ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ

|
Google Oneindia Kannada News

Recommended Video

ಶಿವಮೊಗ್ಗ ಉಪಚುನಾವಣೆಯಲ್ಲಿ ತಮ್ಮ ಮಗ್ಗ ಗೆದ್ದೇ ಗೆಲ್ತಾರೆ ಎಂದ ಬಿ ಎಸ್ ವೈ | Oneindia Kannada

ಶಿವಮೊಗ್ಗ, ನವೆಂಬರ್ 03 : ಶಿವಮೊಗ್ಗದಲ್ಲಿ ನನ್ನ ಮಗ ಬಿವೈ ರಾಘವೇಂದ್ರ ಶೇ.101ರಷ್ಟು ಗೆದ್ದೇ ಗೆಲ್ಲುತ್ತಾನೆ. ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಕೂಡ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಳಗಿನ ಜಾವವೇ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ರಾಘವೇಂದ್ರ, ಇನ್ನೊಬ್ಬ ಮಗ ವಿಜಯೇಂದ್ರ, ಅವರಿಬ್ಬರ ಪತ್ನಿಯರು ಮತ್ತು ಮೊಮ್ಮಕ್ಕಳೊಂದಿಗೆ ಆಗಮಿಸಿದ ಯಡಿಯೂರಪ್ಪನವರು ಮತ ಚಲಾಯಿಸಿದ ನಂತರ ಎಲ್ಲ ಕ್ಷೇತ್ರಗಳಲ್ಲಿಯೂ ಗೆಲ್ಲುವ ಆಶಯ ವ್ಯಕ್ತಪಡಿಸಿದರು.

ಮತ ಚಲಾವಣೆಗೆ ಮುನ್ನ ಶಿವಮೊಗ್ಗದಲ್ಲಿರುವ ಹುಚ್ಚರಾಯ ದೇವಸ್ಥಾನಕ್ಕೆ ಆಮಿಸಿ ರಾಘವೇಂದ್ರ, ಯಡಿಯೂರಪ್ಪ ಮತ್ತು ಕುಟುಂಬದವರು ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸ್ಪರ್ಧಾಕಣದಲ್ಲಿ ರಾಘವೇಂದ್ರ ಅವರಿಗೆ ವಿರುದ್ಧವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

'ಬಸ್ ಸ್ಟಾಂಡ್ ರಾಘುವನ್ನು ಸೋಲಿಸುವುದು ನಮ್ಮ ಗುರಿ' 'ಬಸ್ ಸ್ಟಾಂಡ್ ರಾಘುವನ್ನು ಸೋಲಿಸುವುದು ನಮ್ಮ ಗುರಿ'

2018ರ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಜಯಗಳಿಸಿದ ನಂತರ, ತಾವು ಸಂದಸರಾಗಿ ಆಯ್ಕೆಯಾಗಿದ್ದ ಶಿವಮೊಗ್ಗ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಉಪ ಚುನಾವಣೆ ನಡೆಸಬೇಕಾಗಿ ಬಂದಿದೆ.

ನವೆಂಬರ್ 6ರ ನಂತರ ಮೈತ್ರಿ ಸರಕಾರ ಪತನ

ನವೆಂಬರ್ 6ರ ನಂತರ ಮೈತ್ರಿ ಸರಕಾರ ಪತನ

ನವೆಂಬರ್ 6ರಂದು ಮಂಗಳವಾರ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭೆ, ಹಾಗು ರಾಮನಗರ ಮತ್ತು ಜಮಖಂಡಿ ವಿಧಾನಸಭೆಗಳಿಗೆ ಇಂದು ನಡೆದಿರುವ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ನವೆಂಬರ್ 6 ನಂತರ ಜೆಡಿಎಸ್-ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂದು ಯಡಿಯೂರಪ್ಪ ಅವರು ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ, ಮೈತ್ರಿ ಪಕ್ಷಗಳಿಗೆ ಹುಲಿ 'ಶಿಕಾರಿ' ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ, ಮೈತ್ರಿ ಪಕ್ಷಗಳಿಗೆ ಹುಲಿ 'ಶಿಕಾರಿ'

