• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ದಸರಾ: ಶ್ವಾನ ಪ್ರದರ್ಶನದಲ್ಲಿ 10 ಕೋಟಿ ರೂ. ನಾಯಿ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅ.03: 10 ಕೋಟಿ ರೂಪಾಯಿ ಮೌಲ್ಯದ ಶ್ವಾನವನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ... ಸೆಲ್ಫಿ, ಫೋಟೊಗಾಗಿ ನೂಕು ನುಗ್ಗಲು...ಜಂಪ್ ಮಾಡುತ್ತ ಆ ಜನರನ್ನು ಮನರಂಜಿಸಿದ ಮುದ್ದು ಮುದ್ದು ನಾಯಿಗಳು...ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಶಿವಮೊಗ್ಗ ದಸರಾ ಅಂಗವಾಗಿ ಗಾಂಧಿ ಪಾಕ್‌್ನಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನ.

ಶ್ವಾನ ಪ್ರದರ್ಶನದ ಪ್ರಮುಖ ಆಕರ್ಷಣೆ ಬೆಂಗಳೂರಿನ ಸೆಲಬ್ರಿಟಿ ಡಾಗ್ ಬ್ರೀಡರ್ ಕ್ಯಾಡಬೊಮ್ಸ್ ಸತೀಶ್ ಅವರ 10 ಕೋಟಿ ರೂ. ಮೌಲ್ಯದ ಶ್ವಾನ ಭೀಮಾ.

ಶಿವಮೊಗ್ಗ; ಲಾಂಚ್‌ ಮುಳುಗಿ ಜನರ ಪರದಾಟ, ಸಮಸ್ಯೆ ಪರಿಹಾರ ಯಾವಾಗ?ಶಿವಮೊಗ್ಗ; ಲಾಂಚ್‌ ಮುಳುಗಿ ಜನರ ಪರದಾಟ, ಸಮಸ್ಯೆ ಪರಿಹಾರ ಯಾವಾಗ?

ಹಿರಿಯರು, ಕಿರಿಯರಿಗೂ ಕ್ರೇಜ್ ಹೆಚ್ಚಿಸಿದ ಭೀಮಾ!

ಹಿರಿಯರು, ಕಿರಿಯರಿಗೂ ಕ್ರೇಜ್ ಹೆಚ್ಚಿಸಿದ ಭೀಮಾ!

ಶಿವಮೊಗ್ಗದ ದಸರಾದ ಶ್ವಾನ ಪ್ರದರ್ಶನದ ಉದ್ಘಾಟನೆಗೆ ಕ್ಯಾಡಬೊಮ್ಸ್ ಸತೀಶ್ ಅವರ ಟಿಬೇಟಿಯನ್ ಮಾಸ್ಟಿಫ್ ತಳಿಯ ಭೀಮಾ ಶ್ವಾನವನ್ನು ಕರೆಸಲಾಗಿತ್ತು. ಇದರ ಮೌಲ್ಯ 10 ಕೋಟಿ ರೂ. ಎಂದು ಪ್ರಚಾರ ಮಾಡಲಾಗಿತ್ತು. ಹಾಗಾಗಿ 10 ಕೋಟಿಯ ನಾಯಿ ಎಂದು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಭೀಮಾ ಪ್ರಮುಖ ಆಕರ್ಷಣೆಯಾಗಿ, ಅದನ್ನು ನೋಡಲು ಮುಗಿಬಿದ್ದರು.

