ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಎಫೆಕ್ಟ್: 4 ಸಾವಿರ ಕೋಳಿಗಳು ಜೀವಂತವಾಗಿ ಗುಂಡಿಗೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 11: ಕೊರೊನಾ ವೈರಸ್ ಕೋಳಿ ಮಾಂಸ ಹಾಗೂ ಇತರೆ ಮಾಂಸ ಪದಾರ್ಥಗಳಿಂದ ಈ ಕಾಯಿಲೆ ಹರಡುತ್ತದೆ ಎನ್ನುವ ಭೀತಿಯಲ್ಲಿ ಜನರು ಮಾಂಸ ಆಹಾರವನ್ನೇ ತ್ಯಜಿಸಿದ್ದರ ಪರಿಣಾಮ ಕೋಳಿ ಫಾರಂ ಮಾಲೀಕರಿಗೆ, ವ್ಯಾಪಾರಿಗಳಿಗೆ ಅದರ ಬಿಸಿ ತಟ್ಟಿದೆ.

ಶಿವಮೊಗ್ಗದ ಕೋಳಿ ಫಾರಂ ಒಂದರಲ್ಲಿ ಕೋಳಿಗಳನ್ನು ಜೀವಂತವಾಗಿ ಗುಂಡಿಗೆ ಹಾಕಿ ಮುಚ್ಚಿಹಾಕಿದ ಘಟನೆ ಇಂದು ನಡೆದಿದೆ. ಶಿವಮೊಗ್ಗ ತಾಲ್ಲೂಕಿನ ಸಂತೆಕಡೂರಿನಲ್ಲಿರುವ ಕೋಳಿ ಫಾರಂ ಮಾಲೀಕ ನಾಲ್ಕು ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಜೀವಂತವಾಗಿ ಗುಂಡಿಯಲ್ಲಿ ಮುಚ್ಚಿರುವ ಘಟನೆ ನಡೆದಿದೆ.

ಕೊರೊನಾ ಎಫೆಕ್ಟ್: ಕೋಲಾರದಲ್ಲಿ ಕೋಳಿಗಳ ಮಾರಣಹೋಮಕೊರೊನಾ ಎಫೆಕ್ಟ್: ಕೋಲಾರದಲ್ಲಿ ಕೋಳಿಗಳ ಮಾರಣಹೋಮ

ಕೊರೊನಾ ವೈರಸ್ ಭೀತಿಯಿಂದ ಮತ್ತು ಹಾಗೂ ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕಡಿಮೆಯಾಗಿರುವ ಕಾರಣ, ಜನರು ಕೋಳಿ ಮಾಂಸ ಖರೀದಿಸಲು ನಿರಾಕರಣೆ ಮಾಡುತ್ತಿದ್ದು, ಕುಕ್ಕುಟೋಧ್ಯಮಕ್ಕೆ ಬಾರಿ ಹೊಡೆತ ಬಿದ್ದಿದೆ.

Corona Effect: 4 Thousands of chickens Killed In Santekaduru

ಕೋಳಿಗಳಿಗೆ ಬೇಡಿಕೆಯಿಲ್ಲದೇ ಜೀವಂತವಾಗಿ ಮಣ್ಣಿನಲ್ಲಿ ಹೂಳುತ್ತಿರುವ ಕೋಳಿ ಫಾರಂ ಮಾಲೀಕ ಶ್ರೀನಿವಾಸ್, ಬರೋಬ್ಬರಿ 4 ಸಾವಿರ ಕೋಳಿಗಳ ಜೀವಂತ ಮಾರಣಹೋಮಕ್ಕೆ ನಿರ್ಧರಿಸಿದ್ದಾರೆ. ಕೋಳಿಗೆ ಬೆಲೆಯಿಲ್ಲದೇ ಬೇಸರಗೊಂಡು ಗುಂಡಿ ತೋಡಿ ಹೂಳಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಎಫೆಕ್ಟ್: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್!ಕೊರೊನಾ ಎಫೆಕ್ಟ್: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್!

Corona Effect: 4 Thousands of chickens Killed In Santekaduru

1 ಕೋಳಿ ಮರಿಗೆ 50 ರುಪಾಯಿ ಹಾಗೂ ದೊಡ್ಡ ಕೋಳಿಗೆ 150 ರೂ. ನಷ್ಟ ಈ ಹಿನ್ನೆಲೆಯಲ್ಲಿ 4 ಸಾವಿರ ಕೋಳಿ ಮರಿಗಳನ್ನು ಹೂಳಲು ನಿರ್ಧಾರ ಮಾಡಲಾಗಿದ್ದು, ಫಾರಂ ಮಾಲೀಕ ಸುಮಾರು ಎರಡುವರೆ ಲಕ್ಷ ರೂ. ನಷ್ಟ ಅನುಭವಿಸುತ್ತಿದ್ದು, ಜೆಸಿಬಿ ಮೂಲಕ ಸುಮಾರು 12 ಅಡಿ ಆಳ ಗುಂಡಿ ತೋಡಿ ಕೋಳಿಗಳನ್ನು ಹೂತು ಹಾಕಲಾಗಿದೆ.

Corona Effect: 4 Thousands of chickens Killed In Santekaduru

ಕೊರೊನಾ ವೈರಸ್ ದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯಲ್ಲಿ ಕೋಳಿ ಬೆಳೆ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ರಾಜ್ಯದ ಹಲವು ಕಡೆಗಳಲ್ಲಿ ಇದೆ ರೀತಿ ಮಾಡಲಾಗಿದೆ ಎಂದು ಕೋಳಿ ಫಾರಂ ಮಾಲೀಕ ಶ್ರೀನಿವಾಸ್ ತಿಳಿಸಿದ್ದಾರೆ.

English summary
The owner of a poultry farm in Santekadur in Shivamogga taluk has killed more than four thousand chickens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X