ಶಿವರಾಮೇಗೌಡ vs ಡಾ. ಸಿದ್ದರಾಮಯ್ಯ

ಶಿವರಾಮೇಗೌಡ vs ಡಾ. ಸಿದ್ದರಾಮಯ್ಯ

ಬಳ್ಳಾರಿ, ಶಿವಮೊಗ್ಗ ಮಾತ್ರವಲ್ಲ, ಜೆಡಿಎಸ್ ಬಲಿಷ್ಠವಾಗಿರುವ ಮಂಡ್ಯದಲ್ಲಿಯೂ ಬಿಜೆಪಿ ಅಚ್ಚರಿಯ ಫಲಿತಾಂಶ ನೀಡಲಿದೆ ಎಂದು ಅವರು ವಿಶ್ವಾಸದಿಂದ ಹೇಳಿದ್ದಾರೆ. ಈ ಉಪ ಚುನಾವಣೆ ಬಿಜೆಪಿಯ ಸಂಘಟನಾ ಶಕ್ತಿ ಮತ್ತು ಮೈತ್ರಿಕೂಟದ ಹಣ ಬಲದ ನಡುವಿನ ಯುದ್ಧವಾಗಿದೆ. ಈ ಯುದ್ಧದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಎಲ್ ಆರ್ ಶಿವರಾಮೇಗೌಡ ಅವರು ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಮಾಜಿ ಕೆಎಎಸ್ ಅಧಿಕಾರಿ ಡಾ. ಸಿದ್ದರಾಮಯ್ಯ ಅವರು ಕಣಕ್ಕಿಳಿದಿದ್ದಾರೆ.

ಮಂಡ್ಯದಲ್ಲಿ ಕೈ-ತೆನೆಗೆ ಹಿನ್ನಡೆ, ಚುನಾವಣೆ ಬಹಿಷ್ಕಾರ ಹಾಕಿದ ಕುರುಬರು ಮಂಡ್ಯದಲ್ಲಿ ಕೈ-ತೆನೆಗೆ ಹಿನ್ನಡೆ, ಚುನಾವಣೆ ಬಹಿಷ್ಕಾರ ಹಾಕಿದ ಕುರುಬರು

ರಾಘವೇಂದ್ರ ಗೆಲುವು ಅಷ್ಟು ಸುಲಭವಲ್ಲ

ರಾಘವೇಂದ್ರ ಗೆಲುವು ಅಷ್ಟು ಸುಲಭವಲ್ಲ

ಯಡಿಯೂರಪ್ಪನವರು ಏನೇ ವಿಶ್ವಾಸ ವ್ಯಕ್ತಪಡಿಸಿದ್ದರೂ, ಬಿವೈ ರಾಘವೇಂದ್ರ ಅವರ ಗೆಲುವು ಅಷ್ಟು ಸುಲಭವಲ್ಲ. ಏಕೆಂದರೆ, ಈಡಿಗ ಸಮುದಾಯದ ನಾಯಕ ಎಂದು ಗುರುತಿಸಿಕೊಂಡಿರುವ ಮಧು ಬಂಗಾರಪ್ಪ ಅವರಿಗೆ ಜೆಡಿಎಸ್ ಜೊತೆಗೆ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಬೆಂಬಲವೂ ಇದೆ. ಅಲ್ಲದೆ, ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರ ವಿರುದ್ಧ ಬ್ರಾಹ್ಮಣ ಸಮುದಾಯವೂ ಆಕ್ರೋಶಗೊಂಡಿದೆ ಎಂಬ ಮಾತು ಕೇಳಿಬಂದಿದೆ.

ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ

ಶಿವಮೊಗ್ಗದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ?

ಶಿವಮೊಗ್ಗದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 2.70 ಲಕ್ಷ ಲಿಂಗಾಯತರು, 2.5 ಲಕ್ಷ ದಲಿತರು, 2 ಲಕ್ಷ ಈಡಿಗರು, 1.5 ಲಕ್ಷ ಬ್ರಾಹ್ಮಣರು, 1.30 ಲಕ್ಷ ಮುಸ್ಲಿಂ, 60 ಸಾವಿರ ಕುರುಬ ಮತಗಳಿವೆ. ಬಿಜೆಪಿ ಲಿಂಗಾಯತ, ಬ್ರಾಹ್ಮಣ ಮತ್ತು ಬಂಟರ (ಉಡುಪಿಯ ಬೈಂದೂರು ಸೇರಿದೆ) ಮತಗಳನ್ನು ನಂಬಿಕೊಂಡಿವೆ. ಈಡಿಗರು, ಮುಸ್ಲಿಂಮರು, ಒಕ್ಕಲಿಗರು ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೆಂಬಲಿಸಬಹುದು ಎಂಬುದು ನಿರೀಕ್ಷೆಯಾಗಿದೆ.

English summary
101% my son B Y Raghavendra is going to win the Shimoga (Shivamogga) Lok Sabha seat. We are also going to win Bellary & Jamkhandi. We will get absolute majority in all the constituencies: Former Karnataka CM BS Yeddyurappa has expressed confidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X