ಭೀಮನೊಂದಿಗೆ ಸೆಲ್ಫಿ, ಫೋಟೋ ತೆಗೆದುಕೊಂಡ ಅಧಿಕಾರಿಗಳು

ಭೀಮನೊಂದಿಗೆ ಸೆಲ್ಫಿ, ಫೋಟೋ ತೆಗೆದುಕೊಂಡ ಅಧಿಕಾರಿಗಳು

ಟಿಬೇಟಿಯನ್ ಮಾಸ್ಟಿಫ್ ತಳಿಯ ಭೀಮಾ ನಾಯಿಯನ್ನು ನೋಡಲು, ಅದರ ಕುರಿತು ತಿಳಿದುಕೊಳ್ಳಲು ಜನರಷ್ಟೆ ಅಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಆಸಕ್ತಿ ವಹಿಸಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪಾಲಿಕೆ ಸದಸ್ಯರೆಲ್ಲ ನಾಯಿ ನೋಡಿ, ಅದರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಕೂಡ ಸೆಲಬ್ರಿಟಿ ಡಾಗ್ ಬ್ರೀಡರ್ ಸತೀಶ್ ಅವರಿಂದ ಶ್ವಾನ ದ ಕುರಿತು ಮಾಹಿತಿ ಪಡೆದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

ರಿಂಗ್‌ನಲ್ಲಿ ಶ್ವಾನಗಳ ಆಟ, ಚಿನ್ನಾಟ ಅದ್ಭುತ

ರಿಂಗ್‌ನಲ್ಲಿ ಶ್ವಾನಗಳ ಆಟ, ಚಿನ್ನಾಟ ಅದ್ಭುತ

ಇನ್ನು, ವಿವಿಧ ತಳಿಯ ಶ್ವಾನಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಖ್ಯಾತ ತೀರ್ಪುಗಾರರು ಶ್ವಾನಗಳ ಚಟುವಟಿಕೆ ಗಮನಿಸಿ ತೀರ್ಪು ಘೋಷಿಸಿದ್ದು, ಬಹುಮಾನ ವಿತರಿಸಲಾಯಿತು.

ಕಣ್ಣ ಮುಂದಿನ ನಾನಾ ತಳಿಯ ಶ್ವಾನಗಳನ್ನು ಕಂಡು ಮಕ್ಕಳು ಖುಷಿ ಪಟ್ಟರು. ಹಲವರು ತಮ್ಮ ಮಕ್ಕಳನ್ನು ವಿವಿಧ ತಳಿಯ ಶ್ವಾನಗಳ ಪಕ್ಕದಲ್ಲಿ ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡರು. ಮಹಿಳೆಯರು ಕೂಡ ಶ್ವಾನಗಳ ಜೊತೆಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ಶ್ವಾನಗಳ ಸ್ಪರ್ಧೆಗೆ ಸಿದ್ಧಪಡಿಸಲಾಗಿದ್ದ ರಿಂಗ್‌ನಲ್ಲಿ ಶ್ವಾನಗಳ ಆಟ, ಚಿನ್ನಾಟ ನೋಡುಗರನ್ನು ಗಮನ ಸೆಳೆಯಿತು. ಶ್ವಾನಗಳು ತಮ್ಮ ತರಬೇತುದಾರರು ಹೇಳಿದ್ದನ್ನು ಕೇಳುವುದು ಅಥವಾ ಕೇಳದಯೆ ಅತ್ತಿತ್ತ ಓಡಾಡುವುದು ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.

ಪೊಲೀಸ್ ಶ್ವಾನಗಳು ಏನೇಲ್ಲಾ ಪ್ರದರ್ಶನ ನೀಡಿದವು ಗೊತ್ತೇ?

ಪೊಲೀಸ್ ಶ್ವಾನಗಳು ಏನೇಲ್ಲಾ ಪ್ರದರ್ಶನ ನೀಡಿದವು ಗೊತ್ತೇ?

ಶ್ವಾನ ಪ್ರದರ್ಶನದಲ್ಲಿ ಶಿವಮೊಗ್ಗ ಪೊಲೀಸ್ ಡಾಗ್‌ಗಳು ತಮ್ಮ ಬುದ್ಧಿಮತ್ತೆ ಮತ್ತು ಸಾಹಸ ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆದವು. ಅಪರಾಧ ಪತ್ತೆಯಲ್ಲಿ ಪೊಲೀಸ್ ಶ್ವಾನಗಳು ಹೇಗೆಲ್ಲ ಕೆಲಸ ಮಾಡುತ್ತವೆ ಅನ್ನುವುದರ ಅಣಕು ಪ್ರದರ್ಶನ ಜನರ ಹುಬ್ಬೇರುವಂತೆ ಮಾಡಿತು.


