ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಟ ನಿಲ್ಲಿಸಿದ 'ಈಸೂರು ದಂಗೆ': ಅಂತಿಮ ದರ್ಶನಕ್ಕೆ ಜನಸಾಗರ, ರಾಷ್ಟ್ರಗೀತೆ ಹೇಳಿ ಅಂತ್ಯ ಸಂಸ್ಕಾರ

|
Google Oneindia Kannada News

ಶಿವಮೊಗ್ಗ, ಮಾರ್ಚ್ 6: ಸೋಲಿಲ್ಲದ ಸರದಾರ ಎಂಬ ಖ್ಯಾತಿ ಹೊಂದಿದ್ದ ಈಸೂರು ದಂಗೆ ಹೋರಿ ಮೃತಪಟ್ಟಿದೆ. ವಯೋಸಹಜ ಕಾರಣದಿಂದ ಹೋರಿ ಕೊನೆಯುಸಿರೆಳೆದಿದೆ. ಈಸೂರು ಗ್ರಾಮದಲ್ಲಿ ಈಸೂರು ದಂಗೆಯ ಅಂತಿಮ ಯಾತ್ರೆ ನಡೆಯಿತು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ "ಈಸೂರು ದಂಗೆ' ಯ ಅಂತಿಮ ದರ್ಶನಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರು ಬಂದಿದ್ದರು. ಟ್ರಾಕ್ಟರ್ ಮೇಲೆ ಹೋರಿಯನ್ನು ಇರಿಸಿ ಮೆರವಣಿಗೆ ನಡೆಸಲಾಯಿತು. ಗ್ರಾಮದಲ್ಲಿ ದೊಡ್ಡ ಸಂಖ್ಯೆಯ ಜನರು ಸೇರಿ, ಹೋರಿಗೆ ಅಂತಿಮ ನಮನ ಸಲ್ಲಿಸಿದರು. ಅಶೋಕ ಚಕ್ರವಿಲ್ಲದ ತ್ರಿವರ್ಣ ಹೊದಿಸಿ, ರಾಷ್ಟ್ರಗೀತೆ ಹಾಡಿ ಗ್ರಾಮದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಸ್ಮಾರ್ಟ್ ಸಿಟಿ ಶಿವಮೊಗ್ಗ; ಗುಂಡಿಗೆ ಬೀಳುತ್ತಲೇ ಇವೆ ವಾಹನಗಳು! ಸ್ಮಾರ್ಟ್ ಸಿಟಿ ಶಿವಮೊಗ್ಗ; ಗುಂಡಿಗೆ ಬೀಳುತ್ತಲೇ ಇವೆ ವಾಹನಗಳು!

ದಶಕಕ್ಕೂ ಹೆಚ್ಚು ಕಾಲದಿಂದ ಸ್ಪರ್ಧೆ

ದಶಕಕ್ಕೂ ಹೆಚ್ಚು ಕಾಲದಿಂದ ಸ್ಪರ್ಧೆ

ಈಸೂರಿನ ಡಾ.ಪ್ರಶಾಂತ್ ಎಂಬುವರು ಈಸೂರು ದಂಗೆ ಹೋರಿಯನ್ನು ಸಾಕಿದ್ದರು. ಈ ಹೋರಿ ಶಿವಮೊಗ್ಗ, ಹಾವೇರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಭಾರೀ ಹೆಸರು ಗಳಿಸಿತ್ತು. ಪಕ್ಕದ ತಮಿಳುನಾಡಿನಲ್ಲೂ ಈಸೂರು ದಂಗೆಗೆ ಅಭಿಮಾನಿಗಳಿದ್ದಾರೆ. ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಈಸೂರು ದಂಗೆ ಹೋರಿಯನ್ನು ನೋಡಲೆಂದೇ ಹೋರಿ‌ಹಬ್ಬಕ್ಕೆ ಅಭಿಮಾನಿಗಳು ಹರಿದುಬರುತ್ತಿದ್ದರು.

