ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಟ್ಟಿನಲ್ಲಿ ಮಾವುತನನ್ನೇ ಅಟ್ಟಾಡಿಸಿದ ಸಕ್ರೆಬೈಲಿನ ಸಾಕಾನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್‌, 12: ಸಕ್ರೆಬೈಲಿನ ಸಾಕಾನೆಯೊಂದು ಬಿಡಾರದಿಂದ ಕಾಡಿಗೆ ಹೋಗುವಾಗ ತನ್ನ ಮಾವುತನ ಮೇಲೆ ಮುನಿಸಿಕೊಂಡು, ಬೆನ್ನಿತ್ತಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು ಸಖತ್‌ ಸದ್ದು ಮಾಡುತ್ತಿದೆ.

ಸಕ್ರೆಬೈಲು ಬಿಡಾರದ ಮಣಿಕಂಠ ಎಂಬ ಹೆಸರಿನ ಆನೆ ತನ್ನ ಮಾವುತ ಖಲೀಲ್ ಅವರ ಮೇಲೆ ದಾಳಿಗೆ ಮುಂದಾಗಿದೆ. ಆನೆಯ ಮುನಿಸಿನ ಬಗ್ಗೆ ತಿಳಿದ ಖಲೀಲ್ ಅವರು ಓಡಲು ಯತ್ನಿಸಿದ್ದಾರೆ. ನಂತರ ಆನೆ ಅವರನ್ನು ಬೆನ್ನಟ್ಟಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

Mysuru Dasara 2022 : ಕುಶಾಲು ತೋಪು ತಾಲೀಮು ವೇಳೆ ಬೆದರಿದ ಸುಗ್ರೀವ, ಶ್ರೀರಾಮMysuru Dasara 2022 : ಕುಶಾಲು ತೋಪು ತಾಲೀಮು ವೇಳೆ ಬೆದರಿದ ಸುಗ್ರೀವ, ಶ್ರೀರಾಮ

ಸಿಸಿಟಿವಿ ವಿಡಿಯೋದಲ್ಲಿ ಏನಿದೆ?
ಮಣಿಕಂಠ ಆನೆಯನ್ನು ಬಿಡಾರದಿಂದ ಕಾಡಿಗೆ ಕರೆದೊಯ್ಯಲಾಗುತ್ತಿತ್ತು. ಕಾವಾಡಿ ಇಮ್ರಾನ್ ಆನೆಯ ಮೇಲೆ ಕುಳಿತಿದ್ದರು. ನಂತರ ಬಿಡಾರದ ಮುಂದೆ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಆನೆ ದಾಟುತ್ತಿರುವಾಗ, ಮಾವುತ ಖಲೀಲ್ ಅವರು ಬೈಕ್‌ನಲ್ಲಿ ಆನೆಯ ಹಿಂದೆ ಸಾಗುತ್ತಿದ್ದರು. ಖಲೀಲ್ ಅವರು ಬರುತ್ತಿರುವುದನ್ನು ಗಮನಿಸಿದ ಮಣಿಕಂಠ ಏಕಾಏಕಿ ಅವರತ್ತ ತಿರುಗಿ ನಿಲ್ಲುತ್ತದೆ. ಮಣಿಕಂಠನ ಸಿಟ್ಟು ಗಮನಿಸಿದ ಖಲೀಲ್ ಅವರು ಬೈಕ್ ಅನ್ನು ಬಿಟ್ಟು ಓಡುತ್ತಾರೆ. ನಂತರ ಆನೆಯು ಅವರನ್ನು ಬೆನ್ನಟ್ಟುತ್ತದೆ. ಖಲೀಲ್ ಅವರು ಬಿಡಾರದ ಕಡೆಯಿಂದ ಜಂಗಲ್ ರೆಸಾರ್ಟ್ ಕಡೆಗೆ ಓಡಿ ಹೋಗುತ್ತಾರೆ. ಆದರೂ ಮಣಿಕಂಠ ಅವರನ್ನು ಬಿಡದೇ ಬೆನ್ನತ್ತಿ ಹೋಗುತ್ತದೆ.

Shivamogga: Elephant attacked mahout at Sakrebyle

ಕಾರಿನಲ್ಲಿದ್ದವರಿಗೆ ಢವಢವ
ಇತ್ತ ಆನೆ ಬಿಡಾರದ ಮುಂದೆ ಕಾರಿನಲ್ಲಿದ್ದ ಕುಟುಂಬದವರು ಆನೆ ಮಾವುತನನ್ನು ಬೆನ್ನಟ್ಟಿದ್ದನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಖಲೀಲ್ ಅವರು ಬೈಕ್ ಅನ್ನು ಬಿಟ್ಟು ಓಡುವುದನ್ನು ಗಮನಿಸಿ ಕಾರಿನಲ್ಲಿದ್ದ ಮಹಿಳೆ ಬಾಗಿಲು ತೆಗೆದು ಕೆಳಗಿಳಿಯಲು ಮುಂದಾಗುತ್ತಾರೆ. ಅದರೆ ಆನೆ ಓಡಿ ಬಂದಿದ್ದನ್ನು ಗಮನಿಸಿ ಆತಂಕದಿಂದ ಕಾರಿನೊಳಗೆ ಕುಳಿತು ಬಾಗಿಲು ಹಾಕಿಕೊಳ್ಳುತ್ತಾರೆ. ಮಾವುತ ಖಲೀಲ್ ಅವರನ್ನು ಬೆನ್ನಟ್ಟಿದ ಮಣಿಕಂಠನಿಗೆ ಅರವಳಿಕೆ ನೀಡಿ, ಇತರೆ ಆನೆಗಳ ಸಹಾಯದಿಂದ ಕಟ್ಟಿ ಹಾಕಲಾಗಿದೆ. ಮಣಿಕಂಠ ಈ ಹಿಂದೆ ತುಂಗಾ ಹೊಳೆಯಲ್ಲಿ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿಗೆ ಮುಂದಾಗಿತ್ತು. ಬಿಡಾರದಲ್ಲಿಯೂ ಇತರೆ ಆನೆಗಳ ಜೊತೆ ಜಗಳ ಸಾಮಾನ್ಯವಾಗಿದೆ.

Shivamogga: Elephant attacked mahout at Sakrebyle

ಹೀಗೆ ಕಾಡಾನೆಗಳು ಒಂದಿಲ್ಲೊಂದು ಅಪಾಯವನ್ನು ಉಂಟು ಮಾಡುತ್ತಿದ್ದು, ಅಲ್ಲಿದ್ದ ಜನರು ಆತಕಂಕ್ಕೆ ಒಳಗಾಗಿದ್ದಾರೆ. ಇನ್ನು ಕಾಫಿನಾಡಿನ ಭಾಗಗಳಲ್ಲಿ ಅನೆಗಳು ಗೀಳಿಗಿಡುವುಸು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಗೀಳಿಗಿಡುವುದಲ್ಲದೇ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿಬಿಡುತ್ತವೆ. ಇದರಿಂದ ರೈತರು ಯಾವುದೇ ದಾರಿ ಇಲ್ಲದೇ ಕೊನೆಗೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುವುದು ಕೂಡ ಸಾಮಾನ್ಯವಾಗಿಬಿಟ್ಟಿದೆ.

English summary
sakrebailu elephant camp: Elephant attacked mahout, now this scene caught on CC camera, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X