ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಗ ವೀಕ್ಷಣೆಗೆ ಷರತ್ತು; ಪ್ರವಾಸಿಗರ ಸಂಖ್ಯೆ ಭಾರಿ ಕುಸಿತ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 18; ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಹರಿಯುತ್ತಿದ್ದರೂ, ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ವಾರಾಂತ್ಯದಲ್ಲೂ ಸೀಮಿತ ಪ್ರವಾಸಿಗರಿಗೆ ಮಾತ್ರ ಜಲಧಾರೆ ಕಣ್ತುಂಬಿಕೊಳ್ಳುವ, ಅದರ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಈ ಬಾರಿಯೂ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಕೋವಿಡ್ ಭಾರೀ ಪೆಟ್ಟು ಕೊಟ್ಟಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಜೋಗ ಜಲಾಪಾತ ಮೈದುಂಬಿಕೊಂಡಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಭೋರ್ಗರೆಯುತ್ತ ಧುಮ್ಮಿಕ್ಕುತ್ತಿವೆ. ಪ್ರತಿ ವರ್ಷ ಜೋಗವನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳು, ಹೊರ ರಾಜ್ಯ, ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆ ಜೋಗಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಇದೆ ಕಾರಣಕ್ಕೆ ಬಹುತೇಕ ಪ್ರವಾಸಿಗರಿಗೆ ಜಲಪಾತದ ದರ್ಶನವಾಗದೆ ಹಿಂತಿರುಗುತ್ತಿದ್ದಾರೆ.

ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ

ಜೋಗ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ 72 ಗಂಟೆಗಳ ಒಳಗಾಗಿ ಮಾಡಿಸಿದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ/ ಆರ್‍ಎಟಿ ನೆಗೆಟಿವ್ ವರದಿ/ ಕೋವಿಡ್ 2ನೇ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ಸರ್ಕಾರಿ ಬಸ್‌ನಲ್ಲಿ ಚಿತ್ರದುರ್ಗ-ಜೋಗ ಪ್ರವಾಸ; ದರಪಟ್ಟಿ ಸರ್ಕಾರಿ ಬಸ್‌ನಲ್ಲಿ ಚಿತ್ರದುರ್ಗ-ಜೋಗ ಪ್ರವಾಸ; ದರಪಟ್ಟಿ

ಮಳೆ ಮತ್ತು ಚಳಿಗಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭಾರಿ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದರು. ಇದರಿಂದ ಜಿಲ್ಲೆಯಲ್ಲಿ ವ್ಯಾಪಾರ, ವಾಹಿವಾಟಿಗೆ ಅನುಕೂಲವಾಗುತಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಇವೆಲ್ಲಕ್ಕೂ ಅಡ್ಡಿಯುಂಟಾಗಿದೆ. ಜೋಗ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಕುಸಿದಿದ್ದು, ಈ ಭಾಗದ ಹೊಟೇಲ್, ರೆಸಾರ್ಟ್, ಲಾಡ್ಜ್‌ಗಳು ಬಣಗುಡುವಂತಾಗಿದೆ. ಅಲ್ಲದೆ ಸ್ಥಳೀಯರ ವ್ಯಾಪಾರ ವಹಿವಾಟಿಗೂ ಪೆಟ್ಟು ಬಿದ್ದಿದೆ.

ಮೈದುಂಬಿದ ಜೋಗ ಜಲಪಾತ; ಹಳೆಯ ವಿಡಿಯೋ ವೈರಲ್ಮೈದುಂಬಿದ ಜೋಗ ಜಲಪಾತ; ಹಳೆಯ ವಿಡಿಯೋ ವೈರಲ್

ರಿಪೋರ್ಟ್ ಇದ್ದರಷ್ಟೆ ಪ್ರವೇಶ

ರಿಪೋರ್ಟ್ ಇದ್ದರಷ್ಟೆ ಪ್ರವೇಶ

ಜೋಗಕ್ಕೆ ಬರುವ ಪ್ರವಾಸಿಗರು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತರಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಜಲಪಾತ ವೀಕ್ಷಣೆಗೆ ಬರುವ 72 ಗಂಟೆ ಮೊದಲು ಪರೀಕ್ಷೆ ಮಾಡಿಸಿ, ನೆಗೆಟಿವ್ ರಿಪೋರ್ಟ್ ಬಂದಿರಬೇಕು ಅಥವಾ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂಬ ನಿಯಮವಿದೆ. ಇವೆರಡು ಕಂಡೀಷನ್‌ಗಳ ಪೈಕಿ ಯಾವುದಾದರೂ ಒಂದು ಇದ್ದರೆ ಮಾತ್ರ ವಿವ್ ಪಾಯಿಂಟ್‌ನ ಗೇಟಿನೊಳಗೆ ಬಿಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗೇಟ್ ಮುಂದೆ ಗಲಾಟೆ

