ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರಲಿಲ್ಲ ಅಮಿತ್ ಶಾ, ಬಿಜೆಪಿ ಸಮಾವೇಶ ರದ್ದು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

Recommended Video

Karnataka Elections 2018 : ಶಿವಮೊಗ್ಗದಲ್ಲಿ ಅಮಿತ್ ಶಾರ ಸಮಾವೇಶ ರದ್ದು | Oneindia Kannada

ಶಿವಮೊಗ್ಗ, ಮಾರ್ಚ್ 11: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆಗಮಿಸದ ಕಾರಣ ಇಂದು ಕೂಡಲಸಂಗಮದಲ್ಲಿ ನಡೆಯಬೇಕಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ರದ್ದಾಗಿದೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, 'ರಾಜ್ಯಸಭಾ ಚುನಾವಣೆ ಇರುವ ಕಾರಣ ಅಮಿತ್ ಶಾ ಅವರು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಹಾಗಾಗಿ ಕಾರ್ಯಕ್ರಮ ಮುಂದೂಡಲಾಗಿದೆ ಹೊಸ ದಿನಾಂಕ ಪ್ರಕಟಿಸಲಾಗುವುದು' ಎಂದರು.

ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್

ಇಂದು ಕೂಡಲಸಂಗಮದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಯಲು ಯೋಜಿಸಲಾಗಿತ್ತು, ಎರಡು ವಾರಗಳ ಹಿಂದೆಯೇ ಈ ಬಗ್ಗೆ ಈಶ್ವರಪ್ಪ ಅವರು ಮಾಹಿತಿ ನೀಡಿದ್ದರು, ಈ ಕಾರ್ಯಕ್ರಮವನ್ನು ಅಮಿತ್ ಶಾ ಅವರೇ ಉದ್ಘಾಟಿಸುವುದಾಗಿಯೂ ನಿಶ್ಚಯವಾಗಿತ್ತು, ಆದರೆ ಅನಿವಾರ್ಯ ಕಾರಣದಿಂದ ಅಮಿತ್ ಶಾ ಅವರು ಬರದ ಕಾರಣ ಕಾರ್ಯಕ್ರಮ ಮುಂದಕ್ಕೆ ಹೋಗಿದೆ.

ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ

ಕೇಂದ್ರ ಮಂತ್ರಿಗಳು ಬೇಡ

ಕೇಂದ್ರ ಮಂತ್ರಿಗಳು ಬೇಡ

'ಸಮಾವೇಶಕ್ಕೆ ಕೇಂದ್ರ ಮಂತ್ರಿಗಳನ್ನು ಕಳಿಹಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು ಆದರೆ ಅವರೇ ಬರಬೇಕೆಂಬ ಕಾರಣದಿಂದ ಕಾರ್ಯಕ್ರಮ ರದ್ದು ಮಾಡಿದೆವು ಅವರು ದಿನಾಂಕ ನೀಡಿದ ನಂತರವೇ ಕಾರ್ಯಕ್ರಮ ನಡೆಸಲಾಗುವುದು ಎಂದು ಈಶ್ವರಪ್ಪ ಹೇಳಿದರು.

ಶಾ ಬಂದ ದಿನವೇ ಕಾರ್ಯಕ್ರಮ

ಶಾ ಬಂದ ದಿನವೇ ಕಾರ್ಯಕ್ರಮ

ಹಿಂದುಳಿದ ವರ್ಗಗಳ ಜವಾಬ್ದಾರಿಯನ್ನು ಈಶ್ವರಪ್ಪ ಅವರಿಗೆ ನೀಡಿದ್ದು, ಅಮಿತ್ ಶಾ ಅವರ ಮುಂದೆ ಶಕ್ತಿ ಪ್ರದರ್ಶನ ಮಾಡುವ ಹುಮ್ಮಸ್ಸಿನಿಲ್ಲಿರುವ ಈಶ್ವರಪ್ಪ, ಅಮಿತ್ ಶಾ ಅವರೇ ಕಾರ್ಯಕ್ರಮ ನಡೆಸಿರೆಂದರೂ ತಾವೇ ಬರಬೇಕೆಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ.

ಟಿಕೆಟ್, ಪಕ್ಷದ ತೀರ್ಮಾನ

ಟಿಕೆಟ್, ಪಕ್ಷದ ತೀರ್ಮಾನ

ಶೀರೂರು ಶ್ರೀಗಳು ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ಬರುತ್ತಿರುವ ಬಗ್ಗೆ ಮಾತನಾಡಿದ ಈಶ್ವರಪ್ಪ ಅವರು, 'ಶೀರೂರು ಶ್ರೀಗಳ ಬಗ್ಗೆ ಅಪಾರ ಗೌರವ ಇದ್ದು, ನಾನು ಅವರ ನಿರ್ಣಯದ ಬಗ್ಗೆ ಗೌರವ ಹೊಂದಿದ್ದೇನೆ, ಆದರೆ ಅವರಿಗೆ ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್‌ನ ನಿರ್ಣಯ' ಎಂದರು.

ಲೋಕಾಯುಕ್ತ ಕೊಲೆಗೆ ಯತ್ನ

ಲೋಕಾಯುಕ್ತ ಕೊಲೆಗೆ ಯತ್ನ

ರಾಜ್ಯದಲ್ಲಿ ಇರುವುದು ತುಘಲಕ್ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಈಶ್ವರಪ್ಪ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಲೋಕಾಯುಕ್ತರ ಹತ್ಯೆಗೆ ಯತ್ನ ಮಾಡಲಾಗಿದೆ, ಸಾಮಾನ್ಯರಿಗೆ ಭದ್ರತೆ ಇಲ್ಲದಂತಾಗಿದೆ' ಎಂದರು.

'ಸಿದ್ದರಾಮಯ್ಯ ಅವರನ್ನು ಯಾರಾದರೂ ಕೊಲೆ ಮಾಡುತ್ತಾರೆ ಎಂಬ ಭಯ ನನಗೆ''ಸಿದ್ದರಾಮಯ್ಯ ಅವರನ್ನು ಯಾರಾದರೂ ಕೊಲೆ ಮಾಡುತ್ತಾರೆ ಎಂಬ ಭಯ ನನಗೆ'

English summary
BJP national president Amit Shah not able to come to BJP's backward caste rally so Karnataka BJP canceled the rally. Eshwarappa said when Amit Shah is free we arrange the its important to Amit Shah to be in the rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X