ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡಾನೆ, ಮಂಗವನ್ನು ಮನೆಯಲ್ಲಿ ಸಾಕಿಕೊಳ್ಳಲಿ; ರಾಘವೇಂದ್ರ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 22 : "ಪರಿಸರವಾದಿಗಳಿಗೆ ಕಾಡು ಪ್ರಾಣಿಗಳ ಬಗ್ಗೆ ಅಷ್ಟು ಪ್ರತಿ ಇದ್ದರೆ ತಮ್ಮ ಮನೆಗಳಲ್ಲಿ ಕಾಡಾನೆ, ಕಾಡುಕೋಣ, ಮಂಗಗಳನ್ನು ಸಾಕಿಕೊಳ್ಳಲಿ" ಎಂದು ಶಿವಮೊಗ್ಗ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಮಂಗಳವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮಳೆಹಾನಿ ಕುರಿತು ಅವರು ಪರಿಶೀಲನೆ ನಡೆಸಿದರು. ಮಂಕಿ ಪಾರ್ಕ್ ಬಗ್ಗೆ ಪರಿಸರವಾದಿಗಳ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು.

ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ

"ಪರಿಸರವಾದಿಗಳ ನೀತಿ ಸರಿ ಇದೆ. ಆದರೆ, ಪರಿಸರ, ಪ್ರಾಣಿಗಳ ಬಗ್ಗೆ ಅವರಿಗೆ ಕಾಳಜಿ ಇದ್ದರೆ ತಮ್ಮ ಮನೆಗಳಲ್ಲಿಯೂ ಕೂಡ ಕಾಡಾನೆ, ಕಾಡು ಕೋಣ, ಮಂಗಗಳನ್ನು ಒಂದೊಂದು ಸಾಕಿಕೊಳ್ಳಲಿ" ಎಂದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...

BJP MP BY Raghavendra On Monkey Park In Shivamogga

"ಕಾಡು ಪ್ರಾಣಿಗಳು ಬೆಳೆಗಳನ್ನು ಹಾಳು ಮಾಡುತ್ತಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ರೈತರು ಮಂಕಿ ಪಾರ್ಕ್ ನಿರ್ಮಾಣ ಮಾಡಲು ಮನವಿ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಂದು ಮಂಕಿ ಪಾರ್ಕ್ ನಿರ್ಮಾಣ ಮಾಡುವ ಕುರಿತು ಚರ್ಚಿಸಲು ನವೆಂಬರ್ 5 ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ" ಎಂದರು.

ವಿಡಿಯೋ: ಇದಪ್ಪ ತಾಕತ್ತು! ಪೊಲೀಸನ ತಲೆ ಹತ್ತಿ ಹೇನು ಆರಿಸಿದ ಕೋತಿವಿಡಿಯೋ: ಇದಪ್ಪ ತಾಕತ್ತು! ಪೊಲೀಸನ ತಲೆ ಹತ್ತಿ ಹೇನು ಆರಿಸಿದ ಕೋತಿ

"ಅಸ್ಸಾಂ ರಾಜ್ಯದಲ್ಲಿ ಇದೆ ರೀತಿ ಒಂದು ಮಂಕಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದರ ಪರಿಶೀಲನೆಗೆ ತಂಡವನ್ನು ಕಳುಹಿಸಲಾಗುವುದು. ದ್ವೀಪದ ಪ್ರದೇಶದಲ್ಲಿ ಮಂಗಳನ್ನು ಬಿಟ್ಟು ಆಹಾರವನ್ನು ಪೂರೈಕೆ ಮಾಡಲಾಗುವುದು. ರೈತರ ಹಿತಕ್ಕಾಗಿ ಈ ರೀತಿಯ ಯೋಜನೆ ರೂಪಿಸಲಾಗುದು" ಎಂದು ಬಿ. ವೈ. ರಾಘವೇಂದ್ರ ವಿವರಣೆ ನೀಡಿದರು.

English summary
Environmentalist opposed to set up monkey park in Shivamogga. BJP MP B.Y. Raghavendra claimed that it will help the farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X