ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕಾರಿಪುರ ನೀರಾವರಿಗೆ ಒಟ್ಟು 1100 ಕೋಟಿ ಗಿಫ್ಟ್ ಕೊಟ್ಟ ಸಿಎಂ

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 7: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರದ ಜಲ ಯೋಜನೆಗಳ ಸಲುವಾಗಿ ಒಟ್ಟು 1,100 ಕೋಟಿ ಕೊಡುಗೆ ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕೆರೆಗಳ ಭರ್ತಿಗೆಂದು ತಮ್ಮ ತವರು ಕ್ಷೇತ್ರಕ್ಕೆ 250 ಕೋಟಿ ರೂಪಾಯಿ ಅನುದಾನ ಬಿಡುಗಡೆ ಘೋಷಿಸಿದ್ದರು. ಇದಾದ ನಂತರ ಸೆಪ್ಟೆಂಬರ್ 6ರ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿಕಾರಿಪುರದಲ್ಲಿ ಕೆರೆಗಳಿಗೆ ನೀರು ಹರಿಸಲು 850 ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಒಟ್ಟು 1100 ಕೋಟಿ ರೂಪಾಯಿ ಅನುದಾನವು ಶಿಕಾರಿಪುರಕ್ಕೆ ದೊರೆತಂತಾಗಿದೆ.

ಶಿವಮೊಗ್ಗಕ್ಕೆ ಮತ್ತಷ್ಟು ಅನುದಾನ ನೀಡಿದ ಸಿಎಂಶಿವಮೊಗ್ಗಕ್ಕೆ ಮತ್ತಷ್ಟು ಅನುದಾನ ನೀಡಿದ ಸಿಎಂ

ಕಾಮಗಾರಿಯ ಪ್ರಗತಿಗೆ ತಕ್ಕಂತೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ಇದರೊಂದಿಗೆ ಹಿರೇಕೆರೂರು ತಾಲ್ಲೂಕು ಪುರದಕೆರೆ ಗ್ರಾಮದ ಬಳಿಯ ತುಂಗಭದ್ರಾ ನಂದಿಯಿಂದ ಏತ ನೀರಾವರಿ ಮೂಲಕ ಶಿಕಾರಿಪುರ ತಾಲ್ಲೂಕಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

CM Yediyurappa Granted Total 1100 Crore For Shikharipura

ನೀರಿನ ಉಳಿತಾಯದ ಕುರಿತೂ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಈಗ ರಾಜ್ಯದಲ್ಲಿ ಜಲಾಶಯಗಳು ಭರ್ತಿಯಾದ ನಂತರ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು ಅದನ್ನು ಕರೆಗಳಿಗೆ ಭರ್ತಿ ಮಾಡುವ ಯೋಜನೆ ಕುರಿತು ಆಲೋಚಿಸಲಾಗಿದೆ.

English summary
Chief Minister B.S.Yediyurappa has granted a total of Rs 1,100 crore to Shikaripura water projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X