ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಮಾಸ್ಕ್ ಹಾಕದವರಿಂದ ವಸೂಲಿಯಾದ ದಂಡದ ಮೊತ್ತ ಎಷ್ಟು ಗೊತ್ತೇನು?

|
Google Oneindia Kannada News

ಶಿವಮೊಗ್ಗ, ಮೇ 30: ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯ. ಮುಖಕ್ಕೆ ಮಾಸ್ಕ್ ಧರಿಸುವುದರಿಂದಲೂ ಕೋವಿಡ್-19 ನಿಂದ ಪಾರಾಗಬಹುದು.

ಸಾಮಾಜಿಕ ಅಂತರದ ಮತ್ತು ಮಾಸ್ಕ್ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದ್ದರೂ, ಕೆಲವು ಜನ ಅದನ್ನು ಗಂಭೀರವಾಗಿ ಪರಿಣಿಸಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಕೆಲವರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲ. ಅಂಥವರಿಗೆ ಶಿವಮೊಗ್ಗ ಸಿಟಿ ಕಾರ್ಪೊರೇಷನ್ ದಂಡ ವಿಧಿಸುತ್ತಿದೆ.

ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ: ಬಿಬಿಎಂಪಿ ಸಂಗ್ರಹಿಸಿದ ಒಟ್ಟು ಹಣ ಎಷ್ಟು?ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ: ಬಿಬಿಎಂಪಿ ಸಂಗ್ರಹಿಸಿದ ಒಟ್ಟು ಹಣ ಎಷ್ಟು?

ಕೋವಿಡ್-19 ತಡೆಗಟ್ಟಲು ರೂಪಿಸಿರುವ ನಿಯಮಗಳನ್ನು ಗಾಳಿ ತೂರಿದವರಿಗೆ ಶಿವಮೊಗ್ಗದಲ್ಲಿ 'ದಂಡ' ಎಂಬ ಬರೆ ಬಿದ್ದಿದೆ. ಅಂದ್ಹಾಗೆ, ಶಿವಮೊಗ್ಗದಲ್ಲಿ ಸಾಮಾಜಿಕ ಅಂತರ ಪಾಲಿಸದವರಿಂದ, ಮಾಸ್ಕ್ ಧರಿಸದವರಿಂದ ವಸೂಲಿಯಾದ ದಂಡದ ಮೊತ್ತ ಎಷ್ಟು ಗೊತ್ತೇ.?

1,33,600 ರೂಪಾಯಿ.!

1,33,600 ರೂಪಾಯಿ.!

ಶಿವಮೊಗ್ಗದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡಿದವರಿಂದ ವಸೂಲಿಯಾದ ದಂಡದ ಮೊತ್ತ ಇಲ್ಲಿಯವರೆಗೂ 1,33,600 ರೂಪಾಯಿ.!

ಕೋವಿಡ್-19 ತಡೆಗಟ್ಟಲು ರೂಪಿಸಿರುವ ನಿಯಮಗಳ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ. ಮಾಸ್ಕ್ ಧರಿಸದೆ ಓಡಾಡುವಂತಿಲ್ಲ.

ಮಾಸ್ಕ್‌ ಧರಿಸದ್ದಕ್ಕೆ ಮೈಸೂರು ನಗರ ಪಾಲಿಕೆಯಿಂದ ಬಿತ್ತು ಇಷ್ಟು ದಂಡಮಾಸ್ಕ್‌ ಧರಿಸದ್ದಕ್ಕೆ ಮೈಸೂರು ನಗರ ಪಾಲಿಕೆಯಿಂದ ಬಿತ್ತು ಇಷ್ಟು ದಂಡ

ಎಷ್ಟು ಮಂದಿಗೆ ದಂಡ.?

ಎಷ್ಟು ಮಂದಿಗೆ ದಂಡ.?

ಏಪ್ರಿಲ್ 24 ರಿಂದ ಪಬ್ಲಿಕ್ ಪ್ಲೇಸ್ ಗಳಲ್ಲಿ ಉಗುಳಿದವರಿಗೆ, ಮಾಸ್ಕ್ ಧರಿಸದೆ ಓಡಾಡಿದವರಿಗೆ ದಂಡ ವಿಧಿಸಲಾಗುತ್ತಿದೆ.

ಸಿಟಿ ಕಾರ್ಪೊರೇಷನ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಇಲ್ಲಿಯವರೆಗೂ ಮಾಸ್ಕ್ ಧರಿಸದ 775 ಮಂದಿಗೆ ದಂಡ ವಿಧಿಸಲಾಗಿದೆ.

ಸಾಮಾಜಿಕ ಅಂತರ ಪಾಲಿಸದವರಿಗೂ ದಂಡ

ಸಾಮಾಜಿಕ ಅಂತರ ಪಾಲಿಸದವರಿಗೂ ದಂಡ

ಸಾಮಾಜಿಕ ಅಂತರ ಪಾಲಿಸದ 321 ಮಂದಿಗೂ ಶಿವಮೊಗ್ಗ ಸಿಟಿ ಕಾರ್ಪೊರೇಷನ್ ಅಧಿಕಾರಿ ದಂಡ ಹಾಕಿದ್ದಾರೆ. ಇದರಿಂದ ಇಲ್ಲಿಯವರೆಗೂ ಒಟ್ಟು 66,200 ರೂಪಾಯಿ ವಸೂಲಿಯಾಗಿದೆ.


ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದ ಇಬ್ಬರಿಗೆ ತಲಾ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.


ತಂಬಾಕು ಪದಾರ್ಥಗಳನ್ನು ಅಗಿದು, ರಸ್ತೆ ಮೇಲೆ ಉಗಿದ ಮೂವರಿಗೆ ತಲಾ 1,500 ರೂಪಾಯಿ ದಂಡ ಹಾಕಲಾಗಿದೆ.

ಮೈಸೂರಲ್ಲಿ ಮೆಡಿಕಲ್ ಶಾಪ್ ಗೆ 5,000 ರೂ. ದಂಡಮೈಸೂರಲ್ಲಿ ಮೆಡಿಕಲ್ ಶಾಪ್ ಗೆ 5,000 ರೂ. ದಂಡ

ಜನರಿಗೆ ಸಾಮಾಜಿಕ ಜವಾಬ್ದಾರಿ ಬಂದಿದೆ

ಜನರಿಗೆ ಸಾಮಾಜಿಕ ಜವಾಬ್ದಾರಿ ಬಂದಿದೆ

''ಸಾರ್ವಜನಿಕ ಪ್ರದೇಶಗಳಲ್ಲಿ ಕೋವಿಡ್-19 ತಡೆಗಟ್ಟಲು ರೂಪಿಸಲಾಗಿರುವ ನಿಯಮಗಳ ಪಾಲನೆ ಕುರಿತು ನಿಗಾ ವಹಿಸಲು ಐದು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಜನರಿಗೆ ಸಾಮಾಜಿಕ ಜವಾಬ್ದಾರಿ ಬಂದಿದೆ. ಬಹುತೇಕರು ಮಾಸ್ಕ್ ಧರಿಸುತ್ತಿದ್ದಾರೆ'' ಎಂದಿದ್ದಾರೆ ಶಿವಮೊಗ್ಗ ಸಿಟಿ ಕಾರ್ಪೊರೇಷನ್ ನ ಹೆಲ್ತ್ ಇನ್ಸ್ ಪೆಕ್ಟರ್ ಡಾ.ಮದಕರಿ ನಾಯಕ.

English summary
Shivamogga City Corporation Collects Rs 1,33,600 Lakh fine from 775 People for not wearing masks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X