ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಉಡುಪಿ ಸರ್ಕಾರಿ ಬಸ್‌ನಲ್ಲಿ ಮುಂಗಡ ಟಿಕೆಟ್ ಸೌಲಭ್ಯ

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 20 : ಶಿವಮೊಗ್ಗ-ಉಡುಪಿ ನಡುವೆ ಸಂಚಾರ ನಡೆಸುವ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಈ ಬಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಹಲವು ರೋಗಿಗಳು ಸಂಚಾರ ನಡೆಸುತ್ತಾರೆ.

ಶಿವಮೊಗ್ಗದಿಂದ ಹೊರಡುವ ಕೆಎಸ್ಆರ್‌ಟಿಸಿ ಮಿನಿ ಬಸ್‌ಗಳು ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಉಡುಪಿಯನ್ನು ತಲುಪುತ್ತವೆ. ಕರಾವಳಿ-ಮಲೆನಾಡು ಸಂಪರ್ಕಿಸುವ ಈ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿ ಜನರು ಪ್ರಯಾಣಿಸಬಹುದಾಗಿದೆ.

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ

ಮೊಬೈಲ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಶಿವಮೊಗ್ಗ- ಉಡುಪಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ ನೂರಾರು ಜನರು ಪ್ರಯಾಣ ಮಾಡುತ್ತಾರೆ. ಬಸ್‌ಗಳಲ್ಲಿ ಉಡುಪಿಗೆ ಸೀಟು ಪಡೆಯಲು ಸಾಹಸ ಪಡೆಬೇಕು.

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲುಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲು

KSRTC Bus

ಕೆಎಸ್ಆರ್‌ಟಿಸಿ ರಾಜಹಂಸ, ಸ್ಲೀಪರ್, ಐರಾವತ ಮುಂತಾದ ಐಷಾರಾಮಿ ಬಸ್‌ಗಳಲ್ಲಿ ಮಾತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯವಿತ್ತು. ಈಗ ಎಕ್ಸ್‌ಪ್ರೆಸ್ ಬಸ್‌ಗಳಲ್ಲೂ ಮುಂಗಡ ಸೀಟು ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರಿಗಿದೆ ಸ್ಪೆಷಲ್ ವ್ಯವಸ್ಥೆಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರಿಗಿದೆ ಸ್ಪೆಷಲ್ ವ್ಯವಸ್ಥೆ

ಶಿವಮೊಗ್ಗ-ಉಡುಪಿ ನಡುವೆ ಪ್ರತಿದಿನ 21 ಕೆಎಸ್ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸುತ್ತವೆ. ಬಸ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳಿಗೆ ತೊಂದರೆ ಉಂಟಾಗಿತ್ತು. ಸರ್ಕಾರಿ ಬಸ್‌ನಲ್ಲಿ ಸೀಟು ಸಿಗದೆ ಖಾಸಗಿ ಬಸ್‌ಗೆ ಹೆಚ್ಚಿನ ಹಣ ನೀಡಿ ಪ್ರಯಾಣಿಸಬೇಕಿತ್ತು.

ಮಣಿಪಾಲದ ಆಸ್ಪತ್ರೆಗೆ ತೆರಳುವ ರೋಗಿಗಳು ಎಂದು ಪ್ರಯಾಣ ಮಾಡಬೇಕು ಎಂಬುದನ್ನು ಮೊದಲೇ ತಿಳಿದು ಆನ್‌ಲೈನ್ ಮೂಲಕ ಸೀಟು ಕಾಯ್ದಿರಿಸಬಹುದಾಗಿದೆ.

English summary
Now people can book advance ticket in Shivamogga-Udupi KSRTC bus. This facility will help for the patients who travel to Manipal hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X