ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಡಿ ಅಧಿಕಾರಿಗಳಿಗೆ ಸಮಾಧಾನವಾಗಬೇಕಿದ್ದರೆ, ಡಿಕೆಶಿ ಈ ಕೆಲಸ ಮಾಡಲಿ!

|
Google Oneindia Kannada News

Recommended Video

ಡಿಕೆಶಿಗೆ ಕಾನೂನು ಪಾಠ ಹೇಳಿದ ಸಿಟಿ ರವಿ | Oneindia Kannada

ಶಿವಮೊಗ್ಗ, ಸೆ 14: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸಮಾಧಾನ ಆಗಬೇಕಾದರೆ ಡಿ.ಕೆ.ಶಿವಕುಮಾರ್ ಏನು ಮಾಡಬೇಕು ಎನ್ನುವುದರ ಬಗ್ಗೆ ಪ್ರವಾಸೋದ್ಯಮ ಖಾತೆಯ ಸಚಿವ ಸಿ.ಟಿ.ರವಿ ಸಲಹೆಯನ್ನು ನೀಡಿದ್ದಾರೆ.

ನಗರದಲ್ಲಿ ಮಾತನಾಡುತ್ತಿದ್ದ ಸಚಿವ ರವಿ, "ಇಡಿ ಅಧಿಕಾರಿಗಳ ಪ್ರಶ್ನೆಗೆ ಡಿಕೆಶಿ ಸಮರ್ಪಕವಾದ ಉತ್ತರ ನೀಡಿರಲಿಕ್ಕಿರಲಿಲ್ಲ. ಹಾಗಾಗಿ, ವಿಚಾರಣೆಯನ್ನು ಮುಂದುವರಿಸಿರಬಹುದು" ಎಂದು ರವಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಕಾನೂನೇ ಸುಪ್ರೀಂ; ಡಿಕೆಶಿಗೆ ಕಾನೂನು ಪಾಠ ಹೇಳಿದ ಸಿ.ಟಿ.ರವಿಕಾನೂನೇ ಸುಪ್ರೀಂ; ಡಿಕೆಶಿಗೆ ಕಾನೂನು ಪಾಠ ಹೇಳಿದ ಸಿ.ಟಿ.ರವಿ

" ಇಡಿ ಅಧಿಕಾರಿಗಳಿಗೆ ಸಮಾಧಾನ ಆಗಬೇಕಾದರೆ ಡಿ.ಕೆ.ಶಿವಕುಮಾರ್ ಸತ್ಯವನ್ನು ಹೇಳಬೇಕು" ಎಂದು ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. 'ಇಡಿ ತನಿಖೆಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ" ಎಂದು ರವಿ, ಪುನರುಚ್ಚಿಸಿದ್ದಾರೆ.

DK Shivakumar Should Come Out with Truth During ED Interrogation: CT Ravi Statement

" ಸತ್ಯವನ್ನು ಮರೆಮಾಚಬಾರದು, ಸತ್ಯ ಹೇಳುವುದನ್ನು ವಿಳಂಬ ಮಾಡುವುದು ಒಳ್ಲೆಯದಲ್ಲ" ಎಂದು ಸಿ.ಟಿ.ರವಿ, ಡಿಕೆಶಿಗೆ ಟಾಂಗ್ ನೀಡಿದ್ದಾರೆ.

"ಕಾನೂನು ಎಲ್ಲರಿಗಿಂತ ಸುಪ್ರೀಂ. ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಲೇಬೇಕು. ತಪ್ಪು ಮಾಡಿದ್ದರೆ ಕಾನೂನಿನ ಕ್ರಮ ಎದುರಿಸಲೇಬೇಕು. ತಪ್ಪಾಗಿಲ್ಲದಿದ್ರೆ ಯಾವುದೇ ಸಮಸ್ಯೆ ಆಗಲ್ಲ" ಎಂದು ಎರಡು ದಿನಗಳ ಹಿಂದೆ, ಸಚಿವ ರವಿ

ಡಿಕೆಶಿ ವಿಚಾರಣೆ: ಇಡಿ ಅಧಿಕಾರಿಗಳ ಈ ಹೇಳಿಕೆಗೆ ರಾಜಕಾರಣಿಗಳು ತಲೆ ತಗ್ಗಿಸಲೇಬೇಕುಡಿಕೆಶಿ ವಿಚಾರಣೆ: ಇಡಿ ಅಧಿಕಾರಿಗಳ ಈ ಹೇಳಿಕೆಗೆ ರಾಜಕಾರಣಿಗಳು ತಲೆ ತಗ್ಗಿಸಲೇಬೇಕು

"ಜನಾರ್ದನ ರೆಡ್ಡಿ ಬಂಧನವಾದಾಗ ನಾವು ಅವರನ್ನು ಸಮರ್ಥನೆ ಮಾಡಿಕೊಂಡಿರಲಿಲ್ಲ. ಅವರು ಬಿಜೆಪಿಯವರು ಹೌದು. ಹಾಗೆಂದು ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲಿಲ್ಲ. ಅವರನ್ನು ಬಂಧಿಸಲಾಗಿತ್ತು. ಜೈಲುವಾಸವನ್ನೂ ಅನುಭವಿಸಿದರು. ಡಿ.ಕೆ.ಶಿವಕುಮಾರ್ ತಪ್ಪೇ ಮಾಡಿಲ್ಲ ಅಂದ್ರೆ ಹೆದರುವ ಅವಶ್ಯಕತೆಯೇ ಇಲ್ಲ" ಎಂದು, ಸಿ.ಟಿ.ರವಿ ಹೇಳಿದ್ದಾರೆ.

English summary
Senior Congress Leader DK Shivakumar Should Come Out with Truth During ED Interrogation: Karnataka Toursim Minister CT Ravi Statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X