ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣಗೆರೆಕಟ್ಟೆಯ ಚೌಡೇಶ್ವರಿ ದೇವಸ್ಥಾನ ಹಾಗೂ ದರ್ಗಾ ಬಂದ್

|
Google Oneindia Kannada News

ಶಿವಮೊಗ್ಗ, ಮಾರ್ಚ್ 21: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ರಾಜ್ಯದ ಎಲ್ಲ ದೇವಾಲಯಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ನೀಡಿದೆ. ಅದರಂತೆ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಚೌಡೇಶ್ವರಿ ದೇವಸ್ಥಾನ ಹಾಗೂ ದರ್ಗಾ ಬಂದ್ ಮಾಡಲಾಗಿದೆ.

ಹಣಗೆರೆಕಟ್ಟೆಯ ಈ ಸ್ಥಳ ಸರ್ವ ಧರ್ಮ ಸಮನ್ವಯದ ಧಾರ್ಮಿಕ ಕ್ಷೇತ್ರ. ಇಲ್ಲಿ ದೇವಸ್ಥಾನ ಹಾಗೂ ದರ್ಗಾ ಎರಡು ಒಂದೇ ಕಡೆ ಇದೆ. ಚೌಡೇಶ್ವರಿ, ಭೂತರಾಯ ಮತ್ತು ಹಜರ್ ಸೈಯದ್ ಸಾದತ್ ಅಲಿ ದರ್ಗಾದ ದರ್ಶನಕ್ಕೆ ಬಹುಸಂಖ್ಯಾತರು ಆಗಮಿಸಿ, ದರ್ಶನ ಪಡೆದು ತೆರಳುತ್ತಿದ್ದರು. ಹಿಂದೂ ದೇವಸ್ಥಾನ ಹಾಗೂ ಮುಸ್ಲಿಂ ದರ್ಗಾ ಎರಡು ಒಂದೇ ಸ್ಥಳದಲ್ಲಿ ಇದ್ದು, ವಿಶೇಷ ಕ್ಷೇತ್ರ ಎನಿಸಿಕೊಂಡಿದೆ. ಕೊರೊನಾ ವೈರಸ್ ಭೀತಿಯಿಂದ ದೇವಾಲಯ ಹಾಗೂ ದರ್ಗಾದಲ್ಲಿ ಭಕ್ತರಿಗೆ ನಿಷೇಧ ಏರಲಾಗಿದೆ.

ಕೊರೊನಾ ಭೀತಿ; ತಿರುಪತಿ ದೇವಾಲಯ ಒಂದು ವಾರ ಬಂದ್ಕೊರೊನಾ ಭೀತಿ; ತಿರುಪತಿ ದೇವಾಲಯ ಒಂದು ವಾರ ಬಂದ್

ಕೊರೊನಾ ವೈರಸ್‌ನಿಂದ ಸರ್ಕಾರಗಳು ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳುವ ನಿರ್ಣಯಗಳಿಗೆ ಸಾರ್ವಜನಿಕರು ಸ್ಪಂದಿಸುವ ಅಗತ್ಯವಿದೆ ಎಂದು ತೀರ್ಥಹಳ್ಳಿಯ ತಹಶೀಲ್ದಾರ್ ಡಾ ಶ್ರೀ ಪಾದ ಎಸ್.ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Coronavirus: Hanagere Katte Temple And Darga To Close For Devotees

ಈಗಾಗಲೇ ರಾಜ್ಯದ ಬಹುತೇಕ ಎಲ್ಲ ದೇವಾಲಯಗಳು ಕೊರೊನಾ ವೈರಸ್‌ ನಿಂದ ಬಂದ್ ಆಗಿದೆ. ನಂಜನಗೂಡು ನಂಜುಂಡೇಶ್ವರ, ಕುಕ್ಕೆ, ಅಂಜನಾದ್ರಿ, ಮಲೆ ಮಹದೇಶ್ವರ, ಮೂಕಾಂಬಿಕಾ, ಆದಿಚುಂಚನಗಿರಿ, ಮಂತ್ರಾಲಯ, ತಿರುಪತಿ ದೇವಸ್ಥಾನಗಳು ಭಕ್ತರಿಗೆ ನಿರ್ಬಂಧ ಹೇರಿವೆ.

English summary
Coronavirus care: Hanagere katte Chamundeshwari temple and Hajar saiyad ali darga to close for devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X