ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಅನುಭವ, ಸ್ಕ್ರೀನ್ ಶಾಟ್ ವೈರಲ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್‌, 06: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಇಂದು ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಭಯಭೀತರಾದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ.

ಮಲೆನಾಡು ಅಡಿಕೆಗೆ ಎಲೆ ಚುಕ್ಕೆ ರೋಗ; ಪರಿಹಾರಕ್ಕೆ ಆಗ್ರಹಿಸಿ ಅ. 3ಕ್ಕೆ ರೈತರ ಸಮಾವೇಶಮಲೆನಾಡು ಅಡಿಕೆಗೆ ಎಲೆ ಚುಕ್ಕೆ ರೋಗ; ಪರಿಹಾರಕ್ಕೆ ಆಗ್ರಹಿಸಿ ಅ. 3ಕ್ಕೆ ರೈತರ ಸಮಾವೇಶ

ಬೆಳಗಿನ ಜಾವ 3:55ರ ಹೊತ್ತಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ. ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲೂ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ.

Earthquake experience in Shiralakoppa, screen shot viral

ಮನೆಯಿಂದ ಹೊರಬಂದ ಜನ:
ಭೂಮಿ ಕಂಪನದ ಅನುಭವ ಆಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದಿದ್ದು, ಕೆಲವರು ಜೋರು ಶಬ್ದವಾಯಿತು ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದವರು ಭೂಮಿ ಕಂಪನದ ಅನುಭವದಿಂದ ಆತಂಕಗೊಂಡಿದ್ದರು.ಇನ್ನು ಈ ಕುರಿತು ಮಾತನಾಡಿದ ತಹಶೀಲ್ದಾರ್ ಕವಿರಾಜ್ ಅವರು, 'ಶಿರಾಳಕೊಪ್ಪ ಪಟ್ಟಣದ ಒಂದು ಕಿಲೋ ಮೀಟರ್‌ ಸುತ್ತಳತೆಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಜನರು ತಿಳಿಸಿದ್ದಾರೆ. ಇದು ಭೂಕಂಪನವೋ ಅಥವಾ ಬೇರೆ ಏನಾದರು ಕಾರಣವೋ ಅನ್ನುವ ಕುರಿತು ಇನ್ನು ತಿಳಿದುಕೊಳ್ಳಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇವೆ. ಬೆಂಗಳೂರಿನಿಂದ ಅಧಿಕೃತ ವರದಿ ಬರಬೇಕಿದೆ' ಎಂದು ತಿಳಿಸಿದರು.

Earthquake experience in Shiralakoppa, screen shot viral

ಹರಿದಾಡಿದ ಸ್ಕ್ರೀನ್ ಶಾಟ್
ಮತ್ತೊಂದೆಡೆ ಶಿರಾಳಕೊಪ್ಪದಲ್ಲಿ ಭೂಕಂಪನ ಸಂಭವಿಸಿದೆ ಎಂದು ಮೊಬೈಲ್‌ನಲ್ಲಿನ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. ಶಿರಾಳಕೊಪ್ಪದಲ್ಲಿ 4.1 ತೀವ್ರತೆಯ ಭೂಕಂಪನ ಆಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ಮ್ಯಾಪ್‌ನಲ್ಲಿ ಶಿರಾಳಕೊಪ್ಪದಲ್ಲಿ ಕೆಂಪು ಮಾರ್ಕ್ ತೋರಿಸಲಾಗಿದೆ. ಆದರೆ ಜಿಲ್ಲಾಡಳಿತ, ತಾಲೂಕು ಆಡಳಿತ ಭೂಕಂಪನದ ಕುರಿತು ಇನ್ನು ಖಚಿತ ಮಾಹಿತಿಯನ್ನು ನೀಡಿಲ್ಲ. ಮತ್ತೊಂದೆಡೆ ಭೂಕಂಪನ ಅಧ್ಯಯನ ಮಾಡುವ ಪ್ರತಿಷ್ಠಿತ ಸಂಸ್ಥೆಗಳು ಕೂಡ ಭೂಕಂಪನದ ಕುರಿತು ಖಚಿತಪಡಿಸಿಲ್ಲ. ಇನ್ನುಈ ಹಿಂದೆ 2019ರ ಫೆಬ್ರವರಿ 3ರಂದು ತೀರ್ಥಹಳ್ಳಿ ತಾಲೂಕು ವಿಠಲ ನಗರದಲ್ಲಿ ಭೂಕಂಪನ ಸಂಭವಿಸಿತ್ತು. ಆಗ ರಿಕ್ಟರ್ ಮಾಪನದಲ್ಲಿ 2.2 ತೀವ್ರತೆ ಭೂಮಿ ಕಂಪಿಸಿದ್ದ ಬಗ್ಗೆ ದಾಖಲಾಗಿತ್ತು. ಇನ್ನು ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸ್ಫೋಟ ಸಂಭವಿಸಿ, ಜಿಲ್ಲೆಯಾದ್ಯಂತ ಕಂಪನದ ಅನುಭವ ಉಂಟಾಗಿತ್ತು.

English summary
Earthquake experience in Shiralakoppa of Shikaripura taluk morning. people came out house. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X