ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಸರಳ ದಸರಾ ಉತ್ಸವಕ್ಕೆ ಚಾಲನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 17: ಕೋವಿಡ್ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರ ನವರಾತ್ರಿ ಹಬ್ಬವನ್ನು ಪೂಜೆ, ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಿದೆ.

ಕೋವಿಡ್ ನಿಯಮಾನುಸಾರ ಶಿವಮೊಗ್ಗದಲ್ಲಿ ಕೂಡ ಸರಳ ದಸರಾ ಆಚರಣೆಗೆ ಚಾಲನೆ ದೊರೆತಿದೆ. ನವರಾತ್ರಿ ಉತ್ಸವ ಇಂದಿನಿಂದ ಆರಂಭವಾಗಿದ್ದು ಪ್ರತೀ ವರ್ಷದಂತೆ ಈ ವರ್ಷವೂ ಶಿವಮೊಗ್ಗ ನಗರ ಪಾಲಿಕೆ ಆವರಣದಲ್ಲಿ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.

ನಂತರ ವಿರಳ ಸಂಖ್ಯೆಯಲ್ಲಿ ಮೆರವಣಿಗೆಯ ಮುಖಾಂತರ ದೇವಿ ಮೂರ್ತಿಯನ್ನು ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ಆಲಯಕ್ಕೆ ತರಲಾಯಿತು.

ಮಡಿಕೇರಿ ಜಾನಪದ ದಸರಾ ಸಂಭ್ರಮ; ಅಪರೂಪದ ವಸ್ತು ಪ್ರದರ್ಶನಮಡಿಕೇರಿ ಜಾನಪದ ದಸರಾ ಸಂಭ್ರಮ; ಅಪರೂಪದ ವಸ್ತು ಪ್ರದರ್ಶನ

Shivamogga: Dasara Celebration Limited To Puja And Tradition

ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಕೊರೊನಾ ವಾರಿಯರ್ ಗಳು ನೆರವೇರಿಸಿದರು. ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಈ ಮುನ್ನವೇ ದಸರಾ ನಾಡ ಹಬ್ಬದ ಆಚರಣೆಯನ್ನು ಸರಳವಾಗಿ ಕೈಗೊಂಡಿದ್ದು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ಇರುವುದಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿತ್ತು.

ಇನ್ನು, ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುತ್ತಿದ್ದು, ದಸರಾವನ್ನು ಜನರು ಮನೆಯಲ್ಲಿಯೇ ಕುಳಿತು ವೀಕ್ಷಿಸಿ ಎಂದು ಜಿಲ್ಲಾಡಳಿತ ತಿಳಿಸಿತ್ತು.

English summary
Following guidelines, dasara celebration started in shivamogga district in simple way,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X