ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಮಕ್ಕಳು ದಿಢೀರ್ ಅಸ್ವಸ್ಥ, ಕೆಲಕಾಲ ಆತಂಕ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂ 27: ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದ 14 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲವು ಮಕ್ಕಳು ಪ್ರಜ್ಞೆ ತಪ್ಪುವ ಸ್ಥಿತಿಗೆ ತಲುಪಿದ್ದರು. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದರಿಂದ ನಾಲ್ಕು ಮಕ್ಕಳನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಶೀತ ಸಂಬಂಧಿ ಕಾಯಿಲೆಗಳಿಗಾಗಿ ಕಳೆದ ಮೂರ್ನಾಲ್ಕು ದಿನದಿಂದ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ಭಾನುವಾರ ಚುಚ್ಚುಮದ್ದು ನೀಡಲಾಗಿತ್ತು. ಈ ಚುಚ್ಚುಮದ್ದು ಪಡೆದ ಮಕ್ಕಳು ದಿಢೀರ್ ಅಸ್ವಸ್ಥಗೊಂಡಿದ್ದಾರೆ.

ಪ್ರಜ್ಞೆ ತಪ್ಪುವ ಸ್ಥಿತಿಗೆ ತಲುಪಿದ್ದ ಮಕ್ಕಳು: ವೈದ್ಯರ ವಿರುದ್ಧ ಆಕ್ರೋಶ

ಚುಚ್ಚು ಮದ್ದು ಪಡೆದ ಮಕ್ಕಳಲ್ಲಿ ತೀವ್ರ ಚಳಿ ಕಾಣಿಸಿಕೊಂಡಿದೆ. ಮಕ್ಕಳು ನರಳಾಡಲು ಶುರು ಮಾಡಿದ್ದಾರೆ. ಕೆಲವು ಮಕ್ಕಳು ಪ್ರಜ್ಞೆ ತಪ್ಪುವ ಸ್ಥಿತಿಗೆ ತಲುಪಿದರು. ಕೂಡಲೆ ಮಕ್ಕಳಿಗೆ ಚಿಕಿತ್ಸೆ ಆರಂಭಿಸಲಾಯಿತು. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದರಿಂದ ನಾಲ್ಕು ಮಕ್ಕಳನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು.

ದೇಶದಲ್ಲಿ ಚುನಾವಣೆಯನ್ನು ನಿಷೇಧಗೊಳಿಸಲಿ, ಬಿಜೆಪಿ ವಿರುದ್ಧ ಎಚ್‌ಡಿಕೆ ಆಕ್ರೋಶದೇಶದಲ್ಲಿ ಚುನಾವಣೆಯನ್ನು ನಿಷೇಧಗೊಳಿಸಲಿ, ಬಿಜೆಪಿ ವಿರುದ್ಧ ಎಚ್‌ಡಿಕೆ ಆಕ್ರೋಶ

ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚುಚ್ಚುಮದ್ದು ನೀಡಿದ ಡಾಕ್ಟರ್ ವಿರುದ್ಧ ಗರಂ ಆದರು. ಇದರಿಂದ ಆಸ್ಪತ್ರೆಯಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರು ಪೋಷಕರನ್ನು ಸಮಾಧಾನ ಪಡಿಸಿದರು.

Childrens become ill after receiving injection at Shivamogga hospital


ಆಸ್ಪತ್ರೆಗೆ ಶಾಸಕ ಹಾಲಪ್ಪ ದೌಡು

ವಿಚಾರ ತಿಳಿಯುತ್ತಿದ್ದಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಆಸ್ಪತ್ರೆಗೆ ದೌಡಾಯಿಸಿದರು. ಚಿಕಿತ್ಸೆ ಪಡೆಯುತ್ತಿದ್ದ ಪ್ರತಿ ಮಕ್ಕಳ ಬಳಿ ತೆರಳಿ, ಆರೋಗ್ಯ ವಿಚಾರಿಸಿದರು. ಈ ವೇಳೆ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಗುಡಿ, ಚರ್ಚು, ಮಸೀದಿಗಳ ಮೈಕುಗಳ ಮೇಲೆ ಪೊಲೀಸ್ ನಿಗಾಶಿವಮೊಗ್ಗ ಜಿಲ್ಲೆಯ ಗುಡಿ, ಚರ್ಚು, ಮಸೀದಿಗಳ ಮೈಕುಗಳ ಮೇಲೆ ಪೊಲೀಸ್ ನಿಗಾ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, "ಚುಚ್ಚುಮದ್ದಿನ ಅಡ್ಡಪರಿಣಾಮದಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳುತ್ತಿದ್ದಾರೆ. ನಿಜವಾದ ಕಾರಣ ತಿಳಿದು ಬಂದಿಲ್ಲ. ವೈದ್ಯರು ತಕ್ಷಣ ಆಸ್ಪತ್ರೆಗೆ ಧಾವಿಸಿ ಪ್ರತಿ ಮಗುವಿನ ಶುಶ್ರೂಷೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಿರುವ ಮಕ್ಕಳೊಂದಿಗೆ ಒಬ್ಬ ವೈದ್ಯರು, ದಾದಿಯನ್ನು ಕಳುಹಿಸಲಾಗಿದೆ. ಶಿವಮೊಗ್ಗದಲ್ಲಿ ಡಾ.ಶ್ರೀಧರ್ ಅವರು ಗಮನಿಸುತ್ತಿದ್ದಾರೆ. ಆತಂಕ ಪಡುವ ಪ್ರಶ್ನೆ ಇಲ್ಲ," ಎಂದು ತಿಳಿಸಿದರು.

ಘಟನೆ ಹಿನ್ನೆಲೆ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳಿಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಹರತಾಳು ಹಾಲಪ್ಪ ಅವರು ವೈದ್ಯರಿಗೆ ಸೂಚಿಸಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಸದಸ್ಯರಾದ ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಸೈಯದ್ ಜಾಕೀರ್, ಸಂತೋಷ್ ಶೇಟ್, ಮೈರಿ ಪಾಟೀಲ್ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

Recommended Video

Umran Malik ಮೊದಲನೇ ಪಂದ್ಯದಲ್ಲಿ ಹೀಗಾ ಆಡೋದು | *Cricket | OneIndia Kannada

English summary
14 children who were vaccinated for fever, colds and coughs at Sagara Hospital have become ill. later childrens shifted to Meggan Hospital in Shimoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X