ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆಯಲ್ಲಿ ಬಿಜೆಪಿಯವರೇ ನನಗೆ ಸಹಾಯ ಮಾಡಿದ್ದಾರೆ: ಬಾಂಬ್ ಸಿಡಿಸಿದ ಮಧು ಬಂಗಾರಪ್ಪ

|
Google Oneindia Kannada News

Recommended Video

Shimoga: ಬಿಜೆಪಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಧು ಬಂಗಾರಪ್ಪ | Oneindia Kannada

ಶಿವಮೊಗ್ಗ, ಏ 25: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯಡಿಯೂರಪ್ಪನವರ ಪುತ್ರನ ವಿರುದ್ದ ಗೆಲ್ಲುವ ಖಚಿತ ಭರವಸೆಯಲ್ಲಿರುವ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ, ಬಿಜೆಪಿ ವಿರುದ್ದ ಕಿಡಿಕಾರುತ್ತಾ, ತಮ್ಮ ಚುನಾವಣಾ ಅನುಭವವನ್ನು ಹಂಚಿಕೊಂಡಿದ್ದಾರೆ.

ಯಡಿಯೂರಪ್ಪನವರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಏನೂ ಮಾಡಬೇಕಾಗಿಲ್ಲ, ಅದನ್ನು ಅವರದೇ ಪಕ್ಷದ ಮುಖಂಡರು ಮಾಡುತ್ತಾರೆ. ನಾವೇನೂ ಅದಕ್ಕೆ ವಿಶೇಷ ಪರಿಶ್ರಮ ಪಡಬೇಕಾಗಿಲ್ಲ ಎಂದಿದ್ದಾರೆ.

'ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ''ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ'

ಮೇ 23ರಂದು ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಬಹಳಷ್ಟು ಮಾತನಾಡುವುದಿದೆ, ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಎಳೆದುತಂದ ಬಿಜೆಪಿ ಮುಖಂಡರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಡಿಕೆಶಿ ಬ್ರದರ್ಸ್ ಮಿಂಚಿನ ಸಂಚಾರ: ಯಡಿಯೂರಪ್ಪ ತಲ್ಲಣಶಿವಮೊಗ್ಗದಲ್ಲಿ ಡಿಕೆಶಿ ಬ್ರದರ್ಸ್ ಮಿಂಚಿನ ಸಂಚಾರ: ಯಡಿಯೂರಪ್ಪ ತಲ್ಲಣ

ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಹೇಳುತ್ತೇನೆ, ಈ ಚುನಾವಣೆಯಲ್ಲಿ ಬಿಜೆಪಿಯ ಮುಖಂಡರೇ ನನಗೆ ಸಹಾಯ ಮಾಡಿದ್ದಾರೆ ಎನ್ನುವ ಹೊಸ ಬಾಂಬ್ ಅನ್ನು ಮಧು ಬಂಗಾರಪ್ಪ ಎಸೆದಿದ್ದಾರೆ. ಕುಮಾರ್ ಬಂಗಾರಪ್ಪ ಒಬ್ಬ ಸಾಕು, ಮಧು ವಾಗ್ದಾಳಿಯ ಹೈಲೆಟ್ಸ್..

ಒಬ್ಬೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಕೆಲಸ ಮಾಡಿದ್ದಾರೆ

ಒಬ್ಬೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಕೆಲಸ ಮಾಡಿದ್ದಾರೆ

ಕಳೆದ ಉಪಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಚುನಾವಣೆಯಲ್ಲಿ ಶೇ. ಹನ್ನೊಂದರಷ್ಟು ಹೆಚ್ಚಿನ ಮತದಾನವಾಗಿದೆ. ಇದರಲ್ಲಿ ಶೇ. 0.5ರಷ್ಟು ಮತಗಳು ಮಾತ್ರ ಬಿಜೆಪಿಗೆ ಹೋಗುತ್ತೆ. ಬರೆದಿಟ್ಟುಕೊಳ್ಳಿ ಮಿಕ್ಕ ಎಲ್ಲಾ ಹೆಚ್ಚುವರಿ ಮತಗಳು ನನಗೆ ಬೀಳುತ್ತದೆ. ಒಬ್ಬೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಕೆಲಸ ಮಾಡಿದ್ದಾರೆ - ಮಧು ಬಂಗಾರಪ್ಪ.

ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ನನಗೆ ಸಹಾಯ ಮಾಡಿದ್ದಾರೆ

ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ನನಗೆ ಸಹಾಯ ಮಾಡಿದ್ದಾರೆ

ಯಡಿಯೂರಪ್ಪನವರನ್ನು ಸೋಲಿಸಲು ಹೆಚ್ಚಿನ ಪರಿಶ್ರಮ ಪಡಬೇಕಾಗಿಲ್ಲ. ಹೋರಾಟದ ಹಾದಿಯಿಂದ ಬಂದವರು ಅವರು, ಹೆಚ್ಚಿಗೆ ಹೇಳಲು ಹೋಗುವುದಿಲ್ಲ. ಪಕ್ಷದೊಳಗಿನ ಅವರ ಮುಖಂಡರೇ ಅವರನ್ನು ರಾಜಕೀಯವಾಗಿ ಮುಗಿಸುತ್ತಾರೆ. ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ನನಗೆ ಸಹಾಯ ಮಾಡಿದ್ದಾರೆ. ಅವರು ಯಾರು ಎನ್ನುವುದು ಮುಂದಿನ ದಿನಗಳಲ್ಲಿ ರಾಜ್ಯದ ಜನತೆಗೆ ಗೊತ್ತಾಗಲಿದೆ - ಮಧು ಬಂಗಾರಪ್ಪ.

ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರರ ನಡುವೆ ಕದನ: ಗೆಲುವು ಯಾರಿಗೆ?ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರರ ನಡುವೆ ಕದನ: ಗೆಲುವು ಯಾರಿಗೆ?

ಅಪ್ಪಾಜಿ ಗೌಡ್ರು, ಸಂಗಮೇಶ್ ಒಂದಾಗಿದ್ದು ನನಗೆ ವಿಶೇಷ ಬಲತಂದಿತ್ತು

ಅಪ್ಪಾಜಿ ಗೌಡ್ರು, ಸಂಗಮೇಶ್ ಒಂದಾಗಿದ್ದು ನನಗೆ ವಿಶೇಷ ಬಲತಂದಿತ್ತು

ಅಪ್ಪಾಜಿ ಗೌಡ್ರು, ಸಂಗಮೇಶ್ ಒಂದಾಗಿದ್ದು ನನಗೆ ವಿಶೇಷ ಬಲತಂದಿತ್ತು. ಇನ್ನು, ಕಾಗೋಡು ಸಾಹೇಬ್ರು ಮೈತ್ರಿ ಪರವಾಗಿ ನಿಂತರು. ಎಂಟು ವಿಧಾನಸಭಾ ವ್ಯಾಪ್ತಿಯ ಎಲ್ಲಾ ಕಡೆಯೂ ನನಗೆ ಲೀಡ್ ಸಿಗಲಿದೆ. ಉತ್ತಮ ಅಂತರದಿಂದ ಗೆಲ್ಲುತ್ತೇನೆ ಎನ್ನುವುದು ನನ್ನ ಮತ್ತು ಮೈತ್ರಿ ಪಕ್ಷದ ಕಾರ್ಯಕರ್ತರ, ಮುಖಂಡರ ಖಚಿತ ವಿಶ್ವಾಸ - ಮಧು ಬಂಗಾರಪ್ಪ.

