ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಕಾಮಗಾರಿಗೆ ಆನ್ ಲೈನ್ ಮೂಲಕ ಸಿಎಂ ಚಾಲನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 15: ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವಿಮಾನ ನಿಲ್ದಾಣದ ಕಾಮಗಾರಿಗೆ ಆನ್ ಲೈನ್ ಮೂಲಕವೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿಯೇ ಕುಳಿತುಕೊಂಡು ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದರು.

ಶಿವಮೊಗ್ಗ ಜಿಲ್ಲೆಯ ಜನತೆಯ ದಶಗಳ ಬೇಡಿಕೆಯಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಸುಮಾರು 220 ಕೋಟಿ ರುಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಾಗಿದೆ. ಆನ್ ಲೈನ್ ನಲ್ಲಿ ಸಿಎಂ ಚಾಲನೆ ನೀಡಿದ ವಿಡಿಯೋವನ್ನು ಬೃಹತ್ ಪರೆದೆಯ ಮೂಲಕ ಜನರು ವಿಡಿಯೋ ವೀಕ್ಷಿಸಿದರು.

ಬಿಎಸ್ ವೈ ಕನಸು ನನಸು; ಶಿವಮೊಗ್ಗ ಏರ್ ಪೋರ್ಟ್ ಕೆಲಸ ಆರಂಭಬಿಎಸ್ ವೈ ಕನಸು ನನಸು; ಶಿವಮೊಗ್ಗ ಏರ್ ಪೋರ್ಟ್ ಕೆಲಸ ಆರಂಭ

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗಬೇಕು ಎಂಬ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕನಸು ನನಸಾಗಿದೆ. ನಿಲ್ದಾಣದ ಕಾಮಗಾರಿಗಳು ಆರಂಭವಾಗಿವೆ.

CM Yediyurappa Drove Off In Online To Start Airport Work In Shivamogga

ಬೃಹತ್ ಗಾತ್ರದ ಯಂತ್ರಗಳು ವಿಮಾನ ನಿಲ್ದಾಣದ ಕಾಮಗಾರಿಯನ್ನು ಆರಂಭಿಸಿವೆ. ನಿಲ್ದಾಣದ ಸುತ್ತಲಿನ ಕಾಪೌಂಡ್ ನಿರ್ಮಾಣ, ರನ್‌ ವೇ, ಕಟ್ಟಡ ನಿರ್ಮಾಣ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ನೂರಾರು ಕಾರ್ಮಿಕರು ಮಳೆಯ ನಡುವೆಯೇ ಕೆಲಸದಲ್ಲಿ ನಿರತರಾಗಿದ್ದಾರೆ.

CM Yediyurappa Drove Off In Online To Start Airport Work In Shivamogga

ಶಿವಮೊಗ್ಗದ ಸೋಗಾನೆಯಲ್ಲಿ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಸಂಸದ ಬಿ.ವೈ ರಾಘವೇಂದ್ರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

English summary
Chief Minister BS Yediyurappa Drove off in online to start new airport in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X