• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್; ಶಿವಮೊಗ್ಗ ಕಾಂಗ್ರೆಸ್ ವಕ್ತಾರನ ವಿರುದ್ಧ ದೂರು

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಆಗಸ್ಟ್ 28: ಪ್ರಧಾನಿ ಮೋದಿಯವರ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ದೀಪಕ್ ಸಿಂಗ್ ಎನ್ನುವವರು ತಮ್ಮ ಫೇಸ್'ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿ, ನಿಂದಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಪಕ್ಷದವರು ದೂರು ನೀಡಿದ್ದಾರೆ.

ಪ್ರಧಾನಿಗೆ ಅವಮಾನ ಮಾಡುವ ಒಂದೇ ಉದ್ದೇಶದಿಂದ ಈ ಪೋಸ್ಟ್‌ ಹಾಕಿದ್ದು, ಇಂತಹ ಪೋಸ್ಟ್‌ ನಿಂದ ಸಮಾಜದಲ್ಲಿ ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿ ಕದಡುವ ಸಂಭವವಿದೆ. ಹೀಗಾಗಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ಸಿಂಗ್ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಾಸಕರ ತೇಜೋವಧೆ ಮಾಡುತ್ತಿದ್ದ 7 ಜನರ ಬಂಧನ

ನಗರ ಬಿಜೆಪಿ ಅಧ್ಯಕ್ಷ ಎನ್.ಕೆ. ನಾಗರಾಜ್, ಪ್ರಮುಖರಾದ ಬಳ್ಳೆಕೆರೆ ಸಂತೋಷ್, ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಹೃಷಿಕೇಶ್ ಪೈ, ನಗರಾಧ್ಯಕ್ಷ ದರ್ಶನ್ ಆರ್.ವಿ. ಜಿಲ್ಲಾ ಉಪಾಧ್ಯಕ್ಷ ಸುಹಾಸ್ ಶಾಸ್ತ್ರಿ, ನಗರ ಪ್ರಧಾನ ಕಾರ್ಯದರ್ಶಿ ಟಿ.ಆರ್. ಜಗನ್ನಾಥ್, ದಿನೇಶ್ ಆಚಾರ್, ರಾಹುಲ್ ಬಿದರೆ, ಅರುಣ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.

English summary
The Shivamogga district BJP has filed a complaint against Congress general secretary Deepak Singh for posting derogatory post on Prime Minister Modi in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X