ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಕ್‌ನಲ್ಲಿ ತೆರಳಿ ಭದ್ರಾವತಿಯ ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ಜಾಗೃತಿ

|
Google Oneindia Kannada News

ಭದ್ರಾವತಿ, ಮಾರ್ಚ್ 18: ಕೊರೊನಾ ವೈರಸ್ ನಿಯಂತ್ರಣಕ್ಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಳ್ಳಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಭದ್ರಾವತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಕೊರೊನಾ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ಭಾಗದ ನಿಂಬೆಗುಂದಿ, ಅರಸಿನಘಟ್ಟ, ಆನವೇರಿ, ಮಂಗೋಟೆ, ನಾಗಸಮುದ್ರ, ಮಲ್ಲಾಪುರ ಗ್ರಾಮಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

 Precautionary Measures Are Being Taken In Bhadravathi Taluk Villages

ಬೈಕ್‌ನಲ್ಲಿ ಗ್ರಾಮಗಳಿಗೆ ತೆರಳಿ, ಮೈಕ್‌ನಲ್ಲಿ ಕೊರೊನಾ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಬೇರೆ ಊರಿನಿಂದ ಸಂಬಂಧಿಗಳು ಬಂದರೆ, ಬೇರೆ ರಾಜ್ಯದಿಂದ ವ್ಯಕ್ತಿಗಳು ಬಂದರೆ, ಅವರಿಗೆ ಅನಾರೋಗ್ಯದ ಲಕ್ಷಣಗಳು ಕಂಡರೆ, ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತಿ ತಿಳಿಸುವಂತೆ ಸೂಚನೆ ನೀಡಲಾಗಿದೆ.

ಪ್ರತಿ ವಾರ ಕೂಡ ಈ ಭಾಗದಲ್ಲಿ ಸಂತೆ ನಡೆಯುತ್ತದೆ. ಆದರೆ, ಕೊರೊನಾ ವೈರಸ್‌ನಿಂದ ಸುತ್ತ ಮುತ್ತಲಿನ ಗ್ರಾಮಗಳ ಜಾತ್ರೆ, ಸಂತೆ ನಿಷೇಧಿಸಲಾಗದೆ. ಕಡ್ಡಾಯವಾಗಿ ಶೌಚಾಲಯ ಬಳಸುವುದು, ಹಳ್ಳಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವಂತೆ ಮನವಿ ಮಾಡಲಾಗಿದೆ.

ಜನರಿಗೆ ಮಾಸ್ಕ್ ಧರಿಸಲು ತಿಳಿಸಲಾಗಿದೆ. ಶೀತ, ಜ್ವರ, ಕೆಮ್ಮು ಇದ್ದರೆ, ಕೂಡಲೇ ಆರೋಗ್ಯ ಕೇಂದ್ರಗೆ ತೆರಳುವಂತೆ ಹೇಳಿದೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ ಜಾಗರುಕತೆಯಿಂ ಇರಿ ಎಂದು ಗ್ರಾಮ ಪಂಚಾಯತಿ ಜಾಗೃತಿ ನಡೆಸುತ್ತಿದೆ.

English summary
Coronavirus in kanrnataka: Precautionary measures are being taken in Bhadravathi taluk villages for control coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X