ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಚಾದ್ರಿ ಬೆಟ್ಟದ ಮೇಲೆ ಹೊಸ ವರ್ಷಾಚರಣೆಗೆ ಬೀಳಬಹುದು ಬ್ರೇಕ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 27: ಹೊಸನಗರದ ಪ್ರಸಿದ್ಧ ನಿಸರ್ಗಧಾಮ ಕೊಡಚಾದ್ರಿ ಗಿರಿಯ ಮೇಲ್ಭಾಗದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಹೊಸ ವರ್ಷಕ್ಕೆ ಬರಬೇಕೆಂದು ಪ್ಲಾನ್ ಮಾಡಿರುವ ಪ್ರವಾಸಿಗರಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

ವರ್ಷಾಂತ್ಯ ಹಾಗೂ ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಮೋಜು ಮಸ್ತಿ ಮತ್ತು ಫೈರ್ ಕ್ಯಾಂಪ್ ಗಳಿಂದ ಉಂಟಾಗಬಹುದಾದ ಅನಾಹುತ ತಪ್ಪಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಪ್ರವಾಸಿ ಗೃಹದಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ ಕೊಡಬಾರದು ಎಂದು ಅರಣ್ಯ ಇಲಾಖೆಯ ಕೊಲ್ಲೂರು ವನ್ಯಜೀವಿ ವಿಭಾಗ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ.

ಹೊಸ ವರ್ಷಕ್ಕೆ ಇನ್ನೂ ಯಾವ ಸಂಕಲ್ಪವೂ ಮಾಡಿಲ್ಲವಾ? ಇಲ್ಲಿದೆ ನಮ್ಮ ಸಲಹೆಹೊಸ ವರ್ಷಕ್ಕೆ ಇನ್ನೂ ಯಾವ ಸಂಕಲ್ಪವೂ ಮಾಡಿಲ್ಲವಾ? ಇಲ್ಲಿದೆ ನಮ್ಮ ಸಲಹೆ

Difficult To Get Rooms In Kodachadri Hills For New Year This Time

ಸರ್ಕಾರಿ ಅತಿಥಿಗೃಹ ಮಾತ್ರವಲ್ಲದೆ ಗಿರಿಯ ಸುತ್ತಮುತ್ತ ನಡೆಯುವ ಪ್ರವಾಸಿಗರ ಅಟಾಟೋಪಗಳತ್ತ ವನ್ಯಜೀವಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕೊಡಚಾದ್ರಿ ಗಿರಿಯ ಸುತ್ತಲಿನ ಪರಿಸರ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶವಾಗಿದ್ದು, ಕೊಡಚಾದ್ರಿ ಗಿರಿಯ ಹಿತದೃಷ್ಟಿಯಿಂದ ಪ್ರವಾಸಿ ಮಂದಿರದಲ್ಲಿ ತಂಗಲು ನಿರ್ಬಂಧ ಹೇರಬೇಕಾದುದು ಅನಿವಾರ್ಯ ಎಂದು ತಿಳಿಸಿದೆ.

Difficult To Get Rooms In Kodachadri Hills For New Year This Time

"ಇಲ್ಲಿಗೆ ಬರುವ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದು, ಪರಿಸರದಲ್ಲಿ ಫೈರ್ ಕ್ಯಾಂಪ್ ಹಾಕುತ್ತಾರೆ. ಆ ಕಾರಣಕ್ಕಾಗಿ ತಂಗಲು ಅವಕಾಶ ನೀಡಕೂಡದು' ಎಂದು ಇಲಾಖೆ ಸ್ಪಷ್ಟಪಡಿಸಿದೆ. ಡಿ. 28ರಿಂದ 2020ರ ಜನವರಿ 1ರವರಗೆ ಪ್ರವಾಸಿ ಮಂದಿರದಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ ನೀಡದಂತೆ ಪತ್ರ ಮುಖೇನ ಮನವಿ ಮಾಡಿದೆ.

English summary
Visitors who plan to celebrate New Year at the top of Kodachadri hills this time may have to think twice,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X