ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಸಂಸದ ಬಿ.ವೈ.ರಾಘವೇಂದ್ರ ಜನಸ್ನೇಹಿ ಕಚೇರಿ ಉದ್ಘಾಟನೆ

|
Google Oneindia Kannada News

ಶಿವಮೊಗ್ಗ, ಜೂನ್ 13 : ಶಿವಮೊಗ್ಗ ಕ್ಷೇತ್ರದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ನಗರದಲ್ಲಿ ಸಂಸದರ ಕಚೇರಿಯನ್ನು ಉದ್ಘಾಟನೆ ಮಾಡಿದರು. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ.

ಶಿವಮೊಗ್ಗದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಬಿ.ವೈ.ರಾಘವೇಂದ್ರ ಅವರು ಸಂಸದರ ಕಚೇರಿಯನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

'ಈ ಕಚೇರಿಯನ್ನು ಸಂಪೂರ್ಣ ಜನಸ್ನೇಹಿಯಾಗಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಿಗೆ ಇನ್ನು ಮುಂದೆ ಸಂಸದರ ಕಚೇರಿಯಲ್ಲಿಯೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ' ಎಂದು ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಕುತೂಹಲ ಮೂಡಿಸಿದ ಸಂಸದ ರಾಘವೇಂದ್ರ-ಡಿಕೆ ಶಿವಕುಮಾರ್ ಭೇಟಿಕುತೂಹಲ ಮೂಡಿಸಿದ ಸಂಸದ ರಾಘವೇಂದ್ರ-ಡಿಕೆ ಶಿವಕುಮಾರ್ ಭೇಟಿ

BY Raghavendra inaugurates MO office in Shivamogga city

'ವಿಧವಾ ವೇತನ, ವೃದ್ಧಾಪ್ಯ ವೇತನ, ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಜಿಗಳನ್ನು ಸಂಸದರ ಕಚೇರಿಗೆ ತಂದು ಕೊಡಿ. ಕಚೇರಿ ಸಿಬ್ಬಂದಿ ಸಂಬಂಧಪಟ್ಟ ಕಚೇರಿಗೆ ಅದನ್ನು ತಲುಪಿಸುತ್ತಾರೆ' ಎಂದರು.

ಲೋಕಸಭಾ ಚುನಾವಣೆ : ಶಿವಮೊಗ್ಗದಲ್ಲಿ ಬಿಜೆಪಿ ಮತಗಳಿಕೆ ಲೆಕ್ಕಾಚಾರಲೋಕಸಭಾ ಚುನಾವಣೆ : ಶಿವಮೊಗ್ಗದಲ್ಲಿ ಬಿಜೆಪಿ ಮತಗಳಿಕೆ ಲೆಕ್ಕಾಚಾರ

BY Raghavendra inaugurates MO office in Shivamogga city

2019ರ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು 729872 ಮತಗಳನ್ನು ಪಡೆದು ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಮಧು ಬಂಗಾರಪ್ಪ ಅವರನ್ನು 223360 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಶಿವಮೊಗ್ಗ : 2 ಲಕ್ಷ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಜಯಶಿವಮೊಗ್ಗ : 2 ಲಕ್ಷ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಜಯ

ಬಿ.ವೈ.ರಾಘವೇಂದ್ರ ಅವರು ಮೂರನೇ ಬಾರಿಗೆ ಶಿವಮೊಗ್ಗ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ. 2009ರ ಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. 2018ರ ಉಪ ಚುನಾವಣೆ, 2019ರ ಚುನಾವಣೆಯಲ್ಲಿ ಪುನಃ ಜಯಗಳಿಸುವ ಮೂಲಕ ಅವರು ಸಂಸತ್ ಪ್ರವೇಶ ಮಾಡಿದ್ದಾರೆ.

English summary
B.Y.Raghavendra inaugurated the newly set up office of Shivamogga MP. People can submit application for central government schemes from office Raghavendra announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X