ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಿಎಂ ಯಡಿಯೂರಪ್ಪ ಒಡೆತನದ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್‌ಗಳಿಂದ ಡೀಸೆಲ್ ಕಳ್ಳತನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 1: ಶಿವಮೊಗ್ಗದ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ನಾಲ್ಕು ಬಸ್ಸುಗಳಲ್ಲಿ ಡೀಸೆಲ್ ಕಳ್ಳತನವಾಗಿದ್ದು, ರಾತ್ರಿ ವೇಳೆ ಡೀಸೆಲ್ ಟ್ಯಾಂಕ್‌ನ ಕ್ಯಾಪ್ ತೆಗೆದು 580 ಲೀಟರ್ ಡೀಸೆಲ್ ಕಳವು ಮಾಡಲಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಯ ಸಮೀಪದಲ್ಲೇ ಸೆಕ್ಯೂರಿಟಿಗಳಿದ್ದರೂ, ಕಳ್ಳರು ತಮ್ಮ ಕರಾಮತ್ತು ತೋರಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಈ ಸಮಯದಲ್ಲಿ ಡೀಸೆಲ್ ದರ ಏರಿಕೆಯಾಗಿರುವುದು ಕಳ್ಳತನಕ್ಕೆ ಕಾರಣವಾಗಿದೆ.

ಹೇಗಾಯ್ತು ಘಟನೆ?

ಶಿವಮೊಗ್ಗ ಸಮೀಪ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್‌ಮೆಂಟ್ ಬಳಿ ಘಟನೆ ಸಂಭವಿಸಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್‌ಗಳನ್ನು ರಾತ್ರಿ ತಂದು ನಿಲ್ಲಿಸಲಾಗಿತ್ತು. ಬೆಳಿಗ್ಗೆ ಚಾಲಕ ಬಂದು ಪರಿಶೀಲಿಸಿದಾಗ ಡೀಸೆಲ್ ಟ್ಯಾಂಕ್‌ಗಳ ಕ್ಯಾಪ್ ಓಪನ್ ಆಗಿರುವುದು ಬೆಳಕಿಗೆ ಬಂದಿದೆ.

 Shivanogga: Diesel Theft From Buses Belonging To An Educational Institute Owned By Former CM Yediyurappa

ಎರಡು ಬಸ್ಸುಗಳಲ್ಲಿ ತಲಾ 90 ಲೀಟರ್, ಒಂದು ಬಸ್ಸಿನಲ್ಲಿ ಅಂದಾಜು 250 ಲೀಟರ್, ಮತ್ತೊಂದರಲ್ಲಿ ಸುಮಾರು 150 ಲೀಟರ್ ಡೀಸೆಲ್ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. 55,454 ರೂ. ಮೌಲ್ಯದ 580 ಲೀಟರ್ ಡೀಸೆಲ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೈತ್ರಿ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ವೇಳೆ ಸೆಕ್ಯೂರಿಟಿಗಳಿದ್ದರೂ ಕಳ್ಳತನವಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪಿಎಎಸ್ ಶಿಕ್ಷಣ ಸಂಸ್ಥೆಯು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದವರ ಒಡೆತನದ ಟ್ರಸ್ಟ್ ಮಾಲೀಕತ್ವದಲ್ಲಿದೆ. ಸೋಮಿನಕೊಪ್ಪದ ಮೈತ್ರಿ ಅಪಾರ್ಟ್‌ಮೆಂಟ್ ಬಳಿ ಪ್ರತಿ ದಿನ ಪಿಇಎಸ್ ಕಾಲೇಜಿನ ಬಸ್ಸುಗಳನ್ನು ನಿಲ್ಲಿಸಲಾಗುತ್ತದೆ. ಆ ಭಾಗದಿಂದ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳನ್ನು ಕರೆತರಲು ಈ ಬಸ್ಸುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು.

ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರ?

ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿರಲಿಲ್ಲ. ಆದರೆ ಬುಧವಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಲೀಟರ್ ಪೆಟ್ರೋಲ್ ದರ 10ರಿಂದ 15 ಪೈಸೆ, ಡೀಸೆಲ್ ಮೇಲೆ 14ರಿಂದ 15 ಪೈಸೆ ಇಳಿಕೆಯಾಗಿದೆ.

 Shivanogga: Diesel Theft From Buses Belonging To An Educational Institute Owned By Former CM Yediyurappa

ಪ್ರಮುಖ ನಗರಗಳಲ್ಲಿ ರೇಟ್ ಎಷ್ಟಿದೆ?

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.34 ರೂ., ಡೀಸೆಲ್ ದರ 88.77 ರೂ.ಗೆ ತಲುಪಿದೆ.

ಮುಂಬೈ: ಲೀಟರ್ ಪೆಟ್ರೋಲ್ ದರ 107.39 ರೂ., ಡೀಸೆಲ್ ದರ 96.33 ರೂ.ಗೆ ತಲುಪಿದೆ.

ಕೊಲ್ಕತ್ತಾ: ಲೀಟರ್ ಪೆಟ್ರೋಲ್ ದರ 101.72 ರೂ, ಡೀಸೆಲ್ ದರ 91.84 ರೂ.ಗೆ ತಲುಪಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ 104.98 ರೂ, ಡೀಸೆಲ್ ದರ 94.34 ರೂ.ಗೆ ತಲುಪಿದೆ.

ಇಂದಿನಿಂದ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವ ಈ ಸಮಯದಲ್ಲಿ ಸೆ.1ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕೂಡ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪೆಟ್ರೋಲಿಯಂ ಕಂಪೆನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಮತ್ತೆ 25 ರೂಪಾಯಿ ಹೆಚ್ಚಳ ಮಾಡಿವೆ. ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆಜಿ ತೂಕದ ಸಿಲಿಂಡರ್‌ಗೆ 884 ರೂಪಾಯಿ 50 ಪೈಸೆಯಾಗಿದೆ. ಹೊಸ ದರ ಇಂದೇ ಜಾರಿಗೆ ಬರಲಿದೆ.

ಈ ಮೊದಲು, ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಆಗಸ್ಟ್ 18, 2021 ರಂದು 25 ರೂ. ಏರಿಸಲಾಗಿತ್ತು. ಅದಕ್ಕೂ ಮೊದಲು ಜುಲೈ 1, 2021 ರಂದು 25.50 ರೂ. ಹೆಚ್ಚಿಸಲಾಗಿತ್ತು.

ಇನ್ನು ದೆಹಲಿಯಲ್ಲಿ 19 ಕೆ.ಜಿ. ಕಮರ್ಷಿಯಲ್ ಸಿಲೆಂಡರ್ ಬೆಲೆ 75 ರೂಪಾಯಿ ಹೆಚ್ಚಳವಾಗಿದ್ದು,1, 693 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 14.2 ಕೆ.ಜಿ. ತೂಕದ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 862 ರೂಪಾಯಿ 50 ಪೈಸೆಗೆ ಏರಿಕೆಯಾಗಿದೆ.

Recommended Video

ಜೋ ರೂಟ್ ಪ್ರೆಸ್ಸ್ ಮೀಟ್ ನಲ್ಲಿ ಹೇಳಿದ್ದೇನು ಗೊತ್ತಾ? | Oneindia Kannada

English summary
580 liters of diesel was stolen from four buses belonging to a private educational institute of Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X