ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊರಬ: ಕರ್ತವ್ಯದಲ್ಲಿದ್ದಾಗಲೇ ಉಪ ತಹಶೀಲ್ದಾರ್‌ಗೆ ಹೃದಯಾಘಾತ, ಸಾವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 7: ಹೃದಯಾಘಾತ ಸಂಭವಿಸಿ ಕರ್ತವ್ಯ ನಿರತ ಉಪ ತಹಶೀಲ್ದಾರ ಒಬ್ಬರು ಅಸುನೀಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ನಾಡಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಉಪ ತಹಶೀಲ್ದಾರ ಚನ್ನಕೇಶವ (45) ಮೃತರಾಗಿದ್ದು, ಬುಧವಾರ ಮಧ್ಯಾಹ್ನ ಕರ್ತವ್ಯದಲ್ಲಿ ಇರುವಾಗ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಆನವಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಚನ್ನಕೇಶವ ಅವರು ಕೊನೆಯುಸಿರೆಳೆದಿದ್ದಾರೆ. ಉಪ ತಹಶೀಲ್ದಾರ ಚನ್ನಕೇಶವ ಅವರು ಸಾಗರದ ಶ್ರೀಧರ ನಗರ ನಿವಾಸಿಯಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

Shivamogga: Deputy Tahasildar Had Heart Attack And Death While On Duty In Anavatti

1998ರಲ್ಲಿ ಗ್ರಾಮ ಲೆಕ್ಕಿಗರಾಗಿ ಕಂದಾಯ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು, ವಿವಿಧ ಹಂತದ ಪದೋನ್ನತಿ ಹೊಂದಿ ಉಪ ತಹಶೀಲ್ದಾರ ಆಗಿದ್ದರು. ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರರಾಗಿ ಸಹ ಕರ್ತವ್ಯ ಸಲ್ಲಿಸಿದ್ದರು.

Shivamogga: Deputy Tahasildar Had Heart Attack And Death While On Duty In Anavatti

Recommended Video

ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ನಾಶ ಮಾಡಿದ ಹಿಂದೂ ಯುವಕರ ಮೇಲೆ HDK ಕೆಂಡಾಮಂಡಲ | Oneindia Kannada

ಸಂತಾಪ ಸೂಚಿಸಿದ ಶಾಸಕ ಕುಮಾರ್ ಬಂಗಾರಪ್ಪ
ಉಪ ತಹಶೀಲ್ದಾರ ಚನ್ನಕೇಶವ ಅವರ ನಿಧನಕ್ಕೆ ಸೊರಬ ಶಾಸಕ‌ ಎಸ್. ಕುಮಾರ್ ಬಂಗಾರಪ್ಪ, ಸರ್ಕಾರಿ ನೌಕರರ ಸಂಘ, ಕಂದಾಯ ಇಲಾಖೆಯ ನೌಕರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಸಂತಾಪ ಸೂಚಿಸಿದ್ದಾರೆ.

English summary
Deputy Tahasildar Had Heart Attack And Death While On Duty at Anavatti Nadakacheri in Soraba taluk in Shivamogga district on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X