ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕಾರಿಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ಚಾಲನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 19: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಶಿಕಾರಿಪುರದಲ್ಲಿ ನೂರಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಯಾವ ಯಾವ ಕಾಮಗಾರಿ ಚಾಲನೆ:

*ಶಿಕಾರಿಪುರ ತಾಲೂಕಿನ ಕಸಬಾ (ಕಲ್ಲುವಡ್ಡುಹಳ್ಳ) ಏತ ನೀರಾವರಿ ಯೋಜನೆ, ಶಿವಶರಣೆ ಅಕ್ಕಮಹಾದೇವಿ ಜನ್ಮ ಸ್ಥಳದ ಸಮಗ್ರ ಅಭಿವೃದ್ಧಿ ಯೋಜನೆ.

ಸಿಎಂ ಯಡಿಯೂರಪ್ಪನವರ ಶಿವಮೊಗ್ಗ ಜಿಲ್ಲಾ ಪ್ರವಾಸದ ಮಾಹಿತಿ ಇಲ್ಲಿದೆಸಿಎಂ ಯಡಿಯೂರಪ್ಪನವರ ಶಿವಮೊಗ್ಗ ಜಿಲ್ಲಾ ಪ್ರವಾಸದ ಮಾಹಿತಿ ಇಲ್ಲಿದೆ

*ಶಿಕಾರಿಪುರ ತಾ. ಸನ್ಯಾಸಿಕೊಪ್ಪ ಏತ ನೀರಾವರಿ ಯೋಜನೆ ಮುಖ್ಯ ನಾಲೆಯ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ಕವರ್ ಡಕ್ಟ್ ನಿರ್ಮಾಣ ಕಾಮಗಾರಿ.

Shivamogga: CM Yediyurappas Drived To Various Development Works Of Shikaripur Taluk

*110/11 ಕೆ.ವಿ. ವಿದ್ಯುತ್ ಉಪಕೇಂದ್ರ ಭಕ್ತನಕೊಪ್ಪ, 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಅಂಬಾರಕೊಪ್ಪ.

*ಶಿಕಾರಿಪುರ ತಾ. ಭದ್ರಾಪುರದಿಂದ ಗಾಮ, ಈಸೂರು, ಹುಣಸೆಕೊಪ್ಪ ಮುಖಾಂತರ ಮಾಡ್ರಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ.

ಸ್ವಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಸ್ವಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

*ಶಿಕಾರಿಪುರ ತಾ. ಕೊರಟಿಕೆರೆ ಎಂ.ಡಿ.ಆರ್ ಯಿಂದ ಹಕ್ಕಲಿಕೊಪ್ಪವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ.

*ಹುಲುಗಿನಕೊಪ್ಪದಿಂದ ಮುತ್ತಗಿ, ಬಿದರಕೊಪ್ಪ, ಸಾದಾಪುರ ಮುಖಾಂತರ ಕಡೇನಂದಿಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ

Shivamogga: CM Yediyurappas Drive To Various Development Works Of Shikaripur Taluk

ಉದ್ಘಾಟನೆಯಾದ ಕಾಮಗಾರಿಗಳು:

*ತೋಗರ್ಸಿ ಪಶು ಚಿಕಿತ್ಸಾಲಯ ಕಟ್ಟಡ, ಬಿಳಕಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ.

*ಶಿಕಾರಿಪುರ ಟೌನ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಶಿಕಾರಿಪುರ ಟೌನ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ.

*ಶಿರಾಳಕೊಪ್ಪ ಟೌನ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ ಬಳ್ಳಿಗಾವಿಯಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ಅಳವಡಿಸಿರುವ ಕಸ ಸಂಸ್ಕರಣ ಯಂತ್ರ ಮತ್ತು ಬೇಲಿಂಗ್ ಯಂತ್ರದ ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಒಂದೇ ವೇದಿಕೆಯಲ್ಲಿ ಉದ್ಘಾಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ, ಸಚಿವ ಕೆ.ಎಸ್ ಈಶ್ವರಪ್ಪ, ಪೌರಡಳಿತ ಸಚಿವ ನಾರಾಯಣ ಗೌಡ, ಸಂಸದ ಬಿ.ವೈ ರಾಘವೇಂದ್ರ, ಎಂ.ಎಸ್.ಐ.ಎಲ್ ಅಧ್ಯಕ್ಷ ಶಾಸಕ ಹಾರತಾಳು ಹಾಲಪ್ಪ, ಗೃಹ ಮಂಡಳಿ ಅಧ್ಯಕ್ಷ ಶಾಸಕ ಆರಗ ಜ್ಞಾನೇಂದ್ರ, ಶಾಸಕ ಕುಮಾರ ಬಂಗಾರಪ್ಪ, ಆರ್ಯ ವೈಶ್ಯ ನಿಗಮ ಅಧ್ಯಕ್ಷ ಅರಣ್ ಡಿ.ಎಸ್ , ಎಂ ಐ ಡಿಬಿ,ಕೆ.ಎಸ್ ಗುರುಮೂರ್ತಿ, ಪವಿತ್ರ ರಾಮಯ್ಯ, ಕೆ.ರೇವಣ್ಣಪ್ಪ, ಡಾ.ಲೀಲಾದೇವಿ ಪ್ರಸಾದ್, ಇದ್ದರು.

English summary
Chief Minister BS Yediyurappa inaugurated various development works in Shikaripur on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X