ಗೇಟ್ ಮುಂದೆ ಗಲಾಟೆ

ಶಿವಮೊಗ್ಗ ಜಿಲ್ಲಾಡಳಿತದ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡಲು ಮುಂದಾಗಿರುವುದರಿಂದ, ಅಧಿಕಾರಿಗಳು ಮತ್ತು ಪ್ರವಾಸಿಗರ ನಡುವೆ ಪ್ರತಿದಿನ ಗಲಾಟೆಯಾಗುತ್ತಿದೆ. ಜಲಪಾತದ ವಿವ್ ಪಾಯಿಂಟ್ ಗೇಟ್‌ನ ಮುಂದೆ ನೂರಾರು ಪ್ರವಾಸಿಗರು, ವಾಹನಗಳನ್ನು ತಂದು ನಿಲ್ಲಿಸಿಕೊಂಡು ತಮ್ಮನ್ನು ಒಳಗೆ ಬಿಡುವಂತೆ ಮನವಿ ಮಾಡುತ್ತಿದ್ದಾರೆ. ಇದರಿಂದ ಪ್ರತಿದಿನ, ಅದರಲ್ಲೂ ವಾರಾಂತ್ಯದಲ್ಲಿ ಗಲಾಟೆ ಸಾಮಾನ್ಯವಾಗಿದೆ.

ವೀಕೆಂಡ್’ನಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ

ವೀಕೆಂಡ್’ನಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ

ಶನಿವಾರ ಮತ್ತು ಭಾನುವಾರ ವೀಕೆಂಡ್ ಕಾರಣಕ್ಕೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಆದರೆ ಈ ನಿಯಮ ಜಾರಿಗೆ ಬರುತ್ತಿದ್ದಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದೆ. ಕಳೆದ ಭಾನುವಾರ 1800 ಪ್ರವಾಸಿಗರು ಮಾತ್ರ ಜೋಗ ಜಲಪಾತ ವೀಕ್ಷಣೆ ಮಾಡಿದ್ದಾರೆ. ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 35 ಸಾವಿರ ರೂ. ಆದಾಯ ಬಂದಿದೆ. ಕೋವಿಡ್ ಭೀತಿ ಮತ್ತು ರಿಪೋರ್ಟ್ ಕಡ್ಡಾಯಗೊಳಿಸಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಪ್ರಭಾವ ಇದ್ದವರಿಗೆ ಪ್ರವೇಶ ಸುಲಭ

ಪ್ರಭಾವ ಇದ್ದವರಿಗೆ ಪ್ರವೇಶ ಸುಲಭ

ಒಂದು ಕಡೆ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿದೆ. ಆದರೆ ಜೋಗ ಜಲಪಾತದ ವಿವ್ ಪಾಯಿಂಟ್‌ ಗೇಟಿನ ಬಳಿ ಬೇರೆಯದ್ದೇ ನಡೆಯುತ್ತಿದೆ ಎಂಬ ಆಪಾದನೆಯಿದೆ. ಗೇಟಿನೊಳಗೆ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಆದರೆ ಗೇಟಿನೊಳಗೆ ಕಾಲಿಡುತ್ತಿದ್ದಂತೆ ಜನರು ಕೋವಿಡ್ ನಿಯಮಗಳನ್ನು ಮೀರಿ ಗುಂಪುಗೂಡುತ್ತಿದ್ದಾರೆ. ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇನ್ನು, ಪ್ರಭಾವ ಇದ್ದವರಿಗೆ ಕೋವಿಡ್ ರಿಪೋರ್ಟು, ಎರಡು ಡೋಸ್ ಲಸಿಕೆ ಎಂಬ ನಿಬಂಧನೆಯೇ ಇಲ್ಲ. ನೇರವಾಗಿ ಗೇಟಿನೊಳಗೆ ಬಿಡಲಾಗುತ್ತಿದೆ ಎಂಬ ಗಂಭೀರ ಆರೋಪವಿದೆ.

English summary
K. B. Sivakumar deputy commissioner of Shivamogga revised the Covid guidelines in the districts. Number of tourists visiting Jog falls come down due to restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X