ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಗಾ ನದಿ ಪಾಲಾಗುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಿದ ಕಂಡಕ್ಟರ್!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 26 : ಕಂಡಕ್ಟರ್‌ ಸಮಯಪ್ರಜ್ಞೆಯಿಂದ ನೀರು ಪಾಲಾಗುತ್ತಿದ್ದ 25 ಮಂದಿ ಪ್ರಯಾಣಿಕರು ಮರುಜೀವ ಪಡೆದುಕೊಂಡ ಘಟನೆ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯ ಮಂಡಗದ್ದೆಯಲ್ಲಿ ನಡೆದಿದೆ.

ಶಿವಮೊಗ್ಗದಿಂದ ಮಂಗಳೂರಿಗೆ ಹೊರಟಿದ್ದ ಕ್ರಿಸ್ತರಾಜ (ರೋಸಿ) ಬಸ್‌ನ ಪ್ರಯಾಣಿಕರು ಮಂಗಳವಾರ ತುಂಬಿ ನಿಂತಿದ್ದ ತುಂಗೆ ಪಾಲಾಗಬೇಕಿತ್ತು. ಆದರೆ, ಕಂಡಕ್ಟರ್ ಭಗವಾನ್ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರ ಜೀವ ಉಳಿದಿದೆ.

ಚಾಲಕನ ಸಮಯಪ್ರಜ್ಞೆ: ಕಿತ್ತೂರು ಪಟ್ಟಣದಲ್ಲಿ ತಪ್ಪಿದ ಭಾರೀ ಬಸ್ ದುರಂತಚಾಲಕನ ಸಮಯಪ್ರಜ್ಞೆ: ಕಿತ್ತೂರು ಪಟ್ಟಣದಲ್ಲಿ ತಪ್ಪಿದ ಭಾರೀ ಬಸ್ ದುರಂತ

ಏನಿದು ಘಟನೆ ? : ಭಾರೀ ಮಳೆ ಹಿನ್ನಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪ ರಸ್ತೆಯೆಲ್ಲಾ ಕೆಸರುಮಯವಾಗಿತ್ತು. ಬಸ್‌ ಮಂಡಗದ್ದೆ ಸಮೀಪದ 17ನೇ ಮೈಲುಗಲ್ಲು ಬಳಿ ಬಂದಾಗ ಕ್ರಿಸ್ತರಾಜ (ರೋಸಿ) ಬಸ್‌ನ ಚಾಲಕ ಅಪ್ಸರ್ ಗೆ ತಲೆಸುತ್ತು ಬಂದಿದ್ದು, ಬಸ್ ಸ್ಟೈರಿಂಗ್ ಕೈ ಬಿಟ್ಟಿದ್ದಾರೆ.

Bus conductors timely action saves passengers life in Mandagadde

ಉಡುಪಿ-ಮಂಗಳೂರು ಬಸ್ ಆಗಿದ್ದರಿಂದ ಟಿಕೆಟ್ ಮಾಡಿ ಮುಗಿಸಿದ್ದ ಕಂಡಕ್ಟರ್ ಭಗವಾನ್, ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ಡ್ರೈವರ್ ಪರಿಸ್ಥಿತಿ ನೋಡಿದ ತಕ್ಷಣ ಸ್ಟೈರಿಂಗ್ ತಿರುಗಿಸಿ ತುಂಗಾ ನದಿ ಕಡೆ ಹೋಗುತ್ತಿದ್ದ ಬಸ್ ತಿರುಗಿಸಿದ್ದಾರೆ.

ಆಗ ಕೆಎಸ್ಆರ್‌ಟಿಸಿ ಬಸ್ ಚಾಲಕ, ಈಗ ಕಾಂಗ್ರೆಸ್ ಶಾಸಕಆಗ ಕೆಎಸ್ಆರ್‌ಟಿಸಿ ಬಸ್ ಚಾಲಕ, ಈಗ ಕಾಂಗ್ರೆಸ್ ಶಾಸಕ

ಇದರಿಂದಾಗಿ ಸುಮಾರು 25 ಜನರ ಜೀವ ಉಳಿದಿದೆ. ಈ ಅಘಘಾತದಿಂದಾಗಿ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

Bus conductors timely action saves passengers life in Mandagadde

ಕಂಡಕ್ಟರ್ ಭಗವಾನ್ ತೀರ್ಥಹಳ್ಳಿಯ ಬದನೇಹಕ್ಲು ಗ್ರಾಮದವರಾಗಿದ್ದು, ಹೆಸರಿಗೆ ತಕ್ಕಂತೆ ಪ್ರಯಾಣಿಕರ ಪಾಲಿಗೆ 'ಭಗವಾನ್' ಆಗಿದ್ದಾರೆ. ಕಂಡಕ್ಟರ್ ಕಾರ್ಯವನ್ನು ಪ್ರಯಾಣಿಕರು ಶ್ಲಾಘಿಸಿದ್ದಾರೆ.

English summary
Private bus conductor Bagavan saved the life of the passengers after driver lost consciousness in Mandagadde, Shivamogga-Thirthahalli road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X