ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

|
Google Oneindia Kannada News

ಶಿವಮೊಗ್ಗ, ಜನವರಿ 23: ಹುಣಸೋಡು ಜಿಲೆಟಿನ್ ಸ್ಪೋಟ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಮೇಲ್ನೋಟಕ್ಕೆ 5 ಎಂದು ಹೇಳಲಾದರೂ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಸ್ಪೋಟದಲ್ಲಿ ಸಾವನ್ನಪ್ಪಿದ ಮೂವರ ಮೃತ ದೇಹವನ್ನು ಪತ್ತೆಹಚ್ಚಲಾಗಿದ್ದು, ಜೊತೆಗೆ ಇನ್ನೂ ಮೂವರ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ಗ್ರಾಮಸ್ಥರು ಹೇಳಿರುವ ಕಾರಣದಿಂದಾಗಿ ಈ ಘಟನೆಯಲ್ಲಿ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ

ಮಂಜುನಾಥ್(38), ಪ್ರವೀಣ(40) ಇಬ್ಬರ ಮೃತದೇಹ ಪತ್ತೆ ಹಚ್ಚಲಾಗಿದ್ದು, ಇಬ್ಬರೂ ಸಹ ಭದ್ರಾವತಿ ಮೂಲದ ಅಂತರಗಂಗೆಯ ಬಸವನಾಳ ಗ್ರಾಮಸ್ಥರು ಎಂದು ತಿಳಿದುಬಂದಿದೆ. ಬಸವನಾಳ ಗ್ರಾಮಸ್ಥರ ಪ್ರಕಾರ ನಿನ್ನೆ ಒಟ್ಟು ಐವರು ಗಣಿಗಾರಿಕೆಗೆ ಬಂದಿದ್ದರು ಎನ್ನುತ್ತಿದ್ದು, ಇಬ್ಬರ ಮೃತದೇಹ ಮಾತ್ರ ಪತ್ತೆಹಚ್ಚಲಾಗಿದೆ.

Shivamogga Blast: Possibility Of Increasing Deaths In The Site

ಇನ್ನೂ ಮೂವರ ಮೃತದೇಹ ಎಲ್ಲೆಲ್ಲಿ ಛಿದ್ರವಾಗಿದೆಯೋ ಅಥವಾ ಅವರು ಬದುಕಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಮೂವರ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ ಎಂದಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ತೆಗೆದುಕೊಂಡು ಹೋಗಿದ್ದು, ಮೃತದೇಹವನ್ನು ಪರೀಕ್ಷೆಗೆಂದು ಒಂದು ಚೀಲದಲ್ಲಿ ಮೃತದೇಹ ತಂದಿದ್ದಾರೆ. ಚೀಲದಲ್ಲಿ ತುಂಬಿದ ಮೃತ ದೇಹವು ಗುರುತಿಸಲು ಆಗುತ್ತಿಲ್ಲ. ಚೀಲದಲ್ಲಿ ಬಂದ ಮೃತದೇಹ ಯಾವ ದೇಹದ ಅಂಗಾಂಗವೋ ತಿಳಿಯದ್ದಾಗಿದೆ. ಭದ್ರಾವತಿ ಮೂಲದವರದ್ದಾ ಅಥವಾ ಹೊರ ರಾಜ್ಯದಿಂದ ಬಂದವರದ್ದಾ ಎಂದು ತಿಳಿಯಬೇಕಿದೆ.

Shivamogga Blast: Possibility Of Increasing Deaths In The Site

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.

ಇಲ್ಲಿ ಕಲ್ಲು ಗಣಿಗಾರಿಕೆ ಅಧಿಕೃತವಾಗಿ ನಡೆಯುತ್ತಿತ್ತೇ ಅಥವಾ ಅನಧಿಕೃತವಾಗಿತ್ತೆ ಎಂಬ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಲೋಪದೋಷಗಳನ್ನು ಪತ್ತೆಹಚ್ಚಲಾಗುವುದು ಎಂದು ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಗಣಿಗಾರಿಕೆಗೆ ಸ್ಫೋಟಕ ಎಲ್ಲಿಂದ ಬಂತು, ಇದಕ್ಕೆ ಪರವಾನಿಗೆ ಇತ್ತಾ, ಸ್ಫೋಟಕ ಸಾಗಣಿಕೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂಬ ಕುರಿತು ಪರಿಶೀಲನೆ ನಡೆಸಲಾಗುವುದು ಎಂಬ ಹೇಳಿಕೆಗಳನ್ನು ಸ್ಥಳಕ್ಕೆ ಬಂದ ಎಲ್ಲರೂ ಹೇಳಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನ್ಯಾಯಯುತವಾಗಿ ತನಿಖೆ ಆಗುತ್ತದೆ ಎಂಬ ಮಾತು ಗ್ರಾಮಸ್ಥರದ್ದಾಗಿದೆ.

ಭೂಕಂಪನವೋ ಅಥವಾ ಸ್ಪೋಟದ ಹೊಡೆತವೋ ಎಂಬ ಗೊಂದಲದಲ್ಲಿ ಶಿವಮೊಗ್ಗ ಜನತೆ ಇದ್ದಾರೆ. ರಾಜಕೀಯ ನಾಯಕರು ಹೇಳಿದ್ದು ಸರಿಯೇ? ಭೂತಜ್ಞರು ಹೇಳುವುದು ಸರಿಯೇ? ಇದು ಅಕ್ರಮವೇ, ಸಕ್ರಮವೇ ಎಂಬ ಸಂದಿಗ್ಧತೆಯಲ್ಲಿ ಜನರಿದ್ದಾರೆ.

ಸತ್ಯ ನಿಜಕ್ಕೂ ಹೊರ ಬರುತ್ತದೆಯೇ ಅಥವಾ ತನಿಖೆಯ ಹೆಸರಿನಲ್ಲಿ ಒಳಗೆ ಮುಚ್ಚಿ ಹಾಕುತ್ತಾರೆಯೇ, ಟನ್ ಗಟ್ಟಲೆ ಸ್ಫೋಟಕ ವಸ್ತುಗಳು ನಗರದ ಮಧ್ಯದಿಂದ ಅಕ್ರಮ ದಂಧೆ ಸ್ಥಳಕ್ಕೆ ಹೇಗೆ ಬಂತು? ಎಂಬ ಪ್ರಶ್ನೆ ಮೂಡಿದೆ.

ನಿಜಕ್ಕೂ ಇಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ. ಒಂದು ಭೂ ಮತ್ತು ಗಣಿ ಇಲಾಖೆ, ಮತ್ತೊಂದು ಪೊಲೀಸ್ ಹಾಗೂ ಚೆಕ್ ಪೋಸ್ಟ್ ಗಳ ನಿರ್ಲಕ್ಷ್ಯವಾಗಿದೆ. ಅಬ್ಬಲಗೆರೆ ಸುತ್ತಮುತ್ತ ಐವತ್ತಕ್ಕೂ ಹೆಚ್ಚು ಅಕ್ರಮ ಜಲ್ಲಿ ಕ್ರಷರ್ ಗಳಿವೆ. ಭವಿಷ್ಯದಲ್ಲಿ ಇವು ಪರಿಸರ ಹಾಗೂ ಜಲಾಶಯಗಳಿಗೆ ಕಂಟಕವಾಗಿ ಪರಿಣಮಿಸಲಿವೆ ಎಂಬುದು ಸಾರ್ವಜನಿಕರ

English summary
Although the death toll in the Hunasodu gelatin explosion is likely to be 5, the death toll is likely to increase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X