ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಭಿನ್ನಮತದ ಹೊರತಾಗಿಯೂ ಮೇಯರ್ ಸ್ಥಾನ ಉಳಿಸಿಕೊಂಡ ಬಿಜೆಪಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 29: ಶಿವಮೊಗ್ಗ ನಗರದ ಮಹಾನಗರ ಪಾಲಿಕೆಯ ಎರಡನೇ ಅವಧಿಗೆ ನಡೆದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳು ಭಾರಿ ಪೈಪೋಟಿ ನಡೆಸಿದ್ದು, ಭಿನ್ನಮತದ ಹೊರತಾಗಿಯೂ ಮೇಯರ್ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದೆ.

ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕಾಗಿ ಇಬ್ಬರು ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬೆಳಿಗ್ಗೆ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಿನ್ನಮತ ಪರಿಹರಿಸಲಾಗಿತ್ತು. ಹೀಗಾಗಿ ಅದೃಷ್ಟಬಲದ ಮೇಲೆ ಕಣಕ್ಕಿಳಿದಿದ್ದ ಕಾಂಗ್ರೆಸ್ ಗೆ ನಿರಾಸೆಯಾಗಿದೆ.

ಯುಪಿಎಸ್ಸಿ ನೇಮಕಾತಿ 2020: 134 ಹುದ್ದೆಗಳಿಗೆ ಅರ್ಜಿ ಆಹ್ವಾನ ಯುಪಿಎಸ್ಸಿ ನೇಮಕಾತಿ 2020: 134 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಿಜೆಪಿ ಅಭ್ಯರ್ಥಿ ಸುವರ್ಣಾ ಶಂಕರ್ ಮೇಯರ್ ಆಗಿ ಆಯ್ಕೆ: ಶಿವಮೊಗ್ಗ ಮಹಾ ನಗರ ಪಾಲಿಕೆಯ ಬಿಜೆಪಿ ಸದಸ್ಯೆಯಾದ ಸುವರ್ಣಾ ಶಂಕರ್ ಪರವಾಗಿ 26 ಮತಗಳು ಚಲಾವಣೆಯಾಗಿದ್ದು ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿ ಯಮುನಾ ರಂಗೇಗೌಡ ಪರವಾಗಿ 12 ಮತಗಳು ಚಲಾವಣೆಯಾಗಿದೆ. ಹೆಚ್ಚಿನ ಮತ ಪಡೆದ ಬಿಜೆಪಿಯ ಸುವರ್ಣಾ ಶಂಕರ್ ಶಿವಮೊಗ್ಗದ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

BJP Retains Mayor Position Despite Differences In Shivamogga

ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಆಗಿ ಸುರೇಖಾ ಮುರುಳೀಧರ್ ಆಯ್ಕೆ: ಶಿವಮೊಗ್ಗ ಮಹಾನಗರ ಪಾಲಿಕೆಯ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸುರೇಖಾ ಪರವಾಗಿ 26 ಮತಗಳ ಚಲಾವಣೆಯಾಗಿದ್ದು, ಕಾಂಗ್ರೆಸ್ ನ ಮೆಹಕ್ ಶರೀಫ್ ವಿರುದ್ಧ ಸುರೇಖಾ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಮೆಹಕ್ ಷರೀಫ್ ಪರವಾಗಿ 12 ಮತಗಳ ಚಲಾವಣೆಯಾಗಿದ್ದವು. ಹೀಗಾಗಿ ಬಿಜೆಪಿಯ ಸುರೇಖಾ ಮುರುಳೀಧರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

English summary
BJP Retains Mayor Position Despite Differences In Shivamogga for the second term of the mayor election in shivamogga,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X