ಕುಮಾರ್ ಬಂಗಾರಪ್ಪ ಹೇಳಿಕೆಯಿಂದ ನನಗೆ ಇನ್ನಷ್ಟು ವೋಟ್ ಬರುವುದು ಗ್ಯಾರಂಟಿ

ಕುಮಾರ್ ಬಂಗಾರಪ್ಪ ಹೇಳಿಕೆಯಿಂದ ನನಗೆ ಇನ್ನಷ್ಟು ವೋಟ್ ಬರುವುದು ಗ್ಯಾರಂಟಿ

ಬಿಜೆಪಿಗೆ ಶಿವಮೊಗ್ಗದಲ್ಲಿ ಒಳ್ಳೆಯ ವಕ್ತಾರರು ಸಿಕ್ಕಿದ್ದಾರೆ. ಸೊರಬ ಕ್ಷೇತ್ರದ ಶಾಸಕರ (ಕುಮಾರ್ ಬಂಗಾರಪ್ಪ) ಹೇಳಿಕೆಯಿಂದ ನನಗೆ ಇನ್ನಷ್ಟು ವೋಟ್ ಬರುವುದು ಗ್ಯಾರಂಟಿ. ಬೇಡವಾದ ವಿಚಾರವನ್ನು ಚುನಾವಣೆಯ ವೇಳೆ ಪ್ರಸ್ತಾವಿಸಿದ ಕುಮಾರ್ ಗೆ ಮತದಾರ ಒಳ್ಳೆಯ ಪಾಠವನ್ನು ಕಲಿಸಲಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಸವಿಸ್ತಾರವಾಗಿ ಎಲ್ಲವನ್ನೂ ಬಿಡಿಸಿಡುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಕಂಡ ಕಂಡವರನ್ನೆಲ್ಲಾ ಅಪ್ಪ, ಅಣ್ಣ ಅನ್ನೋ ಮಧು: ಕುಮಾರ್ ಬಂಗಾರಪ್ಪ ವಾಗ್ದಾಳಿಕಂಡ ಕಂಡವರನ್ನೆಲ್ಲಾ ಅಪ್ಪ, ಅಣ್ಣ ಅನ್ನೋ ಮಧು: ಕುಮಾರ್ ಬಂಗಾರಪ್ಪ ವಾಗ್ದಾಳಿ

ಶಿವರಾಜ್ ಕುಮಾರ್ ಅವರ ಹೆಸರನ್ನು ಎಳೆದು ತಂದರು

ಶಿವರಾಜ್ ಕುಮಾರ್ ಅವರ ಹೆಸರನ್ನು ಎಳೆದು ತಂದರು

ಕೆಲವೊಂದು ವೈಯಕ್ತಿಕ ವಿಚಾರವನ್ನು ಬಿಜೆಪಿ ಮುಖಂಡರು ಚುನಾವಣೆಯ ವೇಳೆ ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ಅವರ ಹೆಸರನ್ನು ಎಳೆದು ತಂದರು, ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರವನ್ನೂ ಪ್ರಸ್ತಾವಿಸಿದರು. ಮುಖ್ಯಮಂತ್ರಿಗಳು ಮತ್ತು ಡಿ ಕೆ ಶಿವಕುಮಾರ್ ಅವರ ವಿಶೇಷ ಪ್ರಯತ್ನ, ನನ್ನನ್ನು ವಿಜಯೀಯನ್ನಾಗಿ ಮಾಡಲಿದೆ ಎನ್ನುವ ವಿಶ್ವಾಸವನ್ನು ಹೊಂದಿದ್ದೇನೆಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಬಿಎಸ್ ವೈ-ಡಿಕೆಶಿ ದೋಸ್ತಿ ಬೇರೆ, ಚುನಾವಣಾ ಅಖಾಡ ಬೇರೆ:ಮಧು ಬಂಗಾರಪ್ಪ ಬಿಎಸ್ ವೈ-ಡಿಕೆಶಿ ದೋಸ್ತಿ ಬೇರೆ, ಚುನಾವಣಾ ಅಖಾಡ ಬೇರೆ:ಮಧು ಬಂಗಾರಪ್ಪ

English summary
BJP leaders helped me during Loksabha elections: Shivamogga JDS candidate Madhu Bangarappa. He says, I am very confident to win this election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X