ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ಪಾಜಿ ಗೌಡರ ಸಾವಿನಿಂದ ಜಿಲ್ಲಾಡಳಿತ ಪಾಠ ಕಲಿಯಬೇಕು: ವೈಎಸ್ ವಿ ದತ್ತ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 5: ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವಿನಿಂದ ಜಿಲ್ಲಾಡಳಿತ ಪಾಠ ಕಲಿಯಬೇಕಾಗಿದೆ. ಮೆಗ್ಗಾನ್ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ವೈಎಸ್ ವಿ ದತ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Recommended Video

China ಗೌಪ್ಯವಾಗಿ ಕೈಗೊಂಡ ಕಾರ್ಯಾಚರಣೆ ಏನು ? | Oneindia Kannada

ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಪ್ಪಾಜಿ ಗೌಡರು ಕೊರೊನಾದಿಂದ ಸಾವನ್ನಪ್ಪಿರುವ ಶಂಕೆ ಇದೆ ವಿನಃ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಪರೀಕ್ಷೆಯೇ ನಡೆದಿಲ್ಲ. ಅಪ್ಪಾಜಿಯವರಿಗೆ ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೆ ಮೊನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಪ್ರಯತ್ನಿಸಲಾಯಿತು. ಮೆಗ್ಗಾನ್ ನಲ್ಲೂ ವೆಂಟಿಲೇಟರ್, ಬೆಡ್ ಇಲ್ಲ ಎಂದರು. ಡಿಸಿಗೆ ಫೋನಾಯಿಸಿದರೆ ಬೆಂಗಳೂರಿನಲ್ಲಿದ್ದೇನೆ ಎಂದರು. ಇಂಥ ಅವ್ಯವಸ್ಥೆ ಏಕೆ" ಎಂದುಪ್ರಶ್ನಿಸಿದರು.

ಹುಟ್ಟುಹಬ್ಬದ ಆಚರಣೆ ಬಗ್ಗೆ ಕಾರ್ಯಕರ್ತರಿಗೆ ವೈಎಸ್‌ವಿ ದತ್ತ ಮನವಿಹುಟ್ಟುಹಬ್ಬದ ಆಚರಣೆ ಬಗ್ಗೆ ಕಾರ್ಯಕರ್ತರಿಗೆ ವೈಎಸ್‌ವಿ ದತ್ತ ಮನವಿ

Shivamogga Administration Should Learn Lesson From Death Of Appajigowda Said YSV Datta

ಕೊನೆ ಕ್ಷಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಫೋನಾಯಿಸಿ ಮೆಗ್ಗಾನ್ ನಲ್ಲಿ ಕೊನೆ ಹಂತದಲ್ಲಿ ಬೆಡ್ ಸಿಕ್ಕಿತು ಅಂತ ಬಂದರೆ ಅಷ್ಟರೊಳಗೆ ಅಪ್ಪಾಜಿಯವರು ಸಾವನ್ನಪ್ಪಿದ್ದರು. ಅಪ್ಪಾಜಿ ಗೌಡರ ಸಾವಿನಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೊರೊನಾ ಚಿಕಿತ್ಸೆ ಸರಿಯಾಗಿ ದೊರೆಯುವಂತೆ ಆಗಲಿದೆಯಾ ಕಾದುನೋಡಬೇಕಿದೆ ಎಂದರು.

English summary
Shivamogga district administration should learn lesson from the death of bhadravathi former mla appajigowda's death. It should facilitate for the treatment of coronaviruss patients said vyv datta,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X