ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಸಚಿವ ಈಶ್ವರಪ್ಪ ವಿರುದ್ಧ ದೂರು, ಕೂಡಲೇ ಬಂಧನಕ್ಕೆ ಆಗ್ರಹ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 11: ಪ್ರಚೋದನೆ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿದೆ. ಸಚಿವ ಈಶ್ವರಪ್ಪರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಚೋದನಕಾರಿ ಭಾಷಣ ಮಾಡಿದ್ದರು. "ಈ ಹಿಂದೆ ಕಾರ್ಯಕರ್ತರ ಮೇಲೆ ಹಲ್ಲೆಯಾದಾಗ ತಾಳ್ಮೆ ವಹಿಸುವಂತೆ ಹಿರಿಯರು ಸೂಚಿಸುತ್ತಿದ್ದರು. ಆದರೆ ಈಗ ಪಕ್ಷ, ಸಂಘಟನೆ ಬಲಿಷ್ಠವಾಗಿದೆ. ಇವತ್ತು ಯಾವುದರಲ್ಲಿ ಹೊಡೆಯುತ್ತಾರೋ, ಅದರಲ್ಲೇ ಹೊಡೆಯಿರಿ ಎಂದು ಹಿರಿಯರು ಹೇಳುತ್ತಿದ್ದಾರೆ,'' ಎಂದು ಹೇಳಿದ್ದಲ್ಲದೇ ಈ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿಕೊಂಡಿದ್ದರು.

 ಬಿಜೆಪಿಗೆ ಜನ ಪೂರ್ಣ ಬಹುಮತ ಕೊಟ್ಟಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ: ಕೆ.ಎಸ್.ಈಶ್ವರಪ್ಪ ಬಿಜೆಪಿಗೆ ಜನ ಪೂರ್ಣ ಬಹುಮತ ಕೊಟ್ಟಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ: ಕೆ.ಎಸ್.ಈಶ್ವರಪ್ಪ

ಮತ್ತೊಂದೆಡೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಮುಖಂಡರ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದರು. ಇದರ ವಿರುದ್ಧ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ದೂರು ಕೊಟ್ಟ ಶಿವಮೊಗ್ಗ ಮಾಜಿ ಎಂಎಲ್ಎ

ದೂರು ಕೊಟ್ಟ ಶಿವಮೊಗ್ಗ ಮಾಜಿ ಎಂಎಲ್ಎ

ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕಮಾರ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರು. ಸಚಿವ ಕೆ.ಎಸ್. ಈಶ್ವರಪ್ಪ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇದು ದೊಂಬಿ, ಕೋಮುಗಲಭೆ, ಧರ್ಮಗಳ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆಯಾಗಿದೆ. ಆದ್ದರಿಂದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಬೇಕು,'' ಎಂದು ಆಗ್ರಹಿಸಿದರು.

 ಶಿವಮೊಗ್ಗದ ಕೋಟೆ ಠಾಣೆಗೆ ದೂರು

ಶಿವಮೊಗ್ಗದ ಕೋಟೆ ಠಾಣೆಗೆ ದೂರು

ಮತ್ತೊಂದೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಚಿವ ಕೆ.ಎಸ್. ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕದಡುವ ಕೆಲಸ ಮಾಡುತ್ತಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

