಡಿದೆ.

ಲಾಕ್‌ಡೌನ್ ಸಡಿಲಿಕೆಯ ನಂತರ ರಾಜ್ಯದ ಅನೇಕ ದೇವಸ್ಥಾನಗಳನ್ನು ತೆರೆಯಲಾಗಿದೆ. ಆದರೆ, ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಕೆಲವು ದೇವಸ್ಥಾನಗಳು ಭಕ್ತರ ಪ್ರವೇಶಕ್ಕೆ ನಿರ್ಬಂಧ ತಂದಿವೆ. ಹಣಗೆರೆಕಟ್ಟೆಯ ಚೌಡೇಶ್ವರಿ ಭೂತರಾಯಸ್ವಾಮಿ ಹಾಗೂ ಸೈಯದ್‌ ಸಾದತ್‌ ಅಲಿ ದರ್ಗಾದ ದರ್ಶನಕ್ಕೆ ಅವಕಾಶ ನೀಡಲಾಗುತ್ತಿಲ್ಲ.

ಇನ್ಮುಂದೆ ಭಕ್ತ ಮನೆ ಬಾಗಿಲಿಗೇ ಬರಲಿದೆ ಕಾಶಿ ವಿಶ್ವನಾಥನ ಪ್ರಸಾದಇನ್ಮುಂದೆ ಭಕ್ತ ಮನೆ ಬಾಗಿಲಿಗೇ ಬರಲಿದೆ ಕಾಶಿ ವಿಶ್ವನಾಥನ ಪ್ರಸಾದ

ಲಾಕ್‌ಡೌನ್‌ ವೇಳೆ ದರ್ಶನಕ್ಕೆ ಇದ್ದ ನಿರ್ಬಂಧ ಹಾಗೆಯೇ ಇತ್ತು. ಆದರೆ, ಭಕ್ತರ ಮನವಿಯಿಂದ ದೇವಸ್ಥಾನದ ಹೊರಗೆ ನಿಂತು ನಮಸ್ಕಾರ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಭಕ್ತರಿಗೆ ಅವಕಾಶ ನೀಡಿರುವ ಕಾರಣ ದೇವಸ್ಥಾನದ ಆವರಣದಲ್ಲಿ ಸ್ವಚ್ಚತೆ ಕಾಪಾಡಲು ಆಗುತ್ತಿಲ್ಲ.

Entry Restricted for Devotees to HanagereKatte Temple Until August 15

ದೇವಸ್ಥಾನಕ್ಕೆ ಬರುವ ಭಕ್ತರು ತೆಂಗಿನಕಾಯಿ ಒಡೆದು, ಕುಂಕುಮ, ಹೂ ಎಸೆದು ಪರಿಸರ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತಿಯಿಂದ ಸಹ ಬಂದಿದೆ. ಹೀಗಾಗಿ, ತಾಲೂಕು ಆಡಳಿತ ಭಕ್ತರಿಗೆ ಆಗಸ್ಟ್‌ 15 ರವರೆಗೆ ಬಾರದು ಇರುವಂತೆ ತಿಳಿಸಿದೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ನಿನ್ನೆ ಮಧ್ಯರಾತ್ರಿಯಿಂದ ನಿಷೇದಾಜ್ಞೆ ಜಾರಿಯಾಗಿದೆ. ಈ ಭಾಗದಲ್ಲಿ ಐಪಿಸಿ ಸೆಕ್ಷನ್ 144 ಜಾರಿಯಲ್ಲಿ ಇದ್ದೂ, 5ಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರುವ ಹಾಗೆ ಇಲ್ಲ. ಸದ್ಯಕ್ಕೆ ಆಗಸ್ಟ್‌ 15 ರವರೆಗೆ ಇರು ಜಾರಿಯಲ್ಲಿ ಇರಲಿದೆ.

English summary
Entry restricted for devotees to hanagerekatte temple until august 15 due to rise in coronavirus cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X