ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ವಾಹನ ತಪಾಸಣೆ ವೇಳೆ ಕೋವಿಡ್ ಸೋಂಕಿತ ಪ್ರತ್ಯಕ್ಷ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 25; ಶಿವಮೊಗ್ಗದಲ್ಲಿಯೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮುಂದೆ ಕೋವಿಡ್ ಸೋಂಕಿತನೊಬ್ಬ ಪ್ರತ್ಯಕ್ಷನಾಗಿ ಕ್ಷಣಕಾಲ ಆತಂಕ ಮೂಡಿಸಿದ್ದಾನೆ.

ಭಾನುವಾರ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಕೋವಿಡ್ ಸೋಂಕಿತ ಬೈಕ್‌ನಲ್ಲಿ ಆಗಮಿಸಿದ್ದ.

ಶಿವಮೊಗ್ಗ; ಪೊಲೀಸರಿಂದ ವಿಭಿನ್ನವಾಗಿ ಮಾಸ್ಕ್ ಕಾರ್ಯಾಚರಣೆ ಶಿವಮೊಗ್ಗ; ಪೊಲೀಸರಿಂದ ವಿಭಿನ್ನವಾಗಿ ಮಾಸ್ಕ್ ಕಾರ್ಯಾಚರಣೆ

ಮುಂಜಾನೆಯಿಂದಲೂ ಸರ್ಕಲ್‌ನಲ್ಲಿ ಸಂಚಾರಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಪ್ರಶ್ನಿಸಿದಾಗ, ನಾನು ಕೋವಿಡ್ ಪೇಷೆಂಟ್ ಅಂತಾ ಹೇಳಿ, ಸುತ್ತಲು ಇದ್ದವರನ್ನು ಬೆಚ್ಚಿ ಬೀಳಿಸಿದ.

ತುಮಕೂರು-ಶಿವಮೊಗ್ಗ 4 ಪಥದ ರಸ್ತೆ ಕಾಮಗಾರಿಗೆ ಸಿಗಲಿದೆ ವೇಗ ತುಮಕೂರು-ಶಿವಮೊಗ್ಗ 4 ಪಥದ ರಸ್ತೆ ಕಾಮಗಾರಿಗೆ ಸಿಗಲಿದೆ ವೇಗ

COVID Positive Patient Found During Vehicle Checking

ದಾಖಲೆಗಳ ಪರಿಶೀಲನೆ ವೇಳೆ ಕೋವಿಡ್ ಪಾಸಿಟಿವ್ ದಾಖಲೆ ಪ್ರದರ್ಶಿಸಿದ. ಇದನ್ನು ಕಂಡು ದಂಗಾದ ಪೊಲೀಸರು, ಪಾಸಿಟಿವ್ ಇದ್ದವರು ರಸ್ತೆಯಲ್ಲೇಕೆ ಓಡಾಡ್ತಿದ್ದೀರ? ಎಂದು ಪ್ರಶ್ನಿಸಿದರು.

ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ! ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ!

ಈಗ ಆಸ್ಪತ್ರೆಯಿಂದ ಬರುತ್ತಿದ್ದೇನೆ ಎಂದು ಸೋಂಕಿತ ಉತ್ತರಿಸಿದ. ಆಗ ಸುತ್ತಲೂ ಇದ್ದ ಪೊಲೀಸರು, ವಾಹನಗಳ ದಾಖಲೆ ತೋರಿಸಲು ನಿಂತಿದ್ದವರು, ಮಾಧ್ಯಮದವರು ದಂಗಾಗಿ ಹೋದರು.

ಕೂಡಲೇ ಆ ಸೋಂಕಿತನನ್ನು ಮನೆಗೆ ತೆರಳುವಂತೆ ಸೂಚಿಸಿದ ಪೊಲೀಸರು, ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು. ಉಳಿದ ಪೊಲೀಸರನ್ನು ಅಲರ್ಟ್ ಮಾಡಿದರು. ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷದಿಂದಾಗಿ ಸೋಂಕಿತರು ಹೀಗೆ ಓಡಾಡುವಂತಾಗಿದ್ದು, ಈ ಬಗ್ಗೆ ಕಠಿಣ ಕ್ರಮ ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

English summary
Shivamogga police met COVID positive patient during vehicle checking during weekend curfew. Patient on the way of home from hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X