 ಬೇಳೂರು ಗೋಪಾಲಕೃಷ್ಣ ಆಕ್ರೋಶ

ಬೇಳೂರು ಗೋಪಾಲಕೃಷ್ಣ ಆಕ್ರೋಶ

ಮತ್ತೊಂದೆಡೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ತತ್ವ, ಸಿದ್ದಾಂತ, ಭಾರತ ಮಾತೆ ಎಂದು ಬಿಜೆಪಿಯ ಬಗ್ಗೆ ಈಶ್ವರಪ್ಪ ಮಾತನಾಡುತ್ತಾರೆ. ಆದರೆ ಮತ್ತೆ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಗೌರವ ಇರುವ ಹಿರಿಯ ನಾಯಕರು ಹೀಗೆ ಮಾತನಾಡಬಾರದು. ಇದು ಅವರಿಗೆ ಶೋಭೆ ತರಲ್ಲ,'' ಎಂದರು.
ಮೊನ್ನೆ ನಾವು ಬಲಿಷ್ಠರಾಗಿದ್ದೇವೆ, ಮುಟ್ಟಿದರೆ ಎರಡು ಹೊಡೆಯುತ್ತೇವೆ ಎಂದಿದ್ದರು. ಮಂಗಳವಾರ ಬೇರೆ ರೀತಿಯಲ್ಲೇ ಮಾತನಾಡಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ ಎನ್ನುತ್ತೀರಿ. ಈಗ ಹೀಗೆಲ್ಲಾ ಮಾತನಾಡುತ್ತಿದ್ದೀರಿ. ಸಾರ್ವಜನಿಕ ಬದುಕಿನಲ್ಲಿ ಹೇಗೆ ಇರುತ್ತಾರೋ ತಿಳಿಯುತ್ತಿಲ್ಲ. 75 ವರ್ಷ ಆದ ಮೇಲೆ ಟಿಕೆಟ್ ಕೈ ತಪ್ಪುತ್ತದೆ ಎಂದು ಹತಾಶೆಯಿಂದ ಮಾತನಾಡಿದ್ದಾರೆ ಎನಿಸುತ್ತಿದೆ. ಇಲ್ಲವೇ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಿದ ಖುಷಿಗೆ ಹೀಗೆ ಹೇಳುತ್ತಿದ್ದಾರಾ? ನಾವು ಹೊಡೆದಾಟಕ್ಕೆ ರೆಡಿ ಇದ್ದೀವಿ ಅಂದರೆ ನೀವು ಏನು ಸಂದೇಶ ಕೊಡುತ್ತೀರಾ ಈಶ್ವರಪ್ಪನವರೇ,? '' ಎಂದು ಪ್ರಶ್ನಿಸಿದರು.

 ಈಶ್ವರಪ್ಪ ವಿರುದ್ಧ ಕಾಗೋಡು ತಿಮ್ಮಪ್ಪ ಗರಂ

ಈಶ್ವರಪ್ಪ ವಿರುದ್ಧ ಕಾಗೋಡು ತಿಮ್ಮಪ್ಪ ಗರಂ

ಮಾಜಿ ಸಚಿವ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು ಸಚಿವ ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿದ್ದಾರೆ. ಸಾಗರ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದ ಕಾಗೋಡು ತಿಮ್ಮಪ್ಪ, "ಸಾರ್ವಜನಿಕ ಜೀವನದಲ್ಲಿ ಇರುವವರು ಇಂತಹ ಪದಗಳನ್ನು ಬಳಕೆ ಮಾಡಬಾರದು. ಸಿಟ್ಟಿದೆ, ಆಕ್ರೋಶವಿದೆ ಎಂದು ತೋರಿಸಬಾರದು, ಬಹಳ ಜಾಗೃತರಾಗಿರಬೇಕು. ಅಧಿಕಾರದಲ್ಲಿ ಇರುವವರು ಜನರಿಗೆ ಮಾದರಿಯಾಗಿರಬೇಕು,'' ಎಂದು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗಳು ಹಲವು ಬಾರಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಗಳಿವೆ. ಅವರ ಹೇಳಿಕೆಗಳ ವಿರುದ್ಧ ಸ್ವಪಕ್ಷೀಯರೇ ಆಕ್ಷೇಪ ವ್ಯಕ್ತಪಡಿಸಿದ ಉದಾಹರಣೆಗಳು ಇದ್ದಾವೆ. ಈಗ ಮತ್ತೊಮ್ಮೆ ಇಂತಹ ಹೇಳಿಕೆ ನೀಡಿ, ಜನರ ಹಾಗೂ ವಿಪಕ್ಷಗಳ ಸಿಟ್ಟಿಗೆ ಕಾರಣರಾಗಿದ್ದಾರೆ.

English summary
There is strong outrage against Rural Development and Panchayat Raj Minister KS Eshwarappa for provocative and derogatory statement against congress leaders, demands immediate arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X