ಎಲ್ಲಿಯೇ ಹೋದರೂ ಬಹುಮಾನ ಫಿಕ್ಸ್

ಎಲ್ಲಿಯೇ ಹೋದರೂ ಬಹುಮಾನ ಫಿಕ್ಸ್

ಯಾವುದೇ ಹೋರಿ ಬೆದರಿಸುವ ಸ್ಪರ್ಧೆಗೆ ಹೋದರೂ ಈಸೂರು ದಂಗೆ ಹೋರಿಗೆ ಬಹುಮಾನ ಕಟ್ಟಿಟ್ಟ ಬುತ್ತಿ. ಎಷ್ಟೇ ಜನರು ಅಡ್ಡಗಟ್ಟಿದರೂ, ಯಾರ ಕೈಗೂ ಸಿಗದೆ ತಪ್ಪಿಸಿಕೊಳ್ಳುತ್ತಿತ್ತು. ನೂರಾರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಹಿಸಿದ್ದರೂ, ಈತನಕ ಯಾರೊಬ್ಬರು ಈಸೂರು ದಂಗೆ ಹೋರಿಯನ್ನು ಹಿಡಿದು, ಕೊಬ್ಬರಿ ಹರಿಯಲು ಸಾದ್ಯವಾಗಿಲ್ಲ. ಈ ಹೋರಿಯು ಮಿಂಚಿನ ವೇಗದಲ್ಲಿ ಓಡುವ ಶಕ್ತಿ ಹೊಂದಿತ್ತು. 7 ಬೈಕ್, 15 ಫ್ರಿಡ್ಜ್ , 15 ಟಿವಿ, ಎತ್ತಿನಗಾಡಿ, ಬಂಗಾರದ ಬಳೆ, 10ಕ್ಕೂ ಹೆಚ್ಚು ಬಂಗಾರದ ಬಹುಮಾನಗಳು ಸೇರಿದಂತೆ ನೂರಾರು ಬಹುಮಾನಗಳನ್ನು ಈ ಹೋರಿ ಗಳಿಸಿದೆ.

ರಾಜ್ಯಾದ್ಯಂತ ಇದ್ದಾರೆ ಅಭಿಮಾನಿಗಳು

ರಾಜ್ಯಾದ್ಯಂತ ಇದ್ದಾರೆ ಅಭಿಮಾನಿಗಳು

ಈಸೂರು ದಂಗೆ ಹೋರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೆಲ್ಲ ಈ ಹೋರಿ ಪರಿಚಿತ. ಈ ಹೋರಿಗಾಗಿಯೇ ಸ್ಪರ್ಧೆಗೆ ಬರುವವರಿದ್ದರು. ಪ್ರತಿ ಸ್ಪರ್ಧೆಯಲ್ಲೂ ಈಸೂರು ದಂಗೆಯನ್ನು ಹಿಡಿದು ನಿಲ್ಲಿಸಬೇಕು ಎಂದು ಅಖಾಡಕ್ಕೆ ಇಳಿಯುವವರಿದ್ದರು.

ಟ್ಯಾಟೋ ಹಾಕಿಸಿಕೊಳ್ಳುತ್ತಿದ್ದರು

ಟ್ಯಾಟೋ ಹಾಕಿಸಿಕೊಳ್ಳುತ್ತಿದ್ದರು

ಈಸೂರು ದಂಗೆ ಹೋರಿ ಅದೆಷ್ಟು ಫೇಮಸ್ ಅಂದರೆ, ಇದರೊಟ್ಟಿಗೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಹೋರಿ ಬೆದರಿಸುವ ಸ್ಪರ್ಧೆಗೆ ಮೊದಲು ಮತ್ತು ಆನಂತರ ಈಸೂರು ದಂಗೆ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ನೂಕಾಟ, ತಳ್ಳಾಟವಾಗುತ್ತಿತ್ತು. ಇನ್ನು, ನೂರಾರು ಮಂದಿ ಈಸೂರು ದಂಗೆ ಹೋರಿಯ ಹಚ್ಚೆ ಅಥವಾ ಟ್ಯಾಟೋಗಳನ್ನು ಹಾಕಿಸಿಕೊಂಡು, ಅಭಿಮಾನ ಪ್ರದರ್ಶಿಸುತ್ತಿದ್ದರು.

ಇಷ್ಟೊಂದು ಖ್ಯಾತಿಯ ಪಡೆದಿದ್ದ ಈಸೂರು ದಂಗೆ ಹೋರಿ, ತನ್ನ ಮಿಂಚಿನ ಓಟ ನಿಲ್ಲಿಸಿದೆ. ಅದನ್ನು ಸಾಕಿದವರು, ಗ್ರಾಮಸ್ಥರು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿ ಪೋಸ್ಟ್ ಪ್ರಕಟಿಸಿ, ಈಸೂರು ದಂಗೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.

English summary
Thousands of people from various villages in Shikaripur taluk paid homage to their beloved bull ‘Esuru Dange’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X