ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆ : ಶಿವಮೊಗ್ಗದಲ್ಲಿ ಬಿಜೆಪಿ ಮತಗಳಿಕೆ ಲೆಕ್ಕಾಚಾರ

|
Google Oneindia Kannada News

ಶಿವಮೊಗ್ಗ, ಮೇ 26 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 2,23,360 ಮತಗಳ ಅಂತರದಿಂದ ಜಯಗಳಿಸುವ ಮೂಲಕ 3ನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಅವರ ನಡುವಿನ ಹೋರಾಟ ಕುತೂಹಲಕ್ಕೆ ಕಾರಣವಾಗಿತ್ತು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು 2018ರ ಉಪ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದರು. ಬಿ.ವೈ.ರಾಘವೇಂದ್ರ ಉಪ ಚುನಾವಣೆಯಲ್ಲಿಯೂ ಗೆದ್ದಿದ್ದರು.

ಶಿವಮೊಗ್ಗ : 2 ಲಕ್ಷ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಜಯಶಿವಮೊಗ್ಗ : 2 ಲಕ್ಷ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಜಯ

2019ರ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು 7,29,872 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರು 506512 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಒಂದೇ ವರ್ಷದಲ್ಲಿ ಮೂರು ಚುನಾವಣೆ ಸೋತ ಮಧು ಬಂಗಾರಪ್ಪಒಂದೇ ವರ್ಷದಲ್ಲಿ ಮೂರು ಚುನಾವಣೆ ಸೋತ ಮಧು ಬಂಗಾರಪ್ಪ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು. ಆದ್ದರಿಂದ, ಬಿ.ವೈ.ರಾಘವೇಂದ್ರ ಅವರು ಎಲ್ಲಾ ಕ್ಷೇತ್ರಗಳಲ್ಲೂ ಲೀಡ್ ಪಡೆದಿದ್ದಾರೆ. ಯಾವ ಕ್ಷೇತ್ರದಲ್ಲಿ ಎಷ್ಟು ಮತ ಬಂದಿದೆ? ಎಂಬ ಮಾಹಿತಿ ಇಲ್ಲಿದೆ....

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಶಿವಮೊಗ್ಗ ನಗರ, ಗ್ರಾಮಾಂತರ ಕ್ಷೇತ್ರ

ಶಿವಮೊಗ್ಗ ನಗರ, ಗ್ರಾಮಾಂತರ ಕ್ಷೇತ್ರ

* ಶಿವಮೊಗ್ಗ ನಗರದ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ 110928 ಮತ, ಮಧು ಬಂಗಾರಪ್ಪ 63020 ಮತಗಳನ್ನು ಪಡೆದಿದ್ದಾರೆ.

* ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ರಾಘವೇಂದ್ರ 91450, ಮಧು ಬಂಗಾರಪ್ಪ 73204 ಮತಗಳನ್ನು ಪಡೆದಿದ್ದಾರೆ.

ಭದ್ರಾವತಿ, ಸೊರಬ ಕ್ಷೇತ್ರ

ಭದ್ರಾವತಿ, ಸೊರಬ ಕ್ಷೇತ್ರ

* ಕಾಂಗ್ರೆಸ್ ಶಾಸಕರು ಇರುವ ಭದ್ರಾವತಿಯಲ್ಲಿ ರಾಘವೇಂದ್ರ 73366, ಮಧು ಬಂಗಾರಪ್ಪ 67,721 ಮತ ಪಡೆದಿದ್ದಾರೆ.

* ಮಧು ಬಂಗಾರಪ್ಪ ತವರು ಕ್ಷೇತ್ರ ಸೊರಬದಲ್ಲಿ ರಾಘವೇಂದ್ರ 75,998, ಮಧು ಬಂಗಾರಪ್ಪ 73,177 ಮತ ಪಡೆದಿದ್ದಾರೆ.

ತೀರ್ಥಹಳ್ಳಿ, ಶಿಕಾರಿಪುರ ಕ್ಷೇತ್ರ

ತೀರ್ಥಹಳ್ಳಿ, ಶಿಕಾರಿಪುರ ಕ್ಷೇತ್ರ

* ಬಿ.ವೈ.ರಾಘವೇಂದ್ರ ತವರು ಕ್ಷೇತ್ರ ಶಿಕಾರಿಪುರದಲ್ಲಿ ರಾಘವೇಂದ್ರ 85,868 ಮತ, ಮಧು ಬಂಗಾರಪ್ಪ 57,337 ಮತ ಪಡೆದಿದ್ದಾರೆ.

* ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಘವೇಂದ್ರ 86,868, ಮಧು ಬಂಗಾರಪ್ಪ ಅವರು 57,337 ಮತಗಳನ್ನು ಪಡೆದಿದ್ದಾರೆ.

ಬೈಂದೂರು, ಸಾಗರ ಕ್ಷೇತ್ರ

ಬೈಂದೂರು, ಸಾಗರ ಕ್ಷೇತ್ರ

* ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ರಾಘವೇಂದ್ರ 117401 ಮತ, ಮಧು ಬಂಗಾರಪ್ಪ ಅವರು 43,789 ಮತ ಪಡೆದಿದ್ದಾರೆ.

* ಸಾಗರ ಕ್ಷೇತ್ರದಲ್ಲಿ ರಾಘವೇಂದ್ರ 87,497 ಮತ, ಮಧು ಬಂಗಾರಪ್ಪ ಅವರು 63,847 ಮತ ಪಡೆದಿದ್ದಾರೆ.

English summary
BJP candidate B.Y.Raghavendra won the lok sabha elections 2019 from Shimoga lok sabha seat. JD(S) and Congress candidate Madu Bangarappa lost with 2,23,360 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X