ಶಿವಮೊಗ್ಗ ಪೊಲೀಸ್ ಡಾಗ್ ಸ್ಕ್ವಾಡ್‌ನ ಗೌರಿ, ಜಾಕಿ, ಹಂಸ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಸಾಹಸ ಮತ್ತು ಬುದ್ದಿಮತ್ತೆಯಿಂದ ಜನರಿಂದ ಭೇಷ್ ಅನಿಸಿಕೊಂಡವು.


ಅಪರಾಧ ಪತ್ತೆ ವೇಳೆ ಶ್ವಾನಗಳು ವಾಸನೆ ಹಿಡಿದು ಕಳ್ಳರ ಪತ್ತೆ ಹೇಗೆಲ್ಲ ಕೆಲಸ ಮಾಡುತ್ತವೆ ಅನ್ನುವುದರ ಪ್ರಾತ್ಯಕ್ಷಿಕೆ ನೀಡಲಾಯಿತು. ತನ್ನ ತರಬೇತುದಾರ ನೀಡುವ ಕಮಾಂಡ್‌ಗಳನ್ನ ಪಾಲಿಸಿವುದು, ಕೇವಲ ಬೆರಳು ಸಂಜ್ಞೆಯ ಮೂಲಕ ಕೊಡುವ ಕಮಾಂಡ್ ಪಾಲಿಸಿ ಜನ ಮೆಚ್ಚುಗೆ ಪಡೆದವು.

ಸ್ಪೋಟಕಗಳನ್ನು ಇಟ್ಟುಕೊಂಡಿದ್ದವರ ಪತ್ತೆ ಕಾರ್ಯ ಹೇಗಿರುತ್ತೆ ಅನ್ನುವ ಅಣಕು ಪ್ರದರ್ಶನವನ್ನೂ ಮಾಡಲಾಯಿತು. ಡಾಗ್ ಸ್ಕ್ವಾಡ್‌ನ ಸಾಹಸ ಪ್ರದರ್ಶನ ಹಲವರ ಮನ ಸೆಳೆಯಿತು. ಹರ್ಡಲ್ಸ್ ಗಳಿಂದ ಜಂಪ್ ಮಾಡಿದ್ದನ್ನು ಕಂಡು ಜನರು ಚಪ್ಪಾಳೆ ತಟ್ಟಿ ಭೇಷ್ ಅಂದರು. ಇದೆ ವೇಳೆ ಡಾಗ್ ಸ್ಕ್ವಾಡ್‌ನ ತರಬೇತುದಾರರನ್ನು ದಸರಾ ಸಮಿತಿ ವತಿಯಿಂದ ಗೌರವಿಸಲಾಯಿತು.

ಪ್ರದರ್ಶನದಲ್ಲಿ ಬೆಕ್ಕುಗಳು ಭಾಗಿ


ವಿವಿಧ ತಳಿಯ ಬೆಕ್ಕುಗಳು ಕೂಡ ಪ್ರದರ್ಶನದಲ್ಲಿ ಇದ್ದವು. ಇವುಗಳ ಜೊತೆಗೂ ಜನರು ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡರು. ಕೆಲವರು ಬೆಕ್ಕುಗಳನ್ನು ಖರೀದಿಸಿದರು.

ಇನ್ನೊಂದಡೆ, 'ಶ್ವಾನಗಳನ್ನು ಖರೀದಿಸಬೇಡಿ ಬೀದಿ ನಾಯಿಗಳನ್ನು ದತ್ತು ಸ್ವೀಕರಿಸಿ' ಎಂದು ಪ್ರಾಣಿ ದಯಾ ಸಂಘಟನೆಯವರು ಮನವಿ ಮಾಡಿದರು. ಬೀದಿ ನಾಯಿ ಮರಿಗಳನ್ನು ದತ್ತು ಸ್ವೀಕರಿಸಿದವರಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮರಿಗಳನ್ನು ಹಸ್ತಾಂತರ ಮಾಡಿದರು.

English summary
Shivamogga dasara: 10 crore dog Bhima grabs attention in dog show, People are excited in the show and took selfies